ಸುದ್ದಿಮೂಲ ವಾರ್ತೆ
ರಾಮನಗರ, ಸೆ. 14 : ಜಿಲ್ಲಾ ಸರ್ವೋದಯ ಮಂಡಲ ವತಿಯಿಂದ ಜಿಲ್ಲಾ ಕಾರಾಗೃಹದಲ್ಲಿ ಏರ್ಪಡಿಸಿದ್ದ ಖೈದಿಗಳ ಮನಃ ಪರಿವರ್ತನಾ ಕಾರ್ಯಕ್ರಮದಲ್ಲಿ ಇನ್ನೂರಕ್ಕೂ ಹೆಚ್ಚು ವಿಚಾರಣಾಧೀನ ಖೈದಿಗಳು ಭಾಗವಹಿಸಿದ್ದರು.
ಖೈದಿಗಳನ್ನು ಉದ್ದೇಶಿಸಿ ಮಾತನಾಡಿದ ಎಂ ವಿ ಶ್ರೀನಿವಾಸನ್,ಎಂ. ಕೆ. ಕೃಷ್ಣ, ಹಾರೋಹಳ್ಳಿ ಜಯರಾಂ ರವರು ವಿಷಾದನೀಯ ಸಂಗತಿ ಎಂದರೆ ಇಲ್ಲಿನ 99 ಪ್ರತಿಶತ ಬಂಧಿತರು 25 ವಯಸ್ಸಿನ ಆಸುಪಾಸಿನವರು. 60ಕ್ಕೂ ಅಧಿಕ ಮಂದಿ ಕಾಲೇಜು ಮೆಟ್ಟಿಲು ತುಳಿದವರು. ನಮ್ಮ ಯುವಜನತೆ ಎತ್ತ ಸಾಗುತ್ತಿದೆ, ಶಿಕ್ಷಣ ಮತ್ತು ಸಾಮಾಜಿಕ ಬದುಕಿನ ಅರ್ಥ ಏನು , ಮೌಲ್ಯಗಳು ಪತನದ ಪಾತಾಳ ತಲುಪಿದ್ದು ಹೇಗೆ, ಹತ್ಯೆ, ಹಗೆ, ದ್ವೇಷ, ಮತ್ಸರ -ಭವಿಷ್ಯ ಇದೆಯೇ ಎಂದರು.
ಚೆನ್ನೈ ಗಣಿತ ಸಂಸ್ಥೆಯ ನಿವೃತ್ತ ರಿಜಿಸ್ಟ್ರಾರ್ ರಾಮ ಕೃಷ್ಣ ಮಂಜ, ಅವರ ಮನೋಲ್ಲಾಸಕ್ಕೆ ವೇಣುವಾದನ, ಮೌತ್ ಆರ್ಗಾನ್ , ಜಾನಪದ ಗೀತ ಗಾಯನವನ್ನು, ನಿವೃತ್ತ ಕೆನರಾ ಬ್ಯಾಂಕ್ ಪ್ರಬಂಧಕ ಎಸ್. ನರಸಿಂಹ ಮೂರ್ತಿ, ಸರ್ವೋದಯ ಕಾರ್ಯದರ್ಶಿ ಯ. ಚಿ. ದೊಡ್ಡಯ್ಯ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಬೆಂಗಳೂರು ನಗರ ಜಿಲ್ಲಾ ಸರ್ವೋದಯ ಅಧ್ಯಕ್ಷ ಡಾ.ಗುರುರಾಜ್ ಪೋಶೆಟ್ಟಿಹಳ್ಳಿ, ಖಜಾಂಚಿ ವಿ. ಟಿ.ಹುಡೇದ ಉಪಸ್ಥಿತರಿದ್ದರು. ಜೈಲರ್ ಇಮಾಂ ಕಾಸಿಂ ವಂದನಾರ್ಪಣೆ ಸಲ್ಲಿಸಿದರು. ಸೆರೆವಾಸಿಗಳಿಗೆ ಹಣ್ಣುಗಳನ್ನೂ ನೀಡಲಾಯಿತು.