ಸುದ್ದಿಮೂಲ ವಾರ್ತೆ ರಾಯಚೂರು, ಜ.19:
ನಗರದ ಮಾಣಿಕ್ನಗರದಲ್ಲಿರುವ ಶ್ರೀ ಮಾರ್ಕಂಡೇಶ್ವರ ದೇವಸ್ಥಾಾನದಲ್ಲಿ ಪದ್ಮಶಾಲಿ ಸಮಾಜದಿಂದ ಪ್ರತಿವರ್ಷದಂತೆ 21 ರಂದು ಶ್ರೀ ಮಾರ್ಕಂಡೇಶ್ವರ ಜಯಂತೋತ್ಸವ ಹಮ್ಮಿಿಕೊಳ್ಳಲಾಗಿದೆ ಎಂದು ಸಮಾಜದ ಪಿ. ಗೋವಿಂದರಾಜು ತಿಳಿಸಿದ್ದಾಾರೆ.
ಜ 20 ರಂದು ಬೆಳಿಗ್ಗೆೆ 8 ರಿಂದ ಸುದರ್ಶನ ಹೋಮ ಮತ್ತು ಬೆಳಿಗ್ಗೆೆ 10.30 ಕ್ಕೆೆ ಶಿವ ಪಾರ್ವತಿ ಕಲ್ಯಾಾಣೋತ್ಸವ ಕಾರ್ಯಕ್ರಮ ಸೋಮವಾರ ಪೇಟೆಮಠದ ಶ್ರೀ ರಾಚೋಟಿ ವೀರಶಿವಾಚಾರ್ಯ ಸ್ವಾಾಮಿಜಿಗಳ ಸಾನ್ನಿಿಧ್ಯದಲ್ಲಿ ಜರುಗಲಿದೆ.
ಜ.21 ರಂದು ರಂದು ಶ್ರೀ ಮಾರ್ಕಂಡೇಶ್ವರ ಜಯಂತಿಯಂದು ಶ್ರೀ ಭಕ್ತ ಮಾರ್ಕಂಡೇಶ್ವರ ಭಾವಚಿತ್ರ ಮೆರವಣಿಗೆ , ರುದ್ರಾಾಭೀಷೇಕ, ಮಹಾಪೂಜೆ, ಮೃತ್ಯಂಜಯ ಹೋಮ, ಪೂರ್ಣಾಹುತಿ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಜಯಂತಿ ಅಂಗವಾಗಿ ಸಮಾಜದಲ್ಲಿ ಸೇವೆ ಸಲ್ಲಿಸಿದ ಹಿರಿಯರಿಗೆ ಸನ್ಮಾಾನಿಸಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಾಮೀಜಿ ಸೇರಿ ಶಾಸಕರು, ಮುಖಂಡರು ಭಾಗವಹಿಸಲಿದ್ದಾಾರೆ ಎಂದು ತಿಳಿಸಿದ್ದಾಾರೆ.

