ಸುದ್ದಿಮೂಲವಾರ್ತೆ
ಕೊಪ್ಪಳ,ಆ.4: ಒಮ್ಮೊಮ್ಮೆ ಹಾದಿ ಬೀದಿಯಲ್ಲಿ ಟೊಮೆಟೊವನ್ನು ಚೆಲ್ಲಿ ಆಕ್ರೋಶ ವ್ಯಕ್ತಪಡಿಸುವ ರೈತರು ಈಗ ಟೊಮೆಟೊ ಬೆಳೆದು ಧನ್ಯವಾಗುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ರೈತನೊಬ್ಬ ಬರೋಬ್ಬರಿ 35 ಲಕ್ಷ ರೂಪಾಯಿ ಟೊಮೆಟೊ ಮಾರಾಟ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹುಣಿಸ್ಯಾಳದ ಟೊಮೆಟೊ ಬೆಳಗಾರ ಈ ಬಾರಿ ಎರಡು ಎಕರೆ ಟೊಮೆಟೊ ಬೆಳೆದು 35 ಲಕ್ಷ ಆದಾಯ ಗಳಿಸಿದ್ದಾನೆ.
ಯಲಬುರ್ಗಾ ತಾಲೂಕಿನ ಹುಣಿಸ್ಯಾಳದ ರೈತ ಬಸವರಾಜ ಮಾಮನಿ ಎಂಬ ರೈತನಿಗೆ ಟೊಮೆಟೊ ಲಾಭವಾಗಿದೆ.
ಎರಡು ಎಕರೆಯಲ್ಲಿ ಬೆಳೆದ ಟೊಮೆಟೊಗೆ ಪ್ರತಿ ಬಾಕ್ಸ್ ಟೊಮೆಟೊಗೆ 2300 ರೂಪಾಯಿ ದರದಲ್ಲಿ ಮಾರಾಟ ಮಾಡಿದ್ದಾನೆ. ಇನ್ನೂ 500-600 ಬಾಕ್ಸ್ ಟೆಮೊಟೊ ಇಳುವರಿ ಬರುವ ನಿರೀಕ್ಷೆ ಇದೆ. ಇದೇ ದರ ಸಿಕ್ಕರೆ ಐದಾರು ಲಕ್ಷದ ಆದಾಯದ ನಿರೀಕ್ಷೆಯಲ್ಲಿದ್ದಾನೆ.
ಕಳೆದ ಐದಾರು ವರ್ಷದಿಂದ ಟೊಮೆಟೊ ಬೆಳೆಯುತ್ತಿದ್ದ ಈ ಮೊದಲು ಟೊಮೆಟೊ ಬೆಳೆದು ಕೈ ಸುಟ್ಟುಕೊಂಡಿದ್ದೆ ಹೆಚ್ಚು. ಕಳೆದ ವರ್ಷ 15 ಲಕ್ಷ ರೂಪಾಯಿಯ ಟೊಮೆಟೊ ಬೆಳೆದಿದ್ದ. ಈಗ ಎರಡು ಎಕರೆ ಅರ್ಧ ಕೋಟಿಯಷ್ಟು ಟೊಮೆಟೊ ಬೆಳೆಯುತ್ತಿರುವುದು ರೈತನಿಗೆ ಖುಷಿ ನೀಡಿದೆ.