ಸುದ್ದಿಮೂಲ ವಾರ್ತೆ ಭಾಲ್ಕಿ, ಡಿ.20
ಗಡಿಯಲ್ಲಿ ಶಿಕ್ಷಣ ಸಂಸ್ಥೆೆ ಕಟ್ಟಿಿ, ಪ್ರಸಾದ ನಿಲಯ ಸ್ಥಾಾಪಿಸಿ ಸಾವಿರಾರು ಜನರ ಬಾಳು ಬೆಳಗಿಸಿದ ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ 136ನೆಯ ಜಯಂತ್ಯುತ್ಸವ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಸವಕಲ್ಯಾಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಹಿರೇಮಠ ಸಂಸ್ಥಾಾನದಲ್ಲಿ ಶನಿವಾರ ಕರೆದ ಪತ್ರಿಿಕಾ ಗೋಷ್ಠಿಿಯಲ್ಲಿ ಅವರು ಮಾಹಿತಿ ನೀಡಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಡಿ.22ರಂದು ಭಾನುವಾರ ಬಸವ ನಡಿಗೆ, ಷಟಸ್ಥಲ ಧ್ವಜರೋಹಣ, ತೊಟ್ಟಿಿಲ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳ ಉದ್ಘಾಾಟನೆ, ಉದ್ಘಾಾಟನೆ, ಗ್ರಂಥ ಲೋಕಾರ್ಪಣೆ ಸೇರಿ ದಿನವೀಡಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ನಾಡಿನ ವಿವಿಧ ಮಠಾಧೀಶರು, ರಾಜಕೀಯ ಮುಖಂಡರು, ಗಣ್ಯರು, ಸಾಹಿತಿಗಳು, ಕಲಾವಿದರು ಪಾಲ್ಗೊೊಳ್ಳಲಿದ್ದು, ಸಮಾರಂಭದಲ್ಲಿ ಪಾಲ್ಗೊೊಳ್ಳುವ ಭಕ್ತರಿಗೆ ದಿನವಿಡೀ ಅನ್ನದಾಸೋಹ ವ್ಯವಸ್ಥೆೆ ಮಾಡಲಾಗುತ್ತಿಿದೆ ಎಂದರು.
ಹಾನಗಲ್ ಕುಮಾರೇಶ್ವರ ಉಚಿತ ಪ್ರಸಾದ ನಿಲಯ, ಶಾಂತಿವರ್ಧಕ ಶಿಕ್ಷಣ ಸಂಸ್ಥೆೆ ಸ್ಥಾಾಪಿಸಿ ಬಡ ಜನರ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡುವುದರ ಜತೆಗೆ ನಮ್ಮಂತಹವರನ್ನು ಸ್ವಾಾಮೀಜಿ ಆಗಿಸಿ ಸಮಾಜಕ್ಕೆೆ ಅರ್ಪಿಸಿದ ಶ್ರೇೇಯ ಡಾ.ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ.
ಪೂಜ್ಯರ ಕೊಡುಗೆ ಎಷ್ಟೇ ಸ್ಮರಿಸಿದರೂ ಕೂಡ ಕಡಿಮೆ ಆಗುತ್ತದೆ. ಅವರ ಜೀವನ ಸಾಧನೆಯನ್ನು ಇಂದಿನ ಯುವ ಪೀಳಿಗೆಗೆ ಸಾರುವ ಸದಾಶಯದೊಂದಿಗೆ ಜಯಂತ್ಯುತ್ಸವ ನೆಪದಲ್ಲಿ ಅನೇಕ ವಿಧಾಯಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಚಿವ ಖಂಡ್ರೆೆ ಉದ್ಘಾಾಟನೆ
ಶತಾಯುಷಿ ಡಾ.ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ ನಿಮಿತ್ತ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಸಾನ್ನಿಿಧ್ಯದಲ್ಲಿ ವಿವಿಧ ಸ್ಪರ್ಧೆಗಳು ಜರುಗಲಿವೆ. ಸಾಯಂಕಾಲ 5 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆೆ ಅವರು ಸಮಾರಂಭ ಉದ್ಘಾಾಟಿಸಲಿದ್ದಾರೆ ಎಂದು ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ತಿಳಿಸಿದರು.
ನವಲಗುಂದ ಸಂಸ್ಥಾಾನ ಗವಿಮಠದ ಬಸವಲಿಂಗ ಸ್ವಾಾಮೀಜಿ, ರಾಣೆಬೆನ್ನೂರು ವಿರಕ್ತಮಠದ ಶಿವಯೋಗೀಶ್ವರ ಸ್ವಾಾಮೀಜಿ ಸಮಾರಂಭದ ನೇತೃತ್ವ ವಹಿಸುವರು.
ಬಸವಬೆಳವಿ ಚರಂತೇಶ್ವರ ವಿರಕ್ತಮಠದ ಶರಣಬಸವ ಸ್ವಾಾಮೀಜಿ ಅನುಭಾವ ನೀಡಲಿದ್ದಾರೆ. ಸಂಸದ ಸಾಗರ ಖಂಡ್ರೆೆ ಅವರು ಕ್ಯಾಾಲೆಂಡರ್ ಬಿಡುಗಡೆ ಮಾಡಲಿದ್ದಾರೆ.
ಮಾಜಿ ಶಾಸಕ ಪ್ರಕಾಶ ಖಂಡ್ರೆೆ ಅಧ್ಯಕ್ಷತೆ ವಹಿಸುವರು. ನಾರಂಜಾ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಡಿ.ಕೆ.ಸಿದ್ರಾಾಮ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಭಾರತೀಯ ಬಸವ ಬಳಗದ ರಾಜ್ಯಾಾಧ್ಯಕ್ಷ ಬಾಬು ವಾಲಿ ಬಸವ ಗುರುವಿನ ಪೂಜೆ ನೆರವೇರಿಸಲಿದ್ದಾರೆ.
ರಾಜ್ಯ ಅರಣ್ಯ ಅಭಿವೃದ್ಧಿಿ ನಿಗಮದ ಉಪಾಧ್ಯಕ್ಷ ಹಣಮಂತರಾವ ಚವ್ಹಾಾಣ, ಹಿರಿಯ ನ್ಯಾಾಯವಾದಿ ರಾಜಶೇಖರ ಅಷ್ಟೂರೆ, ಬೀದರ್ ಲೋಕೋಪಯೋಗಿ ಇಲಾಖೆಯ ಇಇ ಶಿವಶಂಕರ ಕಾಮಶೆಟ್ಟಿಿ ಸೇರಿದಂತೆ ಮುಂತಾದವರು ಪಾಲ್ಗೊೊಳ್ಳಲಿದ್ದಾರೆ. ಸಾಯಂಕಾಲ 7ಕ್ಕೆೆ ಅನುಭವ ಮಂಟಪ ಸಂಸ್ಕೃತಿ ವಿದ್ಯಾಾಲಯ ಮಕ್ಕಳು ನಡೆಸಿ ಕೊಡುವ ಶಿವಯೋಗಿ ಸಿದ್ಧರಾಮೇಶ್ವರ ನಾಟಕ ಪ್ರದರ್ಶನದೊಂದಿಗೆ ದಿನದ ಎಲ್ಲ ಕಾರ್ಯಕ್ರಮಗಳಿಗೆ ತೆರೆ ಬೀಳಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಿಯಲ್ಲಿ ಮಹಾಲಿಂಗ ಸ್ವಾಾಮೀಜಿ, ಹಿರಿಯ ಮುಖಂಡ ಸೋಮನಾಥಪ್ಪ ಅಷ್ಟೂರೆ, ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಶಿವಕುಮಾರ ಕಮಠಾಣೆ, ಆಡಳಿತಾಧಿಕಾರಿ ಮೋಹನ ರೆಡ್ಡಿಿ ಇದ್ದರು.
ನಾಳೆ ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ : ಪಟ್ಟದ್ದೇವರು

