ಸುದ್ದಿಮೂಲ ವಾರ್ತೆ ಬೆಂಗಳೂರು ಅ.03:
ಜಲಮೂಲ ಸಂರಕ್ಷಿಸುವ ಮೂಲಕ ಅಂತರಜಲ ಮಟ್ಟ ವೃದ್ಧಿಿಸಿ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆೆ ಭದ್ರ ಅಡಿಪಾಯ ಹಾಕುವ ಉದ್ದೇಶದಿಂದ, ಸಣ್ಣ ನೀರಾವರಿ ಮತ್ತು ಅಂತರಜಲ ಅಭಿವೃದ್ಧಿಿ ಇಲಾಖೆ ವತಿಯಿಂದ ನೀರಿದ್ದರೆ ನಾಳೆ ಎನ್ನುವ ವಿಶೇಷ ಪರಿಕಲ್ಪನೆಯ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ಅವರು ತಿಳಿಸಿದ್ದಾರೆ .
ರಾಜ್ಯದ ಕೃಷಿ ಭೂಮಿಯಲ್ಲಿ ಶೇಕಡಾ 60ರಷ್ಟು ಭಾಗದಲ್ಲಿ ಕೃಷಿ ಚಟುವಟಿಕೆಯು ಕೊಳವೆಬಾವಿಗಳ ಮೇಲೆ ಅವಲಂಬಿತವಾಗಿದೆ. ಅಂತರಜಲ ವೃದ್ದಿ, ನೀರಿನ ಸಮರ್ಪಕ ಬಳಕೆಯ ಬಗ್ಗೆೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಾಗೂ ಜಲ ಸಮೃದ್ಧ ಹಾಗೂ ಜಲ ಸುಭದ್ರ, ಸುಸ್ಥಿಿರ ಕರ್ನಾಟಕ ನಿರ್ಮಿಸುವ ಕಾರಣ ಇದಕ್ಕಾಾಗಿ ನೀರಿದ್ದರೆ ನಾಳೆ ಎನ್ನುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಯುವ ಪೀಳಿಗೆಯಲ್ಲಿ ನೀರಿನ ಸಮರ್ಪಕ ಬಳಕೆ ಹಾಗೂ ಅಂತರ್ಜಲದ ವೃದ್ದಿಗೆ ಕೈಗೊಳ್ಳಬೇಕಾದ ಕ್ರಮ ಬಗ್ಗೆೆ ಜಾಗೃತಿ ಮೂಡಿಸುವ ಉದ್ದೇಶದಿಂದ ಖ್ಯಾಾತ ನಟ ವಶಿಷ್ಟ ಸಿಂಹ ಅವರನ್ನು ಇಲಾಖೆಯ ರಾಯಭಾರಿಯನ್ನಾಾಗಿ ನೇಮಕ ಮಾಡಿಕೊಳ್ಳಲಾಗಿದೆ. ನಟ ವಶಿಷ್ಟ ಸಿಂಹ ಅವರ ಜೊತೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಕೆರೆ ಸಂರಕ್ಷಣೆ, ಮಳೆ ನೀರಿನ ಕೊಯ್ಲು ಸೇರಿದಂತೆ ಹಲವಾರು ಸರಣಿ ಕಾರ್ಯಕ್ರಮಗಳನ್ನ ಆಯೋಜಿಸಲು ಚಿಂತಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಕ್ಟೋೋಬರ್ 9 ರಂದು ವಿಧಾನಸೌಧದ ಬ್ಯಾಾಂಕ್ವೇಟ್ ಹಾಲ್ನಲ್ಲಿ ನೀರಿದ್ದರೆ ನಾಳೆ ಕಾರ್ಯಕ್ರಮ ಮುಖ್ಯಮಂತ್ರಿಿ ಸಿದ್ದರಾಮಯ್ಯನವರ ಹಾಗೂ ಉಪಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ ಸೇರಿದಂತೆ ಚಾಲನೆ ನೀಡಲಿದ್ದಾಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾಾರೆ.

