ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.24:
ಬಳ್ಳಾಾರಿಯ ವಾಲ್ಮೀಕಿ ವೃತ್ತದಲ್ಲಿ ಜನವರಿ 03 ರಂದು ನಡೆಯಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಪುತ್ಥಳಿಯ ಅನಾವರಣಕ್ಕೆೆ ಭರದ ಸಿದ್ಧತೆಗಳು ನಡೆದಿದ್ದು, ಡಿಸೆಂಬರ್ 25ರಂದು ಬಳ್ಳಾಾರಿ ನಗರಕ್ಕೆೆ ಮಹರ್ಷಿ ಶ್ರೀ ವಾಲ್ಮೀಕಿ ಪುತ್ಥಳಿ ಆಗಮಿಸಲಿದೆ.
ಡಿಸೆಂಬರ್ 25ರ ಬೆಳಗ್ಗೆೆ 9 ಗಂಟೆಗೆ ನಗರದ ಕೋಟೆ ಶ್ರೀ ಆಂಜನೇಯ ಸ್ವಾಾಮಿ ದೇವಸ್ಥಾಾನದಿಂದ ವಾಲ್ಮೀಕಿ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ವಾಲ್ಮೀಕಿ ಪುತ್ಥಳಿಯನ್ನು ಬಳ್ಳಾಾರಿಗೆ ಆಗಮಿಸುವ ವಾಹನವನ್ನು ಹೂಗಳಿಂದ ಅಲಂಕರಿಸಿ ಕಲಾ ತಂಡಗಳೊಂದಿಗೆ ಪೂರ್ಣಕುಂಭ, ಕಳಶ ಹೊತ್ತ 1008 ಜನ ಮಹಿಳೆಯರು ಸ್ವಾಾಗತಿಸಲಿ ದ್ದಾಾರೆ.
ಡಿಸೆಂಬರ್ 24ರಂದು ವಾಲ್ಮೀಕಿ ವೃತ್ತದಲ್ಲಿ ಹೋಮ ಹವನ ನಡೆಯಲಿದೆ. ಡಿಸೆಂಬರ್ 25ರಂದು ಬೆಳಿಗ್ಗೆೆಯಿಂದ ವಾಲ್ಮೀಕಿ ವೃತ್ತದಲ್ಲಿ ಪೂಜೆ ನಡೆಯಲಿದೆ. ಜನವರಿ 03ರಂದು ಸಂಜೆ 5 ಗಂಟೆಗೆ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯ ಅನಾವರಣ ನಡೆಯಲಿದೆ.
ಸಚಿವರಾದ ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ಕೆ.ಎನ್. ರಾಜಣ್ಣ, ಬಿ. ನಾಗೇಂದ್ರ, ಜಿಲ್ಲಾಾ ಉಸ್ತುವಾರಿ ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್, ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ಹುಸೇನ್, ಶಾಸಕ ಜೆ.ಎನ್. ಗಣೇಶ್ ಸೇರಿದಂತೆ ಹಲವು ಶಾಸಕರು ಭಾಗಿಯಾಗಲಿದ್ದಾಾರೆ. ಶಾಸಕ ನಾರಾ ಭರತರೆಡ್ಡಿಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾಾರೆ. ರಾಜನಹಳ್ಳಿಿ ವಾಲ್ಮೀಕಿ ಪೀಠದ ಪ್ರಸನ್ನಾಾನಂದಪುರಿ ಸ್ವಾಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದಾಾರೆ.

