ಸುದ್ದಿಮೂಲ ವಾರ್ತೆ
ಸಿರುಗುಪ್ಪ,ಆ.6: ನಗರದ ಹೆದ್ದಾರಿ ರಸ್ತೆಯ ಮಹಾತ್ಮ ಗಾಂಧಿ, ಡಾ. ಅಂಬೇಡ್ಕರ್, ಟಿಪ್ಪು ವೃತ್ತಗಳು ಪೊಲೀಸ್ ಸ್ಟೇಷನ್, ಶ್ರೀ ಅಭಯಾಂಜನೇಯ ದೇವಸ್ಥಾನ ಮುಖ್ಯರಸ್ತೆ ತಾಲೂಕು ಕ್ರೀಡಾಂಗಣದ ರಸ್ತೆ, ಕಾಲೇಜು ಹೆದ್ದಾರಿ ರಸ್ತೆಗಳ ಬಳಿ ತಾಲೂಕಿನ ತೆಕ್ಕಲಕೋಟೆ, ಹಚ್ಚೋಳ್ಳಿ, ಸಿರಿಗೇರಿ ಪೊಲೀಸ್ ಠಾಣೆಗಳ ಪಿಎಸ್ಐ ಗಳು ಮತ್ತು ಸಿಬ್ಬಂದಿಗಳನ್ನು ಕರೆಯೊಸಿ, ಈ ಎಲ್ಲಾ ಸ್ಥಳಗಳಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು.
ನಗರದಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುವ ದ್ವಿಚಕ್ರ ವಾಹನಗಳ ಸವಾರರು, ಶಿರಸ್ತ್ರಾಣ ಧರಿಸದೆ ವಾಹನ ಚಾಲನೆ ಮಾಡುವ ಸವಾರರು, ತ್ರಿಬಲ್ ರೈಡಿಂಗ್, ಮೊಬೈಲ್ ಫೋನ್ ಬಳಕೆ ಮಾಡುತ್ತಾ ಚಾಲನೆ ಮಾಡುತ್ತಿರುವವರು, ನಿರ್ಲಕ್ಷತನದ ಚಾಲನೆ ಮಕ್ಕಳಿಂದ ಚಾಲನೆ ಆಟೋ ಮತ್ತು ಟ್ರ್ಯಾಕ್ಟರ್ಗಳಲ್ಲಿ ಟೇಪ್ ರೆಕಾರ್ಡರ್ ಸ್ಪೀಕರ್ ಹಾಕಿ ವಾಹನ ಚಾಲಾಯಿಸುವುದು ಎಲ್ಲೆಂದರಲ್ಲಿ ವಾಹನಗಳ ಪಾರ್ಕಿಂಗ್ ಮಾಡುವುದು ಇಂತಹ ಎಲ್ಲ ವಾಹನ ಸವಾರರ ವಾಹನಗಳನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ತರಲಾಗಿತ್ತು ವಾಹನ ಬಿಟ್ಟು ಬಿಡಲು ಯಾರ ಒತ್ತಡಗಳಿಗೂ ಮಣಿಯದ ಪೊಲೀಸ್ ಅಧಿಕಾರಿಗಳು ಇಂತಹ ಕೃತ್ಯ ಮಾಡಿದ ಎಲ್ಲಾ ವಾಹನ ಸವಾರರನ್ನು ಒಂದೆಡೆ ಸೇರಿಸಿದ ಡಿವೈಎಸ್ಪಿ ವೆಂಕಟೇಶ್ ಎಲ್ಲರನ್ನು ಕುರಿತು ತಿಳುವಳಿಕೆ ನೀಡುತ್ತಾ ಸಂಚಾರಿ ಜಾಗೃತಿ ಮೂಡಿಸಿದರು
ನಾವು ಈಗ ಯಾವುದೇ ದಾಖಲೆಗಳ ಪರಿಶೀಲನೆ ಮಾಡಿಲ್ಲ.ಕೇವಲ ಒಂದೇ ಒಂದು ರೂಪದ ದಂಡ ವಿಧಿಸಿ ಎಲ್ಲರಿಗೂ ತಿಳುವಳಿಕೆ ಮತ್ತು ಎಚ್ಚರಿಕೆ ನೀಡಲಾಗುತ್ತಿದೆ ಯಾವುದೇ ಕಾರಣಕ್ಕೂ ಸಂಚಾರಿ ನಿಯಮಗಳನ್ನು ಮೀರಬಾರದು ಈಗಾಗಲೇ ನಗರದಲ್ಲಿ ಅಪಘಾತಗಳು ಆಗುತ್ತಿದ್ದು ವೃದ್ಧರು, ಮಹಿಳೆಯರು, ಮಕ್ಕಳು ಶಾಲಾ ವಿದ್ಯಾರ್ಥಿಗಳಿಂದ ಬೇಜವಾಬ್ದಾರಿ ವಾಹನಗಳ ಚಾಲನೆ ಕಂಡು ಭಯಭೀತರಾಗಿ ಅನೇಕ ದೂರಗಳನ್ನು ನೀಡಿದ್ದಾರೆ ಆದ್ದರಿಂದ ಇನ್ನು ಮುಂದೆ ಕಠಿಣ ರೂಪದ ಸಂಚಾರಿ ಕಾನೂನುಗಳನ್ನು ಅನ್ವಯ ಮಾಡಲಾಗುತ್ತದೆ ಆದ್ದರಿಂದ ಬೈಕುಗಳಲ್ಲಿ ತ್ರಿಬಲ್ ರೈಡಿಂಗ್ ನಿರ್ಲಕ್ಷತನದ ಚಾಲನೆ ರ್ಯಾಶ್ ಡ್ರೈವಿಂಗ್ ಮಕ್ಕಳಿಂದ ವಾಹನ ಚಾಲನೆ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವ ವಾಹನಗಳನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸಲಾಗುವುದು ಆಗ ದಂಡದ ರೂಪ ಹೆಚ್ಚಿನ ಮೊತ್ತದ್ದಾಗಿರುತ್ತದೆ. ಈಗ ಕೇವಲ ತಿಳುವಳಿಕೆ ನೀಡಿ ಸಣ್ಣ ಮೊತ್ತದ ದಂಡದೊಂದಿಗೆ ಎಚ್ಚರಿಕೆ ನೀಡಲಾಗಿದೆ ಆದ್ದರಿಂದ ಎಲ್ಲರೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿರುಗುಪ್ಪ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಣ್ಣ, ತೆಕ್ಕಲಕೋಟೆ ಪೊಲೀಸ್ ಠಾಣೆಯ ಪಿಎಸ್ಐ ಶಾಂತಮೂರ್ತಿ, ಸಿರಿಗೇರಿ ಪೊಲೀಸ್ ಠಾಣೆಯ ಸದ್ದಾಂ ಹುಸೇನ್, ಹಚ್ಚೋಳ್ಳಿ ಪೊಲೀಸ್ ಠಾಣೆ ಪಿಎಸ್ಐ ಪಂಪಾಪತಿ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಮತ್ತು ಈ ಜಾಗೃತಿ ಸಂಚಾರಿ ವೇಳೆ ಸಿಕ್ಕು ಬಿದ್ದಿದ್ದ ಸುಮಾರು ನೂರಕ್ಕೂ ಹೆಚ್ಚು ಜನ ವಾಹನ ಚಾಲಕರು ಮತ್ತು ಸಾರ್ವಜನಿಕರು ಇದ್ದರು