ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.13
ಅಂತಾರಾಷ್ಟ್ರೀಯ ಪರ್ವತ ದಿನಾಚರಣೆಯ ಅಂಗವಾಗಿ ಬಳ್ಳಾಾರಿಯ ನೋಪಾಸನಾ ಸಂಸ್ಥೆೆ ಮತ್ತು ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ ಮತ್ತು ರೇಂಜರ್ ತಂಡಕ್ಕೆೆ ಜಂಟಿಯಾಗಿ ಸಂಡೂರು ಪಟ್ಟಣದ ಯಶವಂತನಗರದ ಅರಣ್ಯ ಪ್ರದೇಶದಲ್ಲಿ ಏರ್ಪಡಿಸಿದ್ದ ಚಾರಣದಲ್ಲಿ 50 ವಿದ್ಯಾಾರ್ಥಿಗಳು ಪಾಲ್ಗೊೊಂಡಿದ್ದಾಾರೆ.
ನೋಪಾಸನಾ ಸಂಸ್ಥೆೆಯ ಎಂ.ಎ. ಷಕೀಬ್ ಅವರು, ವಿದ್ಯಾಾರ್ಥಿಗಳಿಗೆ ಚಾರಣ, ರಾಕ್ ಕ್ಲೈಂಬಿಂಗ್, ಲ್ಯಾಾಡರ್ ಕ್ಲೈಂಬಿಂಗ್, ಪರಿಸರ ಸಂರಕ್ಷಣೆ ಮತ್ತು ರೋಪ್ ಬಳಕೆ – ಔಷಧಿ ಸಸಿಗಳ ಕುರಿತು ; ಬರ್ಡ್ವಾಚಿಂಗ್, ಇನ್ನಿಿತರೆಗಳ ಕುರಿತು ವಿವರಿಸಿ – ವಿದ್ಯಾಾರ್ಥಿಗಳಿಗೆ ವಿಶೇಷ ಜ್ಞಾಾನ ನೀಡಿದರು.
ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಾಂಶುಪಾಲ ಡಾ. ಜಿ. ಪ್ರಹ್ಲಾಾದ್ ಚೌಧರಿ, ಸ್ಕೌೌಟ್ ಲೀಡರ್ಗಳಾದ ಎನ್. ಗಣತೆಪ್ಪ ಶೇಟ್ಟಿಿ, ಡಾ. ಗುರುಬಸಪ್ಪ ಎಸ್ ಹಾಗೂ ನೋಪಾಸನಾ ತಂಡದ ಮಲ್ಲಿಕಾರ್ಜುನ, ವೀರೇಶ್, ಪರಮೇಶ್ ಮತ್ತು ಮೇರಿ ಅವರು ತರಬೇತಿ ನೀಡಿದರು.
ವಿದ್ಯಾಾರ್ಥಿಗಳು, ನಾವೆಲ್ಲರೂ ಚಾರಣದ ಕುರಿತು ತಿಳಿಯಲು ಬಂದಿದ್ದೆೆವು. ಆದರೆ, ನಾವಿಲ್ಲಿ ಪರಿಸರ ಸಂರಕ್ಷಣೆ, ಪಕ್ಷಿ ವೀಕ್ಷಣೆ, ವಿಭಿನ್ನವಾದ ಔಷಧೀಯ ಸಸಿಗಳು – ಸಾಹಸಗಳ ಕುರಿತು ಸಾಕಷ್ಟು ಮಾಹಿತಿ ಪಡೆದೆವು. ಎಂ.ಎ. ಷಕೀಬ್ ಮತ್ತು ಅವರ ತಂಡವು, ಪ್ರತಿ ವಿದ್ಯಾಾರ್ಥಿಗೂ ಸಾಹಸಗಳು ಮತ್ತು ಚಾರಣ ಇನ್ನಿಿತರೆಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಸಾಕಷ್ಟು ವಿಶೇಷಗಳನ್ನು ತಿಳಿದುಕೊಂಡ ಖುಷಿಯಾಗಿದೆ ಎಂದು ಹೇಳಿದರು.
ಬಳ್ಳಾರಿಯ ವಿದ್ಯಾಾರ್ಥಿಗಳಿಗೆ ಯಶವಂತನಗರದಲ್ಲಿ ಚಾರಣ

