ಸುದ್ದಿಮೂಲ ವಾರ್ತೆ ಕಾರಟಗಿ, ಸೆ.29:
ತುಂಗಭದ್ರಾಾ ಎಡಂಡೆ ನಾಲೆಯ 31ನೇ ಉಪ ಕಾಲುವೆಯ ಕೊನೆ ಭಾಗದಲ್ಲಿ ಸುಮಾರು ವರ್ಷಗಳಿಂದ ನೀರು ಹರಿಯದೇ ಹೂಳು ತುಂಬಿ, ಜಾಲಿ ಗಿಡಗಳು ಬೆಳೆದು ಮುಚ್ಚಿಿ ಹೋಗಿದ್ದರಿಂದ, ತುಂಬಿದ ಹೂಳು ತಗೆದು, ಸ್ವಚ್ಛಗೊಳಿಸಿ ಸಿಸಿ (ಲೈನಿಂಗ್) ಕಾಮಗಾರಿಗೆ ಸರ್ಕಾರದಿಂದ 20 ಕೋಟಿರೂ. ಟೆಂಡರ್ ಕರೆಯಲಾಗಿದೆ. ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಸೋಮವಾರ ತಾಲೂಕಿನ ಉಳೇನೂರು ಏತನೀರಾವರಿ ಯೋಜನೆ ಉದ್ಘಾಾಟಿಸಿ ಅವರು ಮಾತನಾಡಿದ ಅವರು, ಕಿಂದಿಕ್ಯಾಾಂಪ್ ಮತ್ತು ಬುಳ್ಳಾಾಬಾಯಿಕ್ಯಾಾಂಪ್ನ ನೀರು ಬಾದಿತ ಜಮೀನುಗಳಿಗೂ ಮುಂದಿನ ದಿನ ಉಳೇನೂರು ಯೋಜನೆ ಮಾದರಿಯಲ್ಲಿ ಯೋಜನೆ ರೂಪಿಸಿ ಅನುಷ್ಠಾಾನಕ್ಕೆೆ ತರುವ ಮೂಲಕ ನೀರುಣಿಸಲು ಪ್ರಯತ್ನಿಿಸುವೆ. ಉಳೇನೂರು ಏತ ನೀರಾವರಿಯಿಂದ ಉಳೇನೂರು, ಬೆನ್ನೂರು ಸೆರಿದಂತೆ ನದಿ ಪಾತ್ರದ ಗ್ರಾಾಮಗಳ ರೈತರು ತಮ್ಮ ಜಮೀನಿಗೆ ನದಿಯಲ್ಲಿ ನೀರಿನ ಕೊರತೆಯಾಗುತ್ತದೆ ಎಂದು ಆತಂಕ ಪಡಬೇಕಿಲ್ಲ. ನಿಮ್ಮ ಹಿತವನ್ನೂ ಕಾಪಾಡುವೆ ಎಂದರು.
ನನಗೆ ಕನಕಗಿರಿ ಕ್ಷೇತ್ರದ ಜನ ರಾಜಕೀಯ ಜೀವನ ಕೊಟ್ಟಿಿದ್ದೀರಿ. ನನ್ನನ್ನು ಶಾಸಕ ಮತ್ತು ಸಚಿವನಾಗಿಸಿದ್ದೀರಿ. ಹೀಗಾಗಿ ನಾನು ಕಳೆದ 2008ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ನವಲಿ ಬಳಿ ರೈಸ್ ಟೆಕ್ಲಾಾಲೋಜಿಪಾರ್ಕ್ ಅನುಷ್ಠಾಾನಗೊಳಿಸಿದೆ. ಕನಕಗಿರಿ-ಕಾರಟಗಿ ತಾಲೂಕು ಘೋಷಣೆ ಮಾಡಿಸಿದೆ. ಕನಕಗಿರಿ ಪಟ್ಟಣ ಕನಕಗಿರಿ ಪಟ್ಟಣ ಪಂಚಾಯ್ತಿಿ, ಕಾರಟಗಿ ಪುರಸಭೆಯನ್ನಾಾಗಿ ಮೇಲರ್ದ್ಜೆೆಗೇರಿಸಿದೆ. ನಂತರ ಎರಡನೇ ಬಾರಿಗೆ ಶಾಸಕ, ಸಚಿವನಾದ ಬಳಿಕ 2013ರ ಕಾಂಗ್ರೆೆಸ್ ಸರ್ಕಾರದಲ್ಲಿ ಕನಕಗಿರಿ ತಾಲೂಕಿನ ಒಣ ಬೇಸಾಯದ ಪ್ರದೇಶಗಳ ವಿವಿಧ ಕೆರೆಗಳಿಗೆ ತುಂಗಭದ್ರಾಾ ನದಿ ನೀರು ಭರ್ತಿ ಯೋಜನೆ ಕಾರ್ಯರೂಪಕ್ಕೆೆ ತಂದಿದ್ದೆೆ. ಊಳೇನೂರು ಏತ ನೀರಾವರಿ ಯೋಜನೆ ಮಂಜೂರು ಮಾಡಿಸಿದ್ದೆೆ ಎಂದರು.
ಈಗ ಮೂರನೇ ಭಾರಿಗೆ ಶಾಸಕ, ಸಚಿವನಾಗಿ ಊಳೇನೂರು ಏತ ನೀರಾರಿ ಈ ಯೋಜನೆ ಕಾರ್ಯಗತಗೊಳಿಸಿರುವೆ. ಕಾರಟಗಿ-ಕನಕಗಿರಿಯಲ್ಲಿ ಪ್ರಜಾಸೌಧ, ಎರಡೂ ಕಡೆ ತಲಾ 36 ಕೋಟಿರೂ. ವೆಚ್ಚದ 100 ಹಾಸಿಗೆ ಆಸ್ಪತ್ರೆೆ, ಕನಕಗಿರಿ ಪಟ್ಟಣಕ್ಕೆೆ 160 ಕೋಟಿರೂ. ಶಾಶ್ವತ ಶುದ್ಧ ಕುಡಿಯುವ ನೀರು, ಸಿರಿವಾರದ ಬಳಿ 300 ಎಕರೆ ಪ್ರದೇಶದಲ್ಲಿ ಹೈಟೆಕ್ ತೋಟಗಾರಿಕೆ ಪಾರ್ಕ್ ಯೋಜನೆಗಳನ್ನು ಮಂಜೂರು ಮಾಡಿಸಿದ್ದು ಈ ಎಲ್ಲ ಯೋಜನೆಗಳಿಗೆ ಮುಂದಿನ ತಿಂಗಳ ಮುಖ್ಯಮಂತ್ರಿಿಗಳು ಕೊಪ್ಪಳದಲ್ಲಿ ಚಾಲನೆ ನೀಡಲಿದ್ದಾಾರೆ ಎಂದರು.
ಉಳಿದ ಅವಧಿಯಲ್ಲಿ ಕ್ಷೇತ್ರದ ಎಲ್ಲ ರಸ್ತೆೆ ದುರಸ್ಥಿಿಗೊಳಸಿ ಸುಗಮ ಸಂಚಾರಕ್ಕೆೆ ಅನುಕೂಲ ಮಾಡಿಕೊಡುವೆ. ಕಾರಟಗಿ ಪಟ್ಟಣಕ್ಕೂ ಶಾಶ್ವತ ಶುದ್ಧ ಕುಡಿಯುವ ನೀರಿನ ಯೋಜನೆ ರೂಪಿಸಿ ಸರ್ಕಾರಕ್ಕೆೆ ಅನುದಾನ ಮಂಜೂರಿಗೆ ಪ್ರಸ್ತಾಾವನೆ ಸಲ್ಲಿಸಲಾಗಿದೆ. ಕನಕಗಿರಿ ಹಾಗೂ ಕಾರಟಗಿ ಪಟ್ಟಣಗಳಲ್ಲಿ ಒಳ ಚರಂಡಿ ಯೋಜನೆ ಮುಂದಿನ ದಿನಗಳಲ್ಲಿ ಅನುಷ್ಠಾಾನಗೊಳಿಸಲು ಮುಂದಾಗಿರುವೆ. ನನ್ನ ಕ್ಷೇತ್ರದಲ್ಲಿ ಇತಿಹಾಸ ಪುಟದಲ್ಲಿ ಬರೆದಿಡುವ ಜನೋಪಯೋಗಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಾಾಮಾಣಿಕ ಪ್ರಯತ್ನ ಮಾಡುವೆ ಎಂದರು.
ತುಂಗಭದ್ರಾಾ ಎಡದಂಡೆ : 31 ಉಪಕಾಲುವೆಗೆ 20 ಕೋ.ರೂ – ತಂಗಡಗಿ
