ಸುದ್ದಿಮೂಲ ವಾರ್ತೆ ಕವಿತಾಳ, ಜ.03:
ತಿಂತಿಣಿ ಬ್ರಿ್ಜ್ಿ ಕಲಬುರ್ಗಿ ವಿಭಾಗೀಯ ಕನಕ ಗುರು ಪೀಠದಲ್ಲಿ ಹಾಲುಮತ ಸಂಸ್ಕೃತಿ ಹಾಗೂ ಸಾಹಿತ್ಯ ಸಮ್ಮೇಳನ ಜ 12 ರಿಂದ 14 ರವರೆಗೆ ನಡೆಯಲಿದೆ ಎಂದು ಹಾಲುಮತ ಮಹಾಸಭಾ ಜಿಲ್ಲಾ ಅಧ್ಯಕ್ಷ ಶಿವಣ್ಣ ವಕೀಲ ಹಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಟಿಿಯಲ್ಲಿ ಮಾತನಾಡಿದ ಅವರು ವಿಶೇಷವಾಗಿ ಹಾಲುಮತ ಸಮಾಜ 2500 ವರ್ಷಗಳ ಇತಿಹಾಸ ಹೊಂದಿದೆ, ಹಾಲುಮತ ಸಮಾಜ ಧಾರ್ಮಿಕವಾಗಿ ಸಾಂಸ್ಕೃತಿಕವಾಗಿ ಉನ್ನತಿಗೊಳಿಸಲು ಈ ಕಾರ್ಯಕ್ರಮವನ್ನು ಹಮ್ಮಿಿಕೊಂಡಿದ್ದು ಪೂಜಾರಿಗಳು ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತೀರ ಹಿಂದುಳಿದಿದ್ದು ಅವರ ಕುಟುಂಬದ ಉನ್ನತಿ ಮತ್ತು ಸಮಾಜದ ಏಳಿಗೆಗಾಗಿ ಧರ್ಮದ ಜಾಗೃತಿಗಾಗಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಪಂಡಿತರು ವಿವಿಧ ವಿಷಯಗಳಲ್ಲಿ ಪರಿಣಿತಿ ಹೊಂದಿದ ತಜ್ಞರಿಂದ ಪೂಜಾರಿಗಳಿಗೆ ತರಬೇತಿ ಸಾಹಿತ್ಯ, ಸಾಂಸ್ಕೃತಿಕ ಬೋಧನೆ ನಡೆಯಲಿದೆ ಸಮಾಜ ಬಾಂಧವರು ಅದರ ಸದುಪಯೋಗವನ್ನುಪಡೆಯಬೇಕು ಎಂದು ಮಾನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಳಪ್ಪ ತೋಳ, ಮಾನ್ವಿಿ ತಾಲೂಕು ಕನಕ ಗುರು ಪೀಠದ ಅಧ್ಯಕ್ಷ ಮಲ್ಲಯ್ಯ ನಸಲಾಪುರು, ಗಂಗಪ್ಪ ದಿನ್ನಿಿ, ಮೌನೇಶ ಹಿರೇಕುರಬರು ಮತ್ತು ಕರಿಯಪ್ಪ ತಪ್ಪಲದೊಡ್ಡಿಿ ಇದ್ದರು.
ಹಾಲುಮತ ಉತ್ಸವ : ಪೂಜಾರಿಗಳಿಗೆ ತರಬೇತಿ ; ಶಿವಣ್ಣ ವಕೀಲ

