ಸುದ್ದಿಮೂಲ ವಾರ್ತೆ ಮಾನ್ವಿ, ೆ.09:
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಮಹಾ ಶಿವರಾತ್ರಿಿ ಅಂಗವಾಗಿ ಪಟ್ಟಣದ ಕಲ್ಮಠ ವತಿಯಿಂದ ೆ.10 ರಿಂದ 15 ರವರೆಗೆ ಧ್ಯಾಾನ ಮಂದಿರದ ಆವರಣದಲ್ಲಿ ನಡೆಯುವ ಗಾರಿಗೆ ಜಾತ್ರಾಾ ಮಹೋತ್ಸವ ಕಾರ್ಯಕ್ರಮಗಳಿಗೆ ೆ.10 ರಂದು ಮಂಗಳವಾರ ಅಧಿಕೃತ ಚಾಲನೆ ನೀಡಲಾಗುವುದು ಎಂದು ಕಲ್ಮಠದ ಪೀಠಾಧ್ಯಕ್ಷರಾದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಾಮಿಗಳು ತಿಳಿಸಿದ್ದಾರೆ.
ಈ ಕುರಿತು ಪತ್ರಿಿಕಾ ಪ್ರಕಟಣೆ ನೀಡಿರುವ ಅವರು ಗಾರಿಗೆ ಜಾತ್ರಾಾ ಮಹೋತ್ಸವದ ಅಂಗವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳ ವಿವರ ನೀಡಿದ್ದಾರೆ.
ೆ.10 ರಂದು ಮಂಗಳವಾರ ಬೆಳಿಗ್ಗೆೆ 8.30 ಕ್ಕೆೆ ನೀಲೋಗಲ್ ಮಠದ ಶ್ರೀ ಡಾ.ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಾಮಿಗಳು ಧರ್ಮ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡುವರು. ೆ.10 ರಿಂದ 14 ರವರೆಗೆ ಪ್ರತಿದಿನ ಸಂಜೆ 6-30 ರಿಂದ ಪ್ರಭುಲಿಂಗ ಲೀಲೆ ಪ್ರವಚನವನ್ನು ಶ್ರೀ ರುದ್ರಯ್ಯಸ್ವಾಾಮಿ ಮದ್ಲಾಾಪುರ ನೀಡಲಿದ್ದಾರೆ. ಪ್ರತಿದಿನ ರಾತ್ರಿಿ 8 ರಿಂದ ತಾಲೂಕಿನ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ೆ.11 ರಂದು ದಿ.ಮಂಜುಳಾ ಸಂಗಮೇಶ ಕಾಯಣ್ಣೋೋರ್ ಇವರ ಸ್ಮರಣಾರ್ಥ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಾ ಮಟ್ಟದಲ್ಲಿ ಪ್ರಥಮ ಸ್ಥಾಾನ ಪಡೆದ ವಿದ್ಯಾಾರ್ಥಿಗಳಿಗೆ ದತ್ತಿಿ ಬಹುಮಾನ ವಿತರಣಾ ಕಾರ್ಯಕ್ರಮ, ೆ.12 ರಂದು ಬೆಳಿಗ್ಗೆೆ 10-30 ರಿಂದ ಜಿಲ್ಲಾ ಮಟ್ಟದ ರೈತ ಸಮಾವೇಶ ಹಾಗೂ ಉಪನ್ಯಾಾಸ ಕಾರ್ಯಕ್ರಮ, ಕೃಷಿ ವಸ್ತು ಪ್ರದರ್ಶನ, ಪ್ರಗತಿ ಪರ ರೈತರಿಗೆ ಸನ್ಮಾಾನ, ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ೆ.13 ರಂದು ಬೆಳಿಗ್ಗೆೆ 10-30 ರಿಂದ ಮಹಿಳಾ ದೇಶಿ ಕ್ರೀೆಡಾ ಸ್ಪರ್ಧೆಗಳು ನಡೆಯಲಿವೆ. ೆ.14 ರಂದು ಸಂಜೆ 6-30 ರಿಂದ ಪ್ರಭುಲಿಂಗ ಲೀಲೆ ಪ್ರವಚನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಳ್ಳಾಾರಿಯ ಚಿಂತಕರಾದ ಅನುರಾಧ ಭಾಗವಹಿಸಲಿದ್ದಾರೆ. 2024-25 ನೇ ಸಾಲಿನ ರಾಜ್ಯ ಮಟ್ಟದ ಸದ್ಗರು ಶ್ರೀ ವಿರೂಪಾಕ್ಷೇಶ್ವರ ಕೃಪಾ ಭೂಷಣ ಪ್ರಶಸ್ತಿಿಗೆ ಸಿಂಧನೂರಿನ ಕಾರುಣ್ಯಾಾಶ್ರಮವನ್ನು ಆಯ್ಕೆೆ ಮಾಡಲಾಗಿದ್ದು ಕಾರ್ಯಕ್ರಮದಲ್ಲಿ ನಗದು ಪುರಸ್ಕಾಾರ ಹಾಗೂ ಗೌರವ ಸನ್ಮಾಾನ ನಡೆಸಲಾಗುವುದು. ೆ.15 ರಂದು ಮಹಾಶಿವರಾತ್ರಿಿ ಅಂಗವಾಗಿ ಬೆಳಿಗ್ಗೆೆ ಧ್ಯಾಾನ ಮಂದಿರದಲ್ಲಿನ ಕೋಟಿಲಿಂಗಗಳಿಗೆ ವಿಶೇಷ ಅಭಿಷೇಕ ಮಹಾಮಂಗಳಾರತಿ, ಬಿಲ್ವಾಾರ್ಚನೆ ವಿಶೇಷವಾಗಿ ಗಾರಿಗೆ ನೈವೇದ್ಯ ಸಮರ್ಪಿಸಲಾಗುತ್ತದೆ. ಬೆಳಿಗ್ಗೆೆ 9-30 ಕ್ಕೆೆ ಸಾಮೂಹಿಕ ವಿವಾಹಗಳು ನಡೆಯಲಿವೆ. ಸಂಜೆ 4.30 ರಿಂದ ಶ್ರೀ ಕಲ್ಮಠದಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಲಿಂ.ಶ್ರೀ ಗುರು ವಿರೂಪಾಕ್ಷೇಶ್ವರ ಪಲ್ಲಕ್ಕಿಿ ಉತ್ಸವ ಧ್ಯಾಾನಮಂದಿರದವರೆಗೂ ನಡೆಯಲಿದೆ.
ಸಂಜೆ 6-30 ಕ್ಕೆೆ ಸುಮಂಗಲಿಯರಿಂದ ನಡೆಯುವ ರಥೋತ್ಸವಕ್ಕೆೆ ಲಿಂಗಸೂಗೂರಿನ ತಹಸೀಲ್ದಾಾರ್ ಸತ್ಯಮ್ಮ ಗಿಣಿವಾರ ಅವರು ಚಾಲನೆ ನೀಡಲಿದ್ದಾರೆ. ಸಂಜೆ 7-30 ರಿಂದ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ ನಾಟ್ಯ ವೈಭವ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಭಾವಂತ ನಾಟ್ಯ ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಗಬ್ಬೂರಿನ ಹಾಸ್ಯ ಕಲಾವಿದ ದೇವರಾಜ ಎಲಿ ಇವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮ ಹಾಗೂ ರಥೋತ್ಸವದಲ್ಲಿ ಸಚಿವರಾದ ಎನ್.ಎಸ್.ಬೋಸರಾಜು, ಶಾಸಕ ಹಂಪಯ್ಯನಾಯಕ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ನಾಡಿನ ವಿವಿಧ ಮಠಾಧೀಶರು, ಗಣ್ಯರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಕಲ್ಮಠ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಾಮಿಗಳು ತಿಳಿಸಿದ್ದಾರೆ.
ಮಾನ್ವಿ : ೆ.10 ರಿಂದ 15 ರವರೆಗೆ ನಡೆಯುವ ಗಾರಿಗೆ ಜಾತ್ರಾಾ ಮಹೋತ್ಸವಕ್ಕೆ ಇಂದು ಚಾಲನೆ

