ಸುದ್ದಿಮೂಲ ವಾರ್ತೆ ರಾಯಚೂರು, ಜ.06:
ವೆನೆಜುವೆಲಾದ ಮೇಲೆ ಆಕ್ರಮಣ ಕುರಿತಂತೆ ಬಿಜೆಪಿ ಸರ್ಕಾರದ ಅಂಜುಬುರುಕ ಮತ್ತು ಅಪಮಾನಕರ ನಿಲುವು ಖಂಡಿಸಿ ರಾಯಚೂರಿನಲ್ಲಿ ಸಿಪಿಐ(ಎಂ) ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದಿಂದ ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿತು.
ಇಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪಕ್ಷದ ಪದಾಧಿಕಾರಿಗಳು ಅಮೇರಿಕಾ ಅಧ್ಯಕ್ಷ ಟ್ರಂಪ್ ಪ್ರತಿಕೃತಿ ದಹಿಸಿ, ಬಿಜೆಪಿ ಸರ್ಕಾರದ ವೌನ ದೋರಣೆಗೆ ಖಂಡಿಸಿ ಆಕ್ರೋೋಶ ವ್ಯಕ್ತಪಡಿಸಿದರು.
ವೆನೆಜುವೆಲಾದ ವಿರುದ್ಧದ ದುರಾಕ್ರಮಣ ಮತ್ತು ಅಮೆರಿಕದ ಸಶಸ ಪಡೆಗಳು ಅದರ ಅಧ್ಯಕ್ಷರು ಮತ್ತು ಅವರ ಪತ್ನಿಿಯನ್ನು ಅಪಹರಿಸಿದ್ದು ಅದಕ್ಕೆೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅಂಜುಬುರುಕತನದ ಪ್ರತಿಕ್ರಿಿಯೆ ಭಾರತವು ಇತರ ರಾಷ್ಟ್ರಗಳ ಸ್ವಾಾತಂತ್ರ್ಯ ಮತ್ತು ಸಾರ್ವಭೌಮತ್ವದ ರಕ್ಷಣೆಯ ಬಗ್ಗೆೆ ದೀರ್ಘಕಾಲದಿಂದ ತಳೆದುಕೊಂಡು ಬಂದಿರುವ ನಿಲುವಿಗೆ ವಿರುದ್ಧವಾಗಿದೆ ಎಂದು ಖಂಡಿಸಿದರು.
ವಿಶ್ವಸಂಸ್ಥೆೆಯ ಚಾರ್ಟರ್ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಸಂಪೂರ್ಣ ಉಲ್ಲಂಘನೆಯ ಬಗ್ಗೆೆ ಒಂದೇ ಒಂದು ಖಂಡನೆಯ ಪದವೂ ಇಲ್ಲ ಭಾರತದ ನಿಲುವು ಬ್ರಿಿಕ್ಸ್ ಭಾಗವಾದ ಬ್ರೆೆಜಿಲ್ ಮತ್ತು ದಕ್ಷಿಣ ಆಫ್ರಿಿಕಾ ತೆಗೆದುಕೊಂಡ ನಿಲುವಿಗೆ ತದ್ವಿಿರುದ್ಧವಾಗಿದ್ದಲ್ಲದೆ, ಅಮೆರಿಕದ ಆಕ್ರಮಣವನ್ನು ನಿಸ್ಸಂದಿಗ್ಧವಾಗಿ ಮತ್ತು ಬಲವಾಗಿ ಖಂಡಿಸಿದ್ದಾರೆ . ಅಧ್ಯಕ್ಷ ಮಡುರೊ ಮತ್ತು ಅವರ ಪತ್ನಿಿಯನ್ನು ಬಿಡುಗಡೆ ಮಾಡಬೇಕೆಂದು ಒತ್ತಾಾಯಿಸಿದ್ದಾರೆ ಎಂದು ಹೇಳಿದರು.
ಮೋದಿ ಸರ್ಕಾರ ಈ ಅಪಮಾನಕರ ನಿಲುವನ್ನು ಕೈಬಿಡಬೇಕು ಮತ್ತು ವೆನೆಜುವೆಲಾದಲ್ಲಿ ಅಮೆರಿಕದ ಆಕ್ರಮಣ ಹಾಗೂ ಕಾನೂನುಬಾಹಿರ ಕೃತ್ಯಗಳ ವಿರುದ್ಧ ಸ್ಪಷ್ಟವಾಗಿ ಮಾತನಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವಿರೇಶ, ಮುಖಂಡರಾದ ಅಜೀಜ್ ಜಾಗೀರದಾರ, ಡಿ.ಎಸ್ ಶರಣಬಸವ, ರಸೂಲ್, ಸವಾರಪ್ಪ, ಎಂ.ಡಿ.ಹನ್ೀ, ನಿಸಾರ, ಜಿಲಾನಿ ಯರಗೇರಾ, ಭೀಮಯ್ಯ, ಮಾರಯ್ಯ, ಚೀನಿ, ಜಿಲಾನಿ ಪಾಷ, ಸುಜಾತ, ಮಹಾದೇವಿ ಸೇರಿದಂತೆ ಎರಡು ಪಕ್ಷಗಳ ಮುಖಂಡರು ಭಾಗವಹಿಸಿದ್ದರು.
ಟ್ರಂಪ್ ಪ್ರತಿಕೃತಿ ದಹನ ಪ್ರತಿಭಟನೆ ವೆನೆಜುವೆಲಾ ಮೇಲಿನ ದಾಳಿಗೆ ಮೋದಿ ನಿಲುವಿಗೆ ಖಂಡನೆ

