ಸುದ್ದಿಮೂಲ ವಾರ್ತೆ ಬೆಂಗಳೂರು,ಅ.18:
ರಾಜ್ಯದಲ್ಲಿ ಕೈಗೊಳ್ಳಲಾಗುತ್ತಿಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಗಡುವು ಶನಿವಾರಕ್ಕೆೆ ಮುಕ್ತಾಾಯವಾಗಿದ್ದು, ಗ್ರೇೇರ್ಟ ಬೆಂಗಳೂರು ಪ್ರಾಾಧಿಕಾರ ಹೊರತುಪಡಿಸಿದ ಜಿಲ್ಲೆಗಳಲ್ಲಿ ಶೇ.96.35ರಷ್ಟು ಪ್ರಗತಿಯಾಗಿದೆ.
ರಾಜ್ಯದಾದ್ಯಂತ ಒಟ್ಟು 1,48,14,286 ಮನೆಗಳ ಸಮೀಕ್ಷೆ ಗುರಿ ಇಟ್ಟುೂಂಡು ಸೆ.22ರಿಂದ ಸಮೀಕ್ಷೆ ಕೈಗೊಳ್ಳಲಾಗಿತ್ತು. ಈ ವರೆಗೆ 1,42,74,031 ಮನೆಗಳ ಸಮೀಕ್ಷೆ ಪ್ರಗತಿಯಾಗಿದೆ ಎಂದು ಸಮೀಕ್ಷೆ ನಡೆಸುತ್ತಿಿರುವ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಂಕಿಸಂಖ್ಯೆೆಗಳು ತಿಳಿಸಿವೆ.
ಈ ವರೆಗೆ ಒಟ್ಟು 5,29,63,614 ಜನಸಂಖ್ಯೆೆಯ ವೈಯಕ್ತಿಿಕ ಮಾಹಿತಿ ಸಂಗ್ರಹಿಸಲಾಗಿದೆ. ಇದು ಸರ್ಕಾರ ನೀಡಿದ ಅಂತಿಮ ಗಡುವಿನೊಳಗೆ ಉತ್ತಮ ಪ್ರಗತಿಯಾಗಿದೆ ಎಂದು ಹೇಳಿದೆ.
ಈ ಮಧ್ಯೆೆ ಕೊಪ್ಪಳದಲ್ಲಿ ಮಾತನಾಡಿರುವ ಹಿಂದುಳಿದ ವರ್ಗಗಳ ಕಲ್ಯಾಾಣ ಸಚಿವ ಶಿವರಾಜ ತಂಗಡಗಿ, ಸಮೀಕ್ಷೆ ವಿಚಾರವಾಗಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಭಾನುವಾರ ಸಭೆ ಕರೆದಿದ್ದಾರೆ. ಅಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸುಧಾ ಮೂರ್ತಿ ಅವರು ಸಮೀಕ್ಷೆಯಲ್ಲಿ ಭಾಗವಹಿಸದಿರುವ ವಿಚಾರದ ಬಗ್ಗೆೆ ಪ್ರತಿಕ್ರಿಿಯೆ ನೀಡಿದ ಸಚಿವ ತಂಗಡಗಿ, ಇದು ಹಿಂದುಳಿದ ವರ್ಗಗಳ ಸಮೀಕ್ಷೆ ಎಂದು ಸುಧಾ ಮೂರ್ತಿ ಅವರೇ ಹೇಳಿದ್ದಾರೆ. ಬ್ರಾಾಹ್ಮಣ ಸಮುದಾಯದಲ್ಲಿ ಬಡವರ ಇಲ್ವಾಾ? ಅವರ ಮಾಹಿತಿ ಸರ್ಕಾರಕ್ಕೆೆ ಬೇಡವೇ? ಸುಧಾ ಮೂರ್ತಿ, ಪ್ರಲ್ಹಾಾದ್ ಜೋಶಿ ಅವರು ಸಮೀಕ್ಷೆ ವಿಲ ಮಾಡಲು ಹೊರಟಿದ್ದಾರೆ. ಜನ ಬುದ್ದಿವಂತರಿದ್ದಾರೆ ಎಂದು ತಿರುಗೇಟು ನೀಡಿದರು.
ಗ್ರೇೇರ್ಟ ಬೆಂಗಳೂರು ವ್ಯಾಾಪ್ತಿಿ:
ಈ ಮಧ್ಯೆೆ ಗ್ರೇೇರ್ಟ ಬೆಂಗಳೂರು ಪ್ರಾಾಧಿಕಾರದ ವ್ಯಾಾಪ್ತಿಿಯಲ್ಲಿ ಶೇ. 39.76ರಷ್ಟು ಪ್ರಗತಿಯಾಗಿದೆ. ಒಟ್ಟು 39,82,335 ಮನೆಗಳ ಸಮೀಕ್ಷೆ ಗರಿ ಇದೆ. ಈ ಪೈಕಿ 17,84,312 ಮನೆಗಳ ಸಮೀಕ್ಷೆ ನಡೆಸಲಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.