ಸುದ್ದಿಮೂಲ ವಾರ್ತೆ
ಮೈಸೂರು, ಅ.5:ವಿಶ್ವ ಹಿಂದೂ ಪರಿಷತ್ನ ಬಜರಂಗ ದಳದಿಂದ ನಡೆಯುತ್ತಿರುವ ಶೌರ್ಯ ಜಾಗರಣ ರಥಯಾತ್ರೆಯನ್ನು ನಂಜನಗೂಡು ಮುಖ್ಯರಸ್ತೆಯ ಗಣಪತಿ ಸಚ್ಚಿದಾನಂದ ಆಶ್ರಮದ ಬಳಿ ಗುರುವಾರ ಭವ್ಯವಾಗಿ ನಡೆಸಲಾಯಿತು.
ಗಣಪತಿ ಆಶ್ರಮದ ಕಿರಿಯ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ಸ್ವಾಮೀಜಿ ಸ್ವಾಗತಿಸಿದರು. ಇದೇ ವೇಳೆ ಕಲಾತಂಡ, ವೀರಗಾಸೆ, ಪೂರ್ಣಕುಂಭದೊಡನೆ ಬರಮಾಡಿಕೊಳ್ಳಲಾಯಿತು.
ಮೆರವಣಿಗೆಯೂ ವಿನಯ ಮಾರ್ಗದ ಸಂಗೀತ ಕಾರ್ನರ್, ರಾಜ್ಕುಮಾರ್ ರಸ್ತೆಯ ಬಿಎಸ್ಎನ್ಎಲ್ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಬಳಿಕ ತ್ರಿವೇಣಿ ಸರ್ಕಲ್, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಸಭಾ ಕಾರ್ಯಕ್ರಮ ನಡೆಯಿತು. ಆರ್ ಗೇಟ್ ಸರ್ಕಲ್, ಗನ್ ಹೌಸ್ ಮೂಲಕ ಸಾಗಿ ಹುಣಸೂರು ರಸ್ತೆ ಬಿಳಿಕೆರೆಯಲ್ಲಿ ಬೀಳ್ಕೊಡಲಾಯಿತು.
ಸೆ.25ರಂದು ಚಿತ್ರದುರ್ಗದಿಂದ ಪ್ರಾರಂಭವಾಗಿರುವ ಯಾತ್ರೆಯೂ ಸನಾತನ ಧರ್ಮ ರಕ್ಷಣೆ ಉದ್ದೇಶ ಹೊಂದಿದೆ. ಯುವ ಪೀಳಿಗೆಗೆ ಧರ್ಮ ರಕ್ಷಣೆಯಲ್ಲಿ ಬಲಿದಾನ ಹೊಂದಿದ ವೀರರ ಪರಿಚಯ ಮಾಡುವುದು ಯಾತ್ರೆಯ ಮೂಲ ಉದ್ದೇಶವಾಗಿದೆ.
ಮೆರವಣಿಗೆಯಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ವೇದಿಕೆ ಅಧ್ಯಕ್ಷ ಡಾ.ಟಿ.ಪ್ರಕಾಶ್, ಪರಿಷತ್ ಜಿಲ್ಲಾ ಕಾರ್ಯದರ್ಶಿ ಮಧುಶಂಕರ್, ಪರಿಷತ್ನ ಕಾನೂನು ವಿಭಾಗದ ಪ್ರಮುಖ್ ಅಂಬಿಕಾ, ಜಿಲ್ಲಾ ಮಹಿಳಾ ಘಟಕದ ಪ್ರಮುಖ್ ಸವಿತಾ ಘಾಟ್ಕೆ, ಜಿಲ್ಲಾ ಪ್ರಮುಖ್ ಲೋಕೇಶ್, ಮಠ ಮಂದಿರ ಪ್ರಮುಖ್ ಜನಾರ್ಧನ್ ಇದ್ದರು.