ಸುದ್ದಿಮೂಲ ವಾರ್ತೆ ರಾಯಚೂರು, ಜ.22:
ತ್ರಿಿವಿದ ದಾಸೋಹಿ ಶ್ರೀ ಶಿವಕುಮಾರ ಸ್ವಾಾಮೀಜಿಯ ವರ ಪುಣ್ಯಸ್ಮರಣೆ ಅಂಗವಾಗಿ ದಾರಿ ದೀಪ ಸಂಸ್ಥೆೆ ನಗರದ ಬಸ್ ನಿಲ್ದಾಾಣದಲ್ಲಿ ಅನ್ನ ದಾಸೋಹ ಆಯೋಜಿಸಿತ್ತು.
ಇಂದು ಬೆಳಿಗ್ಗೆೆ ದಾರಿ ದೀಪ ಸಂಸ್ಥೆೆಯಿಂದ ಆಯೋಜಿಸಿದ್ದ ಅನ್ನ ದಾಸೋಹ ಕಾರ್ಯಕ್ಕೆೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ಶ್ರೀ ಶಿವಕುಮಾರ ಸ್ವಾಾಮೀಜಿಯವರ ಭಾವಚಿತ್ರಕ್ಕೆೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಯುವಕರು ಈ ರಾಷ್ಟ್ರ ಕಂಡ ಶ್ರೇಷ್ಠ ಸಂತರಾಗಿದ್ದ ಶ್ರೀ ಶಿವಕುಮಾರ ಸ್ವಾಾಮೀಜಿಯವರ ಸ್ಮರಣೆ ಆರ್ಥ ಪೂರ್ಣವಾಗಿ ಆಯೋಜಿಸಿದ್ದಕ್ಕೆೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಗಳು ನಮ್ಮೊೊಂದಿಗೆ ಇಲ್ಲದಿದ್ದರೂ ಅವರು ಹಾಕಿಕೊಟ್ಟಿಿರುವ ಸೇವಾ ಮನೋಭಾವ ಅಳವಡಿಸಿಕೊಳ್ಳುವ ಮೂಲಕ ಬದುಕು ನಡೆಸುವಂತಾಗಲಿ ಎಂದು ಸಲಹೆ ನೀಡಿದರು.
ನಂತರ ಬಸ್ ನಿಲ್ದಾಾಣದಲ್ಲಿ ಬೆಳಿಗ್ಗೆೆಯಿಂದ ಸಂಜೆಯವ ರೆಗೂ ಪ್ರಯಾಣಿಕರಿಗೆ ಅನ್ನ ದಾಸೋಹ ಮಾಡಿದರು.
ಈ ಸಂದರ್ಭದಲ್ಲಿ ದಾರಿದೀಪ ಸಂಸ್ಥೆೆಯ ಅಧ್ಯಕ್ಷ ಮಂಜುನಾಥ ಉಪಾಧ್ಯಕ್ಷ ಬಸವನಗೌಡ,ರಮೇಶ್ ಬಾದರದಿನ್ನಿಿ, ಅಶ್ವಿಿನಿ ಸಂತೋಷ್, ಹರೀಶ್ ನಾಡಗೌಡ, ಮಂಜುಗೌಡ ರಘು ಮಡಿವಾಳ, ಮುನಿಸ್ವಾಾಮಿ ಹಾಗೂ ಸಂಸ್ಥೆೆಯ ಸದಸ್ಯರು ಉಪಸ್ಥಿಿತರಿದ್ದರು.
ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಅನ್ನ ದಾಸೋಹದ ಮೂಲಕ ಸ್ಮರಣೆಗೆ ಸಚಿವ ಬೋಸರಾಜ್ ಮೆಚ್ಚುಗೆ

