ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.24:
ಹೊಸ ವರ್ಷದ ಮತ್ತು ಸಂಕ್ರಾಾತಿ ಹಬ್ಬದ ಪ್ರಯುಕ್ತ ತುಂಗಭದ್ರಾಾ ಠೇವಣಿ 11% ಬಡ್ಡಿಿದರ ಮತ್ತು ಹಿರಿಯ ನಾಗರಿಕರಿಗೆ 0.5% ಹೆಚ್ಚಿಿನ ಬಡ್ಡಿಿದರ ವಿಶೇಷ ಠೇವಣಿ ಯೋಜನೆ ನೀಡಲಾಗುವುದು ಎಂದು ತುಂಗಭದ್ರಾಾ ಸಹಕಾರಿಯ ಸಂಸ್ಥಾಾಪಕ ಅಧ್ಯಕ್ಷ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಘೋಷಣೆ ಮಾಡಿದರು.
ಸಹಕಾರಿಯ ಕಚೇರಿಯಲ್ಲಿ ಬುಧವಾರ ಸಂಜೆ 2026ನೇ ವರ್ಷದ ನೂತನ ಕ್ಯಾಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು. 24 ವರ್ಷಗಳ ಹಿಂದೆ ಕೇವಲ ಮೂರು ಲಕ್ಷ ಬಂಡವಾಳದೊಂದಿಗೆ ಪ್ರಾಾರಂಭವಾದ ಸಹಕಾರಿ ಪ್ರಸ್ತುತ 57 ಕೋಟಿ ಠೇವಣಿ, 56 ಕೋಟಿ ಸಾಲ ನೀಡಲಾಗಿದೆ. 113 ಕೋಟಿ ಒಟ್ಟು ವ್ಯವಹಾರ ಹೊಂದಿದೆ ಎಂದು ಮಾಹಿತಿ ನೀಡಿದರು.
ಸಹಕಾರಿಯಿಂದ ಸದಸ್ಯರ ಅನುಕೂಲಕ್ಕಾಾಗಿ ವಿವಿಧ ಸಾಲದ ಯೋಜನೆಗಳನ್ನು ರೂಪಿಸಲಾಗಿದೆ. ಅದರಲ್ಲಿ ಬಂಗಾರದ ಆಭರಣಗಳ ಮೇಲೆ ಸಾಲ ಶೇ.12% ಬಡ್ಡಿಿದರ ಮತ್ತು ಶೇ.14% ಬಡ್ಡಿಿ ದರದಲ್ಲಿ ಕೃಷಿ ಉತ್ಪನ್ನಗಳ ಒತ್ತೆೆ ಸಾಲ, ಶೇ.15% ಬಡ್ಡಿಿ ದರದಲ್ಲಿ ಅಡಮಾನ ಸಾಲ. ವಾಹನ ಸಾಲ ನೀಡಲಾಗುತ್ತಿಿದೆ. ಈಗಾಗಲೇ ಎಂಟು ಶಾಖೆಗಳನ್ನು ಹೊಂದಿದ್ದು, ಮುದಗಲ್ ಪಟ್ಟಣದಲ್ಲಿ 9ನೇ ಶಾಖೆ ಜನವರಿ ತಿಂಗಳಲ್ಲಿ ಪ್ರಾಾರಂಭಿಸಲಾಗುವುದು ಎಂದರು.
ಸಹಕಾರಿಗೆ ಪ್ರಸಕ್ತ ವರ್ಷ 25 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ಈ ವರ್ಷ ಅದ್ದೂರಿಯಾಗಿ ಬೆಳ್ಳಿಿ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ. ಈ ಬೆಳ್ಳಿಿ ಹಬ್ಬದ ಸವಿ ನೆನಪಿಗಾಗಿ ಇನ್ನಷ್ಟು ವಿಶೇಷ ಯೋಜನೆಗಳನ್ನು ಗ್ರಾಾಹಕರಿಗೆ ನೀಡುವ ಉದ್ದೇಶವಿದೆ ಎಂದರು ತಿಳಿಸಿದರು.
ಈ ಸಂದರ್ಭದಲ್ಲಿ ಸಹಕಾರಿಯ ಉಪಾಧ್ಯಕ್ಷ ಎಮ್.ದೊಡ್ಡಬಸವರಾಜ್, ನಿರ್ದೇಶಕರಾದ ಕೆ.ಭೀಮಣ್ಣ ವಕೀಲರು, ಎಂ.ಲಿಂಗಪ್ಪ, ದಿಲೀಪ್ ಕುಮಾರ್ ಸಕಲೇಚಾ, ಕೆ.ಅಮರೇಶಪ್ಪ ಬಸಾಪುರ, ಸಿದ್ರಾಾ ಮೇಶ ಮನ್ನಾಾಪುರ, ಸಿದ್ದೇಶ್ವರ ಗುರಿಕಾರ, ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕ ಹನುಮಂತ ಬೇರ್ಗಿ ಹಾಗೂ ವ್ಯವಸ್ಥಾಾಪಕರು ಹಾಗೂ ಸಿಬ್ಬಂದಿ ಇದ್ದರು.
ತುಂಗಭದ್ರಾ ಸಹಕಾರಿಯ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ನೂತನ ವರ್ಷಕ್ಕೆ ವಿಶೇಷ ಠೇವಣಿ ಯೋಜನೆ – ಕೆ.ವಿರೂಪಾಕ್ಷಪ್ಪ

