ಸುದ್ದಿಮೂಲ ವಾರ್ತೆ ಬಸವಕಲ್ಯಾಣ, ಡಿ.25:
ಸರ್ಕಾರಿ ಶಾಲೆ ಅಂದರೆ ನಮ್ಮದು ಎನ್ನುವ ಮನೋಭಾವ ಎಲ್ಲರಲ್ಲಿ ಬರಬೇಕು, ಸರ್ಕಾರಿ ಶಾಲೆಗಳ ಪ್ರಗತಿಗಾಗಿ ಪಾಲಕರು ಕಾಳಜಿ ವಹಿಸಬೇಕು ಎಂದು ಪತ್ರಕರ್ತ ಉದಯಕುಮಾರ ಮುಳೆ ತಿಳಿಸಿದರು.
ತಾಲೂಕಿನ ಜಾಪೂರವಾಡಿ ಗ್ರಾಾಮದ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ಸೋಮವಾರ ಜರುಗಿದ ಎಸ್ಡಿಿಎಂಸಿ ನೂತನ ಪದಾಧಿಕಾರಿಗಳ ಸಭೆ ಉದ್ಘಾಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಓದುತ್ತಿಿರುವ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶಿಕ್ಷಕರು ಹಾಗೂ ಪಾಲಕರು ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಬಡ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕಲ್ಪಿಿಸಬೇಕು ಎನ್ನುವ ಆಶಯದೊಂದಿಗೆ ಸರ್ಕಾರಿ ಶಾಲೆ ವಿದ್ಯಾಾರ್ಥಿಗಳಿಗಾಗಿ ಹತ್ತು ಹಲವು ಯೋಜನೆಗಳು ರೂಪಿಸಿ ಸರ್ಕಾರ ಜಾರಿಗೆ ತರುತ್ತಿಿದೆ, ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವ ವಾತಾವರಣ ನಿರ್ಮಾಣವಾಗಿದೆ, ಇದನ್ನು ಹೋಗಲಾಡಿಸಲು ಶಿಕ್ಷಕರು ಗಮನ ಹರಿಸಬೇಕು. ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ಖಾಸಗಿ ಶಾಲೆಗಳಿಗೆ ಮೀರಿಸುವಂತಹ ಶಿಕ್ಷಣ ಕಲ್ಪಿಿಸಬೇಕು, ಪಾಲಕರು ಸಹ ಸರ್ಕಾರಿ ಶಾಲೆಗಳ ಕಡೆಗೆ ಹೆಚ್ಚಿಿನ ಗಮನ ಹರಿಸಿ, ಶಾಲೆಯ ಶೈಕ್ಷಣಿಕ ಪ್ರಗತಿ ಬಗ್ಗೆೆ ಮೇಲಿಂದ ಮೇಲೆ ಪರಿಶೀಲಿಸಿ, ಅಗತ್ಯವಿದ್ದಾಗ ಶಿಕ್ಷಕರಿಗೆ ಸಲಹೆ, ಸೂಚನೆ ನೀಡುತ್ತ ಶಾಲೆಯ ಪ್ರಗತಿ ಕಡೆಗೆ ಕಾಳಜಿ ವಹಿಸಬೇಕು. ಅಂದಾಗ ಮಾತ್ರ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ ಶಾಲೆ ಮುಖ್ಯಗುರು ರಾಜು ನಿಂಗದ್ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಜೊತೆಗೆ ಮಕ್ಕಳ ಪಾಲಕರ ಮೇಲೂ ಅಷ್ಟೆೆ ಜವಾಬ್ದಾಾರಿ ಇದ್ದು, ಮಕ್ಕಳ ಅಭ್ಯಾಾಸದ ಕಡೆಗೆ ಪಾಲಕರು ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಶಾಲೆಯ ಸಹ ಶಿಕ್ಷಕ ಸೂರ್ಯಕಾಂತ ಭೋಸ್ಲೆೆ ಸ್ವಾಾಗತಿಸಿ, ನಿರೂಪಿಸಿದರು. ಶಿಕ್ಷಕಿ ಮಲ್ಲಮ್ಮ ಕಾಂಬಳೆ, ಶಿವರುದ್ರ ಮುಳೆ, ಪ್ರಮುಖರಾದ ಚಂದ್ರಕಾಂತ ಗಜೇಲೆ ಸೇರಿದಂತೆ ಪ್ರಮುಖರು ಉಪಸ್ಥಿಿತರಿದ್ದರು.
ಪದಾಧಿಕಾರಿಗಳು: ಎಸ್ಡಿಿಎಂಸಿ ನೂತನ ಪದಾಧಿಕಾರಿಗಳನ್ನು ಇದೇ ವೇಳೆ ಸರ್ವಾನುಮತದಿಂದ ಆಯ್ಕೆೆ ಮಾಡಿ, ನೂತನ ಪದಾಧಿಕಾರಿಗಳಿಗೆ ಸನ್ಮಾಾನಿಸಿ, ಗೌರವಿಸಲಾಯಿತು.
ವೀರಣ್ಣ ಆಲಗೂಡೆ(ಅಧ್ಯಕ್ಷ), ರೇಣುಕಾ ಗಜೇಲೆ(ಉಪಾಧ್ಯಕ್ಷೆ), ಜಗದೇವಿ ಬಸವರಾಜ, ರಾಮಚಂದ್ರ ಕ್ಷೇತ್ರೆೆ, ಪ್ರಿಿಯದರ್ಶಿನಿ ಗಿರಗಂಟೆ, ಸುಮಿತಾ ಭೀಮಣ್ಣ, ಚಂದ್ರಕಲಾ ವಾಲ್ಮೀಕ್, ಸವಿತಾ ಸೂರ್ಯವಂಶಿ, ಶಾಂತಮ್ಮ ಶ್ರಾಾವಣಕುಮಾರ, ದೀಪಿಕಾ ಅನಿಲಕುಮಾರ, ಚಂದ್ರಕಲಾ ಅವಿನಾಶ, ಸವಿತಾ ರಾಜಕುಮಾರ, ಬಾಲಿಕಾ ನಾಗೇಂದ್ರ, ಶರಣಪ್ಪ ಸೂರ್ಯವಂಶಿ, ಅನಿಲಕುಮಾರ ವೀರಣ್ಣ, ಶಿವಪ್ಪ ದಾಸೂರೆ, ಅನಿತಾ ಪ್ರಶಾಂತ (ಸದಸ್ಯರು).
ಸರ್ಕಾರಿ ಶಾಲೆ ನಮ್ಮದು ಎನ್ನುವ ಮನೋಭಾವ ಬರಲಿ : ಉದಯಕುಮಾರ ಮುಳೆ

