ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಡಿ.08:
ಗ್ರಾಾಮದ ಹುತ್ತಿಿನ ಯಲ್ಲಮ್ಮನ ಜಾತ್ರೆೆ ನಾಳೆ ಮಂಗಳವಾರ ಜರುಗುತ್ತದೆ .
ಊರಿನ ಮಧ್ಯಭಾಗದಲ್ಲಿ ಇರುವ ಯಲ್ಲಮ್ಮನ ದೇವಾಲಯದಿಂದ 12 ಗಂಟೆಗೆ ಯಲ್ಲಮ್ಮನ ಪಲ್ಲಕ್ಕಿಿ ಉತ್ಸವ ಗ್ರಾಾಮದಿಂದ 4 ಕಿಲೋ ಮೀಟರ್ದೂರದಲ್ಲಿರುವ ಹಂಪರಗುಂದಿಯ ಸೀಮಾಂತರದ ಗುಡ್ಡದ ಪಕ್ಕದಲ್ಲಿ ಇರುವ ಗುಡಿಯವರಗೆ ಜರುಗುವುದು ,
ಜಾಲಹಳ್ಳಿಿ ಸುತ್ತಲಿನ ಹಳ್ಳಿಿಗಳ ಭಕ್ತಾಾದಿಗಳು ಎಳ್ಳು ಹಚ್ಚಿಿದ ರೊಟ್ಟಿಿ,ಎಣ್ಣೆೆ ಬದನೆಕಾಯಿ ಪಲ್ಯ,ಬರ್ತ ( ತರಹೇವಾರಿ ದಿನಸಿನ ಪಲ್ಯ) ನೈವದ್ಯ ಯಲ್ಲಮ ದೇವಿಗೆ ಅರ್ಪಿಸುವರು.
ಮಧ್ಯಾಾಹ್ನ 3 ಗಂಟೆ ನಂತರ ಸಾವಿರಾರು ಭಕ್ತರು ಸೇರಿ ಯಲ್ಲಮ್ಮನ ರಥೋತ್ಸವದಲ್ಲಿ ಪಾಲ್ಗೊೊಳ್ಳುವರು , ರಥೋತ್ಸವ ಮುಗಿದ ನಂತರ ಸಂಜೆ 6 ಗಂಟೆಗೆ ಪುನಃ ಯಲ್ಲಮನ ಪಲ್ಲಕ್ಕಿಿ ಮರಳಿ ಬಂದು ರಾತ್ರಿಿ ಅಗಸಿ ದುರುಗಮ್ಮ ಗುಡಿಯಲ್ಲಿ ಇಟ್ಟು ಬೆಳಗಾಗುವ ವರೆಗೂ ರೇಣುಕಾ ದೇವಿ ಮಹಾತ್ಮೆೆ ಹಾಗೂ ಇತರೆ ದೇವತೆಗಳ ಪುರಾಣ ಹೇಳುವರು.
ಬುಧವಾರ ಬೆಳಗ್ಗೆೆ 6 ಗಂಟೆಗೆ ಪಲ್ಲಕ್ಕಿಿ ಸೇವೆ ಊರಿನ ಯಲ್ಲಮ್ಮನ ದೇವಾಲಯಕ್ಕೆೆ 10 ಗಂಟೆಗೆ ಬಂದು ತಲುಪವದು,
ಯಲ್ಲಮ್ಮನಿಗೆ ಪೂಜೆ ಮಾಡುವ ಪೂಜಾರಿ ಗಳು ನಾಯಕ ಜನಾಂಗದ ಬೀಸಲ ಮನೆತನದವರಾಗಿದ್ದು
ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ನಡೆಯುವ ಜಾತ್ರೆೆಗೆ ಬಹಳಷ್ಟು ಜನರು ದೂರದ ಊರುಗಳಿಂದ ಹುತ್ತಿಿನ ಯಲ್ಲಮ್ಮನ ಜಾತ್ರೆೆಗೆ ಬಂದು ಯಲ್ಲಮ್ಮನ ದರ್ಶನ ಪಡೆದು ಪಾವನವಾಗುತ್ತಾಾರೆ.
ಬಾಕ್ಸನಲ್ಲಿ
ಗ್ರಾಾಮದ ಹುತ್ತಿಿನ ಯಲ್ಲಮ್ಮನಿಗೆ ಮುಸ್ಲಿಿಂ ಜನಾಂಗದವರು ವಿಶೇಷ ಆರತಿ ಮಾಡಿ ಪೂಜೆ ಸಲ್ಲಿಸಿದ್ದರಿಂದ ಅಂದಿನಿಂದ ಇಲ್ಲಿಯವರೆಗೆ ಬಳಿಗಾರ ಓಣಿಯ ಮುಸ್ಲಿಿಂ ಜನಾಂಗದ ಒಂದು ಸಣ್ಣ ಗುಂಪಿಗೆ ಆರತಿ ಯವರು ಎಂಬ ಹೆಸರು ಖಾಯಂ ಆಗಿ ಇದೆ.
ಗ್ರಾಾಮದ ಹುತ್ತಿಿನ ಯಲ್ಲಮ್ಮ ಹಿಂದೂ – ಮುಸ್ಲಿಿಂ ಬಾಂಧವ್ಯ ಸಾರುವ ದೇವಾಲಯವಾಗಿದೆ.

