ಸುದ್ದಿಮೂಲ ವಾರ್ತೆ ದೇವದುರ್ಗ, ಡಿ.15
ತಾಲೂಕಿನ ಹಲವೆಡೆ ಮಂಗಳವಾರ ದಂದು ಬೆಳಿಗ್ಗೆೆ 10:00 ಗಂಟೆಯಿಂದ ಸಾಯಂಕಾಲ 05:00 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಕೆ.ವಿ ಬ್ಯಾಾಂಕ್ 01 ಮತ್ತು ಬ್ಯಾಾಂಕ್ 02ರ ಸ್ವೀಚ್ಗೇರ್ಗಳ ರಿಪೇರಿ ತುರ್ತು ಕೆಲಸ ಇರುವುದರಿಂದ ಹಾಗೂ ಪರಿವರ್ತಕಗಳ ಇತರೆ ಉಪಕರಣಗಳ ಉಸ್ತುವಾರಿ ನಿರ್ವಹಣೆ ಕಾರ್ಯ ಹಮ್ಮಿಿಕೊಳ್ಳಲಾಗಿದೆ. ಸದರಿ ದಿನಾಂಕ:16/12/2025 ಮಂಗಳವಾರ ದಂದು ಬೆಳಿಗ್ಗೆೆ 10:00 ಗಂಟೆಯಿಂದ ಸಾಯಂಕಾಲ 05:00 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ. ಆದ್ದರಿಂದ ಎಲ್ಲಾ ವಿದ್ಯುತ್ ಗ್ರಾಾಹಕರು ಸಹಕರಿಸಲು ಕೋರಲಾಗಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು : 33 ಕೆ.ವಿ ಜಾಲಹಳ್ಳಿಿ : ಜಾಲಹಳ್ಳಿಿ, ಬುಂಕಲದೊಡ್ಡಿಿ, ಎರ ಗುಡ್ಡ. ಲಿಂಗದಹಳ್ಳಿಿ, ಹೆಚ್.ಸಿದ್ದಾಪುರ, ಚಿಂಚೋಡಿ, ಬಸ್ಸಾಾಪುರ, ಮತ್ತು ಸುತ್ತ ಮುತ್ತಲಿನ ಹಳ್ಳಿಿಗಳು.
33 ಕೆ.ವಿ ಕೊಪ್ಪರ: ಕೊಪ್ಪರ, ಅರಶಿಣಿಗಿ, ಕುರ್ಕಿಹಳ್ಳಿಿ, ರಾಮನಾಳ, ಗುಂಡುಗುರ್ತಿ, ಮತ್ತು ಸುತ್ತ ಮುತ್ತಲಿನ ಹಳ್ಳಿಿಗಳು.
33 6.2 ಡಿ ಅರಕೇರಾ, ಜುಟಮರಡಿ, ಮುಷ್ಟೂರು, ಪಿಲ್ಲಿಗುಂಡ, ಕ್ಯಾಾದಿಗೇರಾ, ಮಲ್ಲದೇವರಗುಡ್ಡ, ನಾಗಡದಿನ್ನಿಿ, ಜಿ.ಜಾಡಲದಿನ್ನಿಿ, ಮತ್ತು ಸುತ್ತ ಮುತ್ತಲಿನ ಹಳ್ಳಿಿಗಳು.
33 ಕೆ ವಿ. ಗಾಣದಾಳ : ಕಮಲದಿನ್ನಿಿ, ಕಕ್ಕಲದೊಡ್ಡಿಿ, ಮ್ಯಾಾಕಲದೊಡ್ಡಿಿ, ಸೋಮನಮರಡಿ, ಬಿ.ಆರ್ ಗುಂಡ, ಮತ್ತು ಸುತ್ತ ಮುತ್ತಲಿನ ಹಳ್ಳಿಿಗಳು.
33 ಕೆ.ವಿ ಕೆ.ಇರಬಗೇರಾ : ಕೆ.ಇರಬಗೇರಾ, ಕೊತ್ತದೊಡ್ಡಿಿ, ಹೆಮನೂರು, ಕೊತಿಗುಡ್ಡ, ಮಾನಸಗಲ್, ಕಾಟಮಳ್ಳಿಿ, ಬೆಂಚಮರಡಿ, ನಾರಾಯಣ ನಾಯ್ಕ ತಾಂಡ, ಮತ್ತು ಸುತ್ತ ಮುತ್ತಲಿನ ಹಳ್ಳಿಿಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ)ದೇವದುರ್ಗ ಪತ್ರಿಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

