ಸುದ್ದಿಮೂಲ ವಾರ್ತೆ ಹರಪನಹಳ್ಳಿ, ೆ.20:
ಇಂದು ಪಟ್ಟಣದಲ್ಲಿ ಬಂಜಾರ ಸಮುದಾಯದ ಕುಲ ಗುರುಗಳಾದ ಸಂತ ಶ್ರೀ ಸೇವಾಲಾಲ್ ಮಹಾರಾಜರ 287ನೇ ಜಯಂತಿ ಹಮ್ಮಿಿಕೊಳ್ಳಲಾಗಿದ್ದು ಹೆಚ್ಚಿಿನ ಮಟ್ಟದಲ್ಲಿ ಬಂಜಾರ ಸಮುದಾಯದವರು ಕಾರ್ಯಕ್ರಮದಲ್ಲಿ ಪಾಲ್ಗೊೊಂಡು ಯಶಸ್ವಿಿಗೊಳಿಸಲು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಿಕಾಗೋಷ್ಠಿಿ ನಡೆಸಿದ ಬಂಜಾರ ಸಮುದಾಯದ ಮುಖಂಡ ಡಾ. ರಮೇಶ್ ಕುಮಾರ್ ಕೋರಿದರು. ಪಟ್ಟಣದಲ್ಲಿ ಸಂತ ಸೇವಾಲಾಲರ ಜಯಂತಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿದ್ದು ಶನಿವಾರ ಬೆಳಿಗ್ಗೆೆ 10ಕ್ಕೆೆ ಮಾಜಿ ಸಚಿವ ಪಿಟಿ ಪರಮೇಶ್ವರ ನಾಯ್ಕ್ ಕಾರ್ಯಕ್ರಮಕ್ಕೆೆ ಚಾಲನೆ ನೀಡಲಿದ್ದು ಪಟ್ಟಣದ ಹರಿಹರ (ರಾಜ ಸೋಮಶೇಖರ ನಾಯಕ) ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಮೆರವಣಿಗೆ ಸಾಗಲಿದ್ದು ಮೆರವಣಿಗೆಯಲ್ಲಿ ಸಂತ ಸೇವಾಲಾಲ್ ಗುರುಗಳ ಭಾವಚಿತ್ರದೊಂದಿಗೆ ವಿವಿಧ ಜಾನಪದ ಕಲಾತಂಡಗಳು ಲಂಬಾಣಿ ಸಾಂಪ್ರದಾಯ ಮಹಿಳೆಯರ ನೃತ್ಯ ಡೊಳ್ಳು ಹಲಗೆ ಮೇಳ ಹಾಗೂ ಡಿಜೆ ಸಂಗೀತ ನಡೆಯಲಿದ್ದು. ಜಯಂತಿ ಕಾರ್ಯಕ್ರಮಕ್ಕೆೆ ತಾಲೂಕಿನ 56 ಲಂಬಾಣಿ ಹಟ್ಟಿಿಗಳಿಂದ ನಾಯಕ್. ಡಾವು. ಕಾರಭಾರಿ ಹಾಗೂ ತಾಂಡಾದ ಸುಮಾರು 2 ಸಾವಿರ ಜನ ಪಾಲ್ಗೊೊಳ್ಳುವರು.
ಜಯಂತಿ ಕಾರ್ಯಕ್ರಮದಲ್ಲಿ ಬಂಜಾರ ಸಮಾಜದ ಗುರುಗಳಾದ ಶಿವಪ್ರಕಾಶ್ ಸ್ವಾಾಮಿಗಳು ಸಮಾಜದ ಮಾಜಿ ಸಚಿವರು. ಮಾಜಿ ಶಾಸಕರು ಹಾಗೂ ಜನಪ್ರತಿನಿಧಿಗಳು ಮುಂತಾದ ಮುಖಂಡರು ಭಾಗವಹಿಸಲಿದ್ದು ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ಸಾಧಕ ಪ್ರತಿಭೆಗಳು, ಪ್ರತಿಭಾನ್ವಿಿತ ವಿದ್ಯಾಾರ್ಥಿಗಳು ಹಾಗೂ ಸಮಾಜದ ಅಧಿಕಾರಿಗಳಿಗೆ ಸನ್ಮಾಾನ ಕಾರ್ಯಕ್ರಮವಿರುತ್ತದೆ ಎಂದರು.
ಪತ್ರಿಿಕಾಗೋಷ್ಠಿಿಯಲ್ಲಿ ಬಂಜಾರ ಸಮುದಾಯದ ಮುಖಂಡರಾದ ಪಿ ಟಿ ಅವಿನಾಶ್, ಎಂಪಿ ನಾಯ್ಕ. ತಿಮ್ಮ ನಾಯ್ಕ. ಬಂಜಾರ ಸಮುದಾಯದ ಅಧ್ಯಕ್ಷ ಮೋತಿ ನಾಯ್ಕ. ಬಂಡ್ರಿಿ ರವಿನಾಯ್ಕ, ಹರೀಶ್ ನಾಯ್ಕ, ಪ್ರವೀಣ್ ನಾಯ್ಕ, ಗುತ್ತಿಿಗೆದಾರರಾದ ಉಮೇಶ್ ನಾಯ್ಕ, ರವಿ ನಾಯ್ಕ, ಅರುಣ್ ನಾಯ್ಕ, ಸತೀಶ್ ಸೇರಿದಂತೆ ಮುಂತಾದವರು ಪಾಲ್ಗೊೊಂಡಿದ್ದರು.

