ಸುದ್ದಿಮೂಲ ವಾರ್ತೆ ಹೊಸಪೇಟೆ, ೆ.11:
ವಿಜಯನಗರ ಸಾಮ್ರಾಾಜ್ಯದ ವೈಭವವನ್ನು ಮರುಕಳಿಸುವಂತೆ ಮಾಡುವುದು ಮತ್ತು ನದಿಯ ಪಾವಿತ್ರ್ಯತೆಯನ್ನು ಕಾಪಾಡುವುದು ತುಂಗಾರತಿಯ ಉದ್ದೇಶ ಇದಾಗಿದೆ ಎಂದು ತುಂಗಾರತಿಯಲ್ಲಿ ಭಾಗವಹಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಹೇಳಿದರು.
ಅವರು ಸತತವಾಗಿ ಮೂರನೇ ಹಂಪಿ ಉತ್ಸವವನ್ನು ಯಶಸ್ವಿಿಯಾಗಿ ಆಚರಿಸಲಾಗುತ್ತಿಿದೆ. ಪ್ರತಿ ವರ್ಷ ವಿಶೇಷವಾಗಿ ಉತ್ಸವ ಆಚರಣೆ ಮಾಡಲಾಗುತ್ತಿಿದೆ. ಹಲವು ವಿದೇಶಿಗರು ಇಂತಹ ಸ್ಥಳ ಹಾಗೂ ಉತ್ಸವ ನೋಡಲು ಸಾಧ್ಯವಾಗಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು, ಎಷ್ಟೊೊಂದು ಸುಂದರ ಹಂಪಿ, ಬಂದು ಕಣ್ತುಂಬಿಕೊಳ್ಳಿಿ ಎಂದು ಈ ಸಂದರ್ಭದಲ್ಲಿ ಹೇಳಿದರು.
ಹಂಪಿಯ ಪವಿತ್ರ ತುಂಗಭದ್ರಾಾ ನದಿಗೆ ಗೌರವ ಸಲ್ಲಿಸಲು ಮತ್ತು ಪ್ರವಾಸೋದ್ಯಮಕ್ಕೆೆ ಉತ್ತೇಜನ ನೀಡಲು ತುಂಗಾರತಿ ಕಾರ್ಯಕ್ರಮವನ್ನು ಹಂಪಿ ಉತ್ಸವದ ಅಂಗವಾಗಿ ಹಮ್ಮಿಿಕೊಳ್ಳಲಾಗುತ್ತದೆ. ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾಾನದ ಹತ್ತಿಿರವಿರುವ ತುಂಗಭದ್ರಾಾ ನದಿಯ ಸ್ನಾಾನಘಟ್ಟದ ಬಳಿ ಬುಧವಾರ ಸಂಜೆ ನಡೆಯಿತು.
ಅರ್ಚಕರು ಸಾಲಾಗಿ ನಿಂತು, ಮಂತ್ರಘೋಷಗಳ ನಡುವೆ ದೊಡ್ಡದಾದ ಕಂಚಿನ ದೀಪಗಳಿಂದ ಜಿಲ್ಲಾ ಸಚಿವರು, ಜಿಲ್ಲಾಧಿಕಾರಿ, ಮಾಜಿ ಶಾಸಕರು, ಅಧಿಕಾರಿಗಳು ನದಿಗೆ ಆರತಿ ಬೆಳಗಿದರು. ನದಿಯ ನೀರಿನಲ್ಲಿ ಪ್ರತಿಲಿಸುವ ದೀಪದ ಬೆಳಕು, ಮಂತ್ರಗಳ ಪಠಣ ಮತ್ತು ಶಂಖನಾದವು ಭಕ್ತರಲ್ಲಿ ಹಾಗೂ ಪ್ರವಾಸಿಗರಲ್ಲಿ ಭಕ್ತಿಿಭಾವ ಮೂಡಿಸಿತು.
ಹಂಪಿ ಉತ್ಸವದ ಸಮಯದಲ್ಲಿ ಈ ತುಂಗಾರತಿಗೆ ವಿಶೇಷ ಪ್ರಾಾಮುಖ್ಯತೆ ಇರುತ್ತದೆ. ಸಾವಿರಾರು ಪ್ರವಾಸಿಗರು ಈ ದೃಶ್ಯವನ್ನು ನೋಡಲು ಸೇರುತ್ತಾಾರೆ.ಕಸ ವಿಲೇವಾರಿಗೆ ಆಸ್ಪತ್ರೆೆ ನಿರ್ಲಕ್ಷ್ಯ ; ಪಾಲಿಕೆ ಸಿಬ್ಬಂದಿಗಳ ಆಕ್ರೋೋಶ
? ಸುದ್ದಿಮೂಲ ವಾರ್ತೆ ಬಳ್ಳಾಾರಿ, ೆ.04:
ಬಳ್ಳಾಾರಿ ನಗರದ ಪಾರ್ವತಿನಗರದ ಪದ್ಮಾಾವತಿ ಕಿಡ್ನಿಿಕೇರ್ ಆಸ್ಪತ್ರೆೆ ಬಸವೇಶ್ವರ ನಗರದ ದ್ವಾಾರಕಾ ಆಸ್ಪತ್ರೆೆ (ಶಾಂತಾ ಸೀತಾರಾಂ ಆಸ್ಪತ್ರೆೆ)ಯವರು ಮೆಡಿಕಲ್ ವೇಸ್ಟ್ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆೆಯನ್ನು ಕೈಗೊಳ್ಳದೇ, ತೀವ್ರ ನಿರ್ಲಕ್ಷ್ಯಕ್ಕೆೆ ಒಳಗಾಗಿದ್ದರು. ಇದರಿಂದ ಬೇಸತ್ತಿಿದ್ದ ಮಹಾನಗರ ಪಾಲಿಕೆಯ ಅಧಿಕಾರಿ – ಸಿಬ್ಬಂದಿಗಳು, ಬುಧವಾರ ಬೆಳಗ್ಗೆೆ, ಮೆಡಿಕಲ್ ವೇಸ್ಟ್ ಅನ್ನು ಆಸ್ಪತ್ರೆೆಯ ಮುಂಭಾಗದಲ್ಲಿ ಹಾಕಿ, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಳ್ಳಾಾರಿ ಮಹಾನಗರ ಪಾಲಿಕೆಯ ಮೇಯರ್ ಪಿ. ಗಾದೆಪ್ಪ ಅವರು, ಪರಿಸ್ಥಿಿತಿ ಹೀಗೇ ಮುಂದುವರೆದಲ್ಲಿ ಲೈಸೆನ್ಸ್ ರದ್ದತಿಗೆ ಮುಂದಾಗುತ್ತೇವೆ ಎಂದರು.
ಬಳ್ಳಾಾರಿ ಮಹಾನಗರ ಪಾಲಿಕೆಯ ಆಯುಕ್ತ ಪಿ.ಸಿ. ಮಂಜುನಾಥ್ ಅವರು, ಎರಡು ಆಸ್ಪತ್ರೆೆಗಳು ಮೆಡಿಕಲ್ ವೇಸ್ಟ್ ಅನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಅನೇಕಸಲ ಮನವಿ ಮಾಡಲಾಯಿತು. ಆದರೆ, ಆಸ್ಪತ್ರೆೆಗಳ ಸಿಬ್ಬಂದಿಗಳು ನಿರ್ಲಕ್ಷ್ಯವಹಿಸಿದರು. ಕಾರಣ, ನಮ್ಮ ಸಿಬ್ಬಂದಿಗಳು ಕಸವನ್ನು – ಮೆಡಿಕಲ್ ವೇಸ್ಟ್ ಅನ್ನು ಆಯಾ ಆಸ್ಪತ್ರೆೆಗಳ ಮುಂದೆ ಹಾಕಿ, ತಮ್ಮ ಸಿಟ್ಟನ್ನು ತೋರಿಸಿರುವುದು ಸ್ವಾಾಗತಾರ್ಹ ಎಂದರು.
ವಾರಣಾಸಿಯ ಗಂಗಾರತಿಯ ಮಾದರಿಯಲ್ಲಿ ಹಂಪಿಯಲ್ಲಿ ತುಂಗಾರತಿ

