ಸುದ್ದಿಮೂಲ ವಾರ್ತೆ ಕವಿತಾಳ, ಜ.13
ತೋರಣದಿನ್ನಿಿ ಪ್ರಾಾಥಮಿಕ ಅರೋಗ್ಯ ಕೇಂದ್ರದಲ್ಲಿ ಮಂಗಳವಾರ ಶಿವಮೊಗ್ಗದ ಶಂಕರ ಆಸ್ಪತ್ರೆೆ ಆಶ್ರಯದಲ್ಲಿ ಉಚಿತ ಕಣ್ಣಿಿನ ತಪಾಸಣೆ ಶಿಬಿರ ನಡೆಯಿತು.
ಈ ಸಂದರ್ಭದಲ್ಲಿ ಶಂಕರ್ ಆಸ್ಪತ್ರೆೆ ನೇತ್ರ ಅಧಿಕಾರಿ ಶಿವಪ್ರಸಾದ ಅವರು ಮಾತನಾಡಿ ಆಸ್ಪತ್ರೆೆ ವತಿಯಿಂದ ಉಚಿತವಾಗಿ ನೇತ್ರ ತಪಾಸಣೆ ಮಾಡಲಾಗುತ್ತಿಿದೆ ಸಣ್ಣ ಪುಟ್ಟ ಸಮಸ್ಯೆೆ ಇದ್ದಲ್ಲಿ ಸ್ಥಳದಲ್ಲಿ ತಪಾಸಣೆ ಮಾಡಿ ಡ್ರಾಾಪ್ಸ್ ನೀಡಲಾಗುತ್ತದೆ. ಹೆಚ್ಚಿಿನ ಸಮಸ್ಯೆೆ ಕಂಡುಬಂದಲ್ಲಿ ಚಿಕಿತ್ಸೆೆಗೆ ತಮ್ಮ ಆಸ್ಪತ್ರೆೆಗೆ ಬಸ್ ನಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆೆ ನೀಡಿದ ಬಳಿಕ ಮರಳಿ ಕರೆದುಕೊಂಡು ಬಂದು ಬಿಡಲಾಗುವುದು ಶಿಬಿರದ ಸದುಪಯೋಗ ಪಡೆಯಬೇಕು ಎಂದರು.
ಒಟ್ಟು 79 ಜನಕ್ಕೆೆ ತಪಾಸಣೆ ಮಾಡಲಾಯಿತು. ಶಸ ಚಿಕಿತ್ಸೆೆ ಅಗತ್ಯ ಕಂಡು ಬಂದ 33 ಜನರಿಗೆ ಆಸ್ಪತ್ರೆೆಗೆ ಕರೆದುಕೊಂಡು ಹೋಗುವ ವ್ಯವಸ್ಥೆೆ ಮಾಡಲಾಗುವುದು ಎಂದು ತಿಳಿಸಿದರು. ವೈದ್ಯಾಾಧಿಕಾರಿ ಡಾ. ಪಿ.ಬಿ.ಸಿಂಗ್ ಹಾಗೂ ಆರೋಗ್ಯ ಸಿಬ್ಬಂದಿ ಇದ್ದರು.
ತೋರಣದಿನ್ನಿ: ಉಚಿತ ಕಣ್ಣಿನ ತಪಾಸಣೆ ಶಿಬಿರ

