ಸುದ್ದಿಮೂಲ ವಾರ್ತೆ
ಹೊಸಕೋಟೆ,ಆ.28: ತಾಲೂಕಿನ ಸಿದ್ದನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2023-28ನೇ ಸಾಲಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷ ಪ್ರಕಾಶ್ಗೌಡ, ಉಪಾಧ್ಯಕ್ಷರಾಗಿ ಸುಬ್ಬಣ್ಣ ಅಯ್ಕೆಯಾಗಿದ್ದಾರೆ.
ಎಲ್ಲಾ ನಿರ್ದೇಶಕರುಗಳು ಸರ್ವಾನುಮತದಿಂದ ಒಪ್ಪಿ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಸುಬ್ಬಣ್ಣ ಒಬ್ಬರು. ನಾಮಪತ್ರ ಸಲ್ಲಿಸಿದ್ದು, ಅಂತಿಮವಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಸುವರ್ಣದೇವಿ ಘೋಷಿಸಿದರು.
ನೂತನವಾಗಿ ಅಯ್ಕೆಯಾದ ಅಧ್ಯಕ್ಷ ಪ್ರಕಾಶ್ಗೌಡ ಮಾತನಾಡಿ, ಎಲ್ಲರ ಸಹಕಾರದಿಂದ ಸಂಘವನ್ನು ಆರ್ಥಿಕವಾಗಿ ಮುನ್ನಡೆಸಲು ಶ್ರಮಿಸುತ್ತೆನೆ. ಸರಕಾರ ಹಾಗೂ ಬಮೂಲ್ನಿಂದ ಸಿಗುವಂತಹ ಎಲ್ಲಾ ಸವಲತ್ತುಗಳನ್ನು ಪಕ್ಷ ಬೇಧ ಮರೆತು ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುತ್ತೇನೆ. ಎಲ್ಲ ನಿರ್ದೆಶಕರು ಹಾಗೂ ಸಿಬ್ಬಂದಿ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಸರ್ವತೋಮುಖ ಪ್ರಗತಿಗೆ ಶಕ್ತಿ ಮೀರಿ ದುಡಿಯುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ನೂತನ ನಿದೇಶಕರಿಗೆ ಪ್ರಮಾಣ ಪತ್ರ
ವಿತರಿಸಲಾಯಿತು. ಅಧ್ಯಕ್ಷ, ಉಪಾಧ್ಯಕ್ಷರಿಗೆ ಶಾಸಕ ಶರತ್ ಬಚ್ಚೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ ಶುಭ ಕೋರಿದ್ದಾರೆ.
ಈ ಸಂದರ್ಭದಲ್ಲಿ ನೆಲವಾಗಿಲು ಎಸ್ಎಫ್ಸಿಎಸ್ ನಿರ್ದೇಶಕ ಎನ್. ಶ್ರೀನಿವಾಸ್, ಈರಪ್ಪ, ಗೋಪಾಲಸ್ವಾಮಿ, ನಾಗರಾಜಪ್ಪ, ಮಲ್ಲೇಶ, ವಜ್ರಪ್ಪ, ವೆಂಕಟೇಶ್, ಹರಿಕೃಷ್ಣ, ನಟರಾಜ, ಮಂಜುಳ, ಶಾಂತಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಹಾಲು ಪರೀಕ್ಷಕ ಬೈಯ್ಯಣ್ಣ, ಸಹಾಯಕ ಗೋವಿಂದರಾಜು ಹಾಗೂ ಗ್ರಾಮಸ್ಥರು ಹಾಜರಿದ್ದರು.