ಸುದ್ದಿಮೂಲ ವಾರ್ತೆ ರಾಯಚೂರು, ಜ.08:
ಜಿ.ಸುರೇಶ ಪ್ರತಿಷ್ಠಾಾನದಿಂದ ಜ.10ರಂದು ಸಾಹಿತಿ ವೀರ ಹನುಮಾನ ರಚಿಸಿದ ಆತ್ಮಬಂಧು ಎರಡು ಜೀವ ಒಂದು ಕಥಾನಕ ಎಂಬ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿದೆ ಎಂದು ಪ್ರತಿಷ್ಠಾಾನದ ಸದಸ್ಯ ಈರಣ್ಣ ಬೆಂಗಾಲಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ನಗರದ ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಅಂದು ಬೆಳಿಗ್ಗೆೆ 11ಕ್ಕೆೆ ಕಾರ್ಯಕ್ರಮ ಆಯೋಜಿಸಿದ್ದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ಉದ್ಘಾಾಟಿಸಲಿದ್ದುಘಿ, ಮಾಜಿ ಸಚಿವ ಕುಮಾರ ಬಂಗಾರಪ್ಪ ಕೃತಿ ಬಿಡುಗಡೆ ಮಾಡುವರು, ಅಧ್ಯಕ್ಷತೆಯನ್ನು ತಾರಾನಾಥ ಶಿಕ್ಷಣ ಸಂಸ್ಥೆೆ ಅಧ್ಯಕ್ಷ ಪಾರಸಮಲ್ ಸುಖಾಣಿ ವಹಿಸುವರು ಎಂದರು.
ಶಿಕ್ಷಣ, ಸಾಹಿತಿ ಪ್ರೇಮಿಯಾಗಿದ್ದ ಜಿ.ಸುರೇಶ ಅಗಲಿ ಒಂದು ವರ್ಷ ಆಗಲಿರುವ ಈ ಸಂದರ್ಭದಲ್ಲಿ ಈ ಕೃತಿ ಬಿಡುಗಡೆಯಾಗಲಿದೆ. ಕೃತಿ ಕುರಿತು ಸಾಹಿತಿ ಮಹಾಂತೇಶ ಮಸ್ಕಿಿ ಮಾತನಾಡಲಿದ್ದಾಾರೆ ಕೃತಿಕಾರ ವೀರ ಹನುಮಾನ ಸೇರಿ ಹಲವು ಸಾಹಿತಿಗಳು ಭಾಗವಹಿಸಲಿದ್ದಾಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಿಯಲ್ಲಿ ಪ್ರತಿಷ್ಠಾಾನದ ಸದಸ್ಯರಾದ ಬಸವರಾಜ, ಮಲ್ಕಪ್ಪ ಪಾಟೀಲ, ರಾಜೇಶ ಮಡಿವಾಳ, ಅಜಯ, ಮುನಿಸ್ವಾಾಮಿ ಇದ್ದರು.

