ಸುದ್ದಿಮೂಲವಾರ್ತೆ
ಕೊಪ್ಪಳ ಜು 04:ದೇವರ ದರ್ಶನಕ್ಕೆ ಬರುವ ಭಕ್ತರು ನದಿಯಲ್ಲಿ ಪುಣ್ಯ ಸ್ನಾನ ಮಾಡಿದರೆ ಪವಿತ್ರವಾಗುತ್ತೇವೆ ಎಂದು ನಂಬಿಕೊಂಡಿದ್ದಾರೆ . ಆದರೆ ಈ ಬಾರಿ ಮಳೆ ಇಲ್ಲದೆ ಇರುವದರಿಂದ ತುಂಗಭದ್ರಾ ನದಿಯಲ್ಲಿ ನೀರು ಇಲ್ಲ. ನದಿಯ ಗುಂಡಿಯಲ್ಲಿ ನಿಂತ ಮಲೀನ ನೀರಿನಲ್ಲಿಯೇ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಇದು ಕೊಪ್ಪಳ ತಾಲೂಕಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಹುಲಿಗಿಯ ಹುಲಿಗೆಮ್ಮ ದೇವಸ್ಥಾನದಲ್ಲಿ ಕಂಡು ಬಂದ ದೃಶ್ಯವಾಗಿದೆ.
ಸಾಮಾನ್ಯವಾಗಿ ಜೂ ತಿಂಗಳಿನಲ್ಲಿ ಉತ್ತಮ ಮಳೆಯಾಗುತ್ತಿತ್ತು. ಈ ಸಂದರ್ಭದಲ್ಲಿ ನದಿಗಳಲ್ಲಿಯೂ ನೀರು ಹರಿಯುತ್ತಿತ್ತು. ಈ ವರ್ಷ ಜುಲೈ ತಿಂಗಳು ಬಂದರೂ ವ್ಯಾಪಕ ಮಳೆಚಿಗಿಲ್ಲ. ತುಂಗಭದ್ರಾ ನದಿಗೆ ನೀರು ಬಂದಿಲ್ಲ. ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣದ ತಳಮಟ್ಟಕ್ಕೆ ಕುಸಿದಿದೆ. ತುಂಗಭದ್ರಾ ನದಿಯು ಬತ್ತಿ ಹೋಗುವ ಸ್ಥಿತಿಯಲ್ಲಿದೆ. ಕೆಲವು ಕಡೆ ನದಿಯಲ್ಲಿ ಗುಂಡಿಗಳಲ್ಲಿ ನೀರು ನಿಂತಿದೆ. ಈ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ.
ಕೊಪ್ಪಳ ತಾಲೂಕಿನ ಆದಿಪರಾಶಕ್ತಿ ಎಂಬ ಖ್ಯಾತಿ ಹೊಂದಿರುವ ಹುಲಿಗಿಯ ಶ್ರೀ ಹುಲಿಗೆಮ್ಮ ದರ್ಶನಕ್ಕೆ ಕರ್ನಾಟಕ. ಆಂಧ್ರ, ತೆಲಂಗಾಣ ಮಹಾರಾಷ್ಟ್ರದಿಂದ ಲಕ್ಷಾಂತರ ಜನ ಭಕ್ತರು ಆಗಮಿಸುತ್ತಾರೆ. ದೇವರ ದರ್ಶನಕ್ಕೆ ಬರುವ ಭಕ್ತರು ಪಕ್ಕದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡುವುದು ವಾಡಿಕೆ. ಆದರೆ ಈ ಬಾರಿ ತುಂಗಭದ್ರಾದಲ್ಲಿ ನೀರು ಇಲ್ಲ. ನದಿಯಲ್ಲಿಯ ಗುಂಡಿಗಳಲ್ಲಿ ನೀರು ನಿಂತಿವೆ. ಅಲ್ಲಿಯೇ ಸ್ನಾನ ಮಾಡುವ ಭಕ್ತರು. ಅಲ್ಲಿಯ ನೀರು ಹಾಗು ನದಿ ಪಾತ್ರವು ಸಂಪೂರ್ಣವಾಗಿ ಕಲುಷಿತಗೊಂಡಿದೆ. ನದಿ ನೀರು ವಾಸನೆ ಇದೆ. ಆದರೆ ಭಕ್ತರು ಸ್ನಾನ ಮಾಡುವ ಸಂಪ್ರಾದಾಯದಂತೆ ಇದೇ ನೀರಿನಲ್ಲಿ ಸ್ನಾನ ಮಾಡುತ್ತಿದ್ದಾರೆ. ಇಲ್ಲಿ ಸ್ನಾನ ಘಟ್ಟವಿಲ್ಲ. ನದಿಯು ಕಲುಷಿತಗೊಂಡರೂ ಅದನ್ನು ಸ್ವಚ್ಛಗೊಳಿಸಿಲ್ಲ. ನದಿಯಲ್ಲಿ ಕಸ, ಪ್ಲಾಸ್ಟಿಕ್ ಎಸೆಚಿiÀುದಂತೆ ಕ್ರಮ ವಹಿಸಬೇಕಾದ ಹುಲಿಗೆಮ್ಮ ದೇವಸ್ಥಾನ ಸಮಿತಿಯ ಇತ್ತ ನೋಡಿಲ್ಲ ಎಂದು ಸ್ನಾನಕ್ಕೆ ಬಂದ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯನ್ನು ಕೇಳಿದರೆ, ಮಳೆ ಇಲ್ಲದೆ ನದಿಯಲ್ಲಿ ನೀರು ಹರಿಯುತ್ತಿಲ್ಲ. ಸ್ನಾನಕ್ಕೆ ಬರುವ ಭಕ್ತರಿಗಾಗಿ ನಾಲ್ಕು ಕಡೆ ಬೋರವೆಲ್ ಹಾಕಲಾಗಿದೆ. ಆದರೂ ಕೆಲವರು ನದಿಯಲ್ಲಿ ಸ್ನಾನ ಮಾಡುತ್ತಿದ್ದಾರೆ. ಕುಡಿವ ನೀರಿಗಾಗಿ ಸಾಕಷ್ಟು ಮುತವರ್ಜಿ ವಹಿಸಲಾಗಿದೆ ಎಂದು ಹೇಳಿದ್ದಾರೆ.
ಗಂಗಾ ಸ್ನಾನ. ತುಂಗಾ ಪಾನ ಎಂಬ ನಾಣ್ನುಡಿ ಇದೆ. ಆದರೆ ತುಂಗಭದ್ರಾ ನದಿಯು ಸಂಪೂರ್ಣವಾಗಿ ಮಲೀನಗೊಂಡಿದೆ. ಈ ಮಧ್ಯೆ ನದಿಯ ದಡದಲ್ಲಿರುವ ಪುಣ್ಯಕ್ಷೇತ್ರಕ್ಕೆ ಬರುವ ಭಕ್ತರು ನೀರಿಗಾಗಿ ಪರದಾಡುವಂಥ ಸ್ಥಿತಿ ಬಂದಿದೆ.