ಸುದ್ದಿಮೂಲ ವಾರ್ತೆ ಸಿರುಗುಪ್ಪ, ಜ.27:
ಸಿರುಗುಪ್ಪ ನಗರದ ಹೊರವಲಯದಲ್ಲಿರುವ ಶ್ರೀಮತಿ ದಿ.ಹೊನ್ನೂರಮ್ಮ ದಿ. ಶ್ರೀ ಎಂ.ಸಿದ್ದಪ್ಪ ಪ್ರಥಮ ದರ್ಜೆ ಕಾಲೇಜು ಬಳಿ ರಾಷ್ಟ್ರೀಯ ಹೆದ್ದಾಾರಿ 150 ರಲ್ಲಿ ಮಂಗಳವಾರ ಮಧ್ಯಾಾಹ್ನ ದ್ವಿಿಚಕ್ರ ವಾಹನಕ್ಕೆೆ ಕೆಕೆಆರ್ಟಿಸಿ ಬಸ್ ಡಿಕ್ಕಿಿ ಹೊಡೆದ ಕಾರಣ ದ್ವಿಿಚಕ್ರ ವಾಹನ ಸವಾರಿ ಮಾಡುತ್ತಿಿದ್ದ ಇಬ್ಬರು ವಿದ್ಯಾಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿಿದ್ದಾಾರೆ.
ಮೃತರು ಕುರುವಳ್ಳಿಿ ಗ್ರಾಾಮದ ಗುರು ಮಹರ್ಷಿ ಕಾಲೇಜಿನ ಡಿಪ್ಲೊೊಮಾ ವಿದ್ಯಾಾರ್ಥಿಗಳಾದ ಶಿವಲಿಂಗಮ್ಮ (20) ಮತ್ತು ಅಭಿ (22). ಮೃತರು ಇಬ್ಬರೂ ಒಂದೇ ವಾಹನದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾಾರೆ.
ಮಂಗಳವಾರ ಮಧ್ಯಾಾಹ್ನ 2.30ರ ಸುಮಾರಿಗೆ ರಸ್ತೆೆ ಅಪಘಾತ ನಡೆದಿದೆ. ಘಟನಾ ಸ್ಥಳಕ್ಕೆೆ ಬಿಜೆಪಿ ಯುವ ಮೋರ್ಚಾ ಜಿಲ್ಲಾಾ ಅಧ್ಯಕ್ಷ ಎಂ.ಎಸ್.ಸಿದ್ದಪ್ಪ ಅವರು ಆಗಮಿಸಿ, ಮೃತರ ದೇಹಗಳನ್ನು ಶವಾಗಾರಕ್ಕೆೆ ಕಳುಹಿಸುವಲ್ಲಿ ನೆರವಾಗಿ, ಮೃತ ವಿದ್ಯಾಾರ್ಥಿಗಳ ಕುಟುಂಬಗಳಿಗೆ ಸಾಂತ್ವನ ಹೇಳಿದರು.ಘಟನೆ ಕುರಿತು ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

