ಸುದ್ದಿಮೂಲ ವಾರ್ತೆ ರಾಯಚೂರು, ಜ.06:
ಇಂದು ನಗರದ ಬಸವ ಕೇಂದ್ರದಲ್ಲಿ ಶರಣ ಮೇದಾರ ಕೇತಯ್ಯನವರ, ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರ ಸ್ಮರಣೆ ಹಾಗೂ ವಿಜಯಪುರ ಜ್ಞಾನ ಯೋಗಾಶ್ರಮದ ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಾಮಿಗಳ ನುಡಿನಮನ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿತ್ತುಘಿ.
ಮಹಾದೇವಪ್ಪ ಏಗನೂರ ಹರ್ಡೇಕರ ಮಂಜಪ್ಪನವರ ಬಗ್ಗೆೆ ಮಾತನಾಡಿ, ದಾಸಿಯ ಪುತ್ರನಾಗಿದ್ದ ಇವರು ಸಮಾಜದ ಕೀಳರಿಮೆಯಿಂದ ಬೇಸತ್ತು ಆರ್ಯ ಸಮಾಜದತ್ತ ಆಕರ್ಷಿತರಾಗಿದ್ದರು. ಶಿಕ್ಷಕರಾಗಿದ್ದ ಇವರಿಗೆ ಆ ಶಾಲೆಯ ಮುಖ್ಯ ಗುರುಗಳಾದ ಸಂಗಯ್ಯಬಸಯ್ಯನವರು ಒಂದು ವಚನದ ತಾಡೋಲೆಯನ್ನು ತೋರಿಸಿದರು. ಶಿಕ್ಷಕ ವೃತ್ತಿಿಗೆ ರಾಜೀನಾಮೆ ನೀಡಿ, ಪತ್ರಕರ್ತರಾಗಿ ಧನುರ್ದಾರಿ ಪತ್ರಿಿಕೆಯನ್ನು ಆರಂಭಿಸಿ, ಈ ಮೂಲಕ ಸ್ವತಂತ್ರ ಹೋರಾಟಕ್ಕಾಾಗಿ ಯುವಕರನ್ನು ಸೆಳೆಯಲು ಅನೇಕ ಲೇಖನಗಳನ್ನು ಪ್ರಕಟಿಸುತ್ತಿಿದ್ದರು ಎಂದು ಮೆಲಕು ಹಾಕಿದರು.
ಪರಮಪೂಜ್ಯಶ್ರೀ ಸಿದ್ದೇಶ್ವರ ಮಹಾಸ್ವಾಾಮಿಗಳ ಕುರಿತು ಮಾತನಾಡಿದ ಬಸವಪ್ರಭು, ಸಾಮಾಜಿಕ ಒಳಿತಿಗಾಗಿ, ಯುವಜನತೆಗೆ ನೈತಿಕ, ಆಧ್ಯಾಾತ್ಮಿಿಕ, ವೈಜ್ಞಾನಿಕ ಮನೋಭಾವನೆ ತುಂಬಿ ಉತ್ತಮ ನಾಗರಿಕರನ್ನಾಾಗಿ ಮಾಡುವ ಗುರಿಯನ್ನಿಿಟ್ಟುಕೊಂಡು ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿಯೂ ಕೂಡಾ ಪ್ರವಚನ ಮಾಡಿ ಜನಮನ್ನಣೆ ಗಳಿಸಿದರು. ಎಂದರು.
ರಾಚನಗೌಡ ಕೋಳೂರು ಅಧ್ಯಕ್ಷತೆ ವಹಿಸಿದ್ದರು. ಚನ್ನಬಸವ ಇಂಜಿನಿಯರ್, ಎ. ವೀರಭದ್ರಪ್ಪ, ಮಹಾಂತಗೌಡ ಸಿಂಧನೂರು, ಸರೋಜಾ ಮಾಲಿಪಾಟೀಲ್, ಮಲ್ಲಿಕಾರ್ಜುನ ಗುಡಿಮನಿ, ಡಾ: ಪ್ರಿಿಯಾಂಕಾ ಗದ್ವಾಾಲ್, ಪಿ. ಸೋಮಶೇಖರ ಮುಂತಾದವರು ಉಪಸ್ಥಿಿತರಿದ್ದರು.
ಮೇದಾರ ಕೇತಯ್ಯ, ಹರ್ಡೆಕರ್ ಮಂಜಪ್ಪ, ಸಿದ್ದೇಶ್ವರಶ್ರೀಗಳಿಗೆ ನುಡಿನಮನ

