ಸುದ್ದಿಮೂಲ ವಾರ್ತೆ ಯಾದಗಿರಿ, ಜ.05:
ರಾಜ್ಯ ಲೋಕಾಯುಕ್ತ ನ್ಯಾಾಯಾಧೀಶರಾದ ರಮಾಕಾಂತ ಚವ್ಹಾಾಣ ಅವರ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರವೂ ಯಾದಗಿರಿ ನಗರದ ವಿವಿಧ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿತು.
ಪರಿಶೀಲನೆಯ ವೇಳೆ ಹಲವೆಡೆ ಕೆಲವೊಂದು ನ್ಯೂನತೆಗಳು ಕಂಡುಬಂದ ಹಿನ್ನೆೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತರು, ತಕ್ಷಣ ತಿದ್ದುಪಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಕೈಗೊಂಡ ಕ್ರಮಗಳ ವಿವರವಾದ ವರದಿಯನ್ನು ನಿಗದಿತ ಅವಧಿಯಲ್ಲಿ ಸಲ್ಲಿಸಬೇಕೆಂದು ಸೂಚನೆ ನೀಡಿದರು.
ಅಬಕಾರಿ ಇಲಾಖೆ, ಸಹಾಯಕ ಆಯುಕ್ತರ ಕಚೇರಿ, ನಗರಸಭೆ, ತಹಶೀಲ್ದಾಾರ್ ಕಚೇರಿಯ ಭೂ ದಾಖಲೆ ವಿಭಾಗ ಸೇರಿದಂತೆ ವಿವಿಧ ಕಚೇರಿಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಕಚೇರಿಗಳ ಕಾರ್ಯವೈಖರಿ, ದಾಖಲೆ ನಿರ್ವಹಣೆ, ಸಿಬ್ಬಂದಿ ಹಾಜರಾತಿ, ಸಾರ್ವಜನಿಕರಿಗೆ ನೀಡುತ್ತಿಿರುವ ಸೇವೆಗಳ ಗುಣಮಟ್ಟ ಹಾಗೂ ಸ್ವಚ್ಛತೆ ಕುರಿತು ಸೂಕ್ಷ್ಮವಾಗಿ ಪರಿಶೀಲಿಸಿದರು.
ಪರಿಶೀಲನೆಯ ವೇಳೆ ಕಂಡುಬಂದ ಕಡತಗಳ ನಿರ್ಲಕ್ಷ್ಯ ಹಾಗೂ ಕೆಲಸದ ವಿಳಂಬಗಳ ಬಗ್ಗೆೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಸೂಚನೆ ನೀಡಲಾಗಿದ್ದು, ನಿಯಮಾನುಸಾರ ತಿದ್ದುಪಡಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಕೆಲವೆಡೆ ಸಾರ್ವಜನಿಕರಿಂದ ಬಂದ ದೂರುಗಳ ಸಂಬಂಧ ದಾಖಲೆಗಳನ್ನು ಪರಿಶೀಲಿಸಿ ಸ್ಪಷ್ಟನೆ ಕೇಳಲಾಯಿತು. ಸಾರ್ವಜನಿಕರು ತಂದ ಅರ್ಜಿಗಳನ್ನು ನೋಡಿ ಸ್ಥಳದಲ್ಲೆ ಪರಿಹಾರ ದೊರಕಿಸಿಕೊಡುವಂತ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಟ್ಟು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಇದೇ ವೇಳೆ, ಕೆಲವು ಕಚೇರಿಗಳಲ್ಲಿ ಅಧಿಕಾರಿಗಳ ೆನ್ಪೇ ಸೇರಿದಂತೆ ಡಿಜಿಟಲ್ ಪಾವತಿ ಅಪ್ಲಿಿಕೇಶನ್ಗಳ ಪರಿಶೀಲನೆ ನಡೆಸಲಾಗಿದ್ದು, ಅನುಮಾನಾಸ್ಪದ ಹಣಕಾಸು ವ್ಯವಹಾರಗಳಿರುವೆಯೇ ಎಂಬುದನ್ನು ಪರಿಶೀಲಿಸಲಾಯಿತು.
ಪರಿಶೀಲನೆ ಸಂದರ್ಭದಲ್ಲಿ ಲೋಕಾಯುಕ್ತ ಡಿಎಸ್ಪಿ ಜೆ.ಹೆಚ್. ಇನಾಮದಾರ, ಮಲ್ಲಿಕಾರ್ಜುನ ಚುಕ್ಕಿಿ, ಪೂವಯ್ಯ ಕೆ.ಸಿ., ಪೊಲೀಸ್ ನಿರೀಕ್ಷಕರಾದ ಸಂಗಮೇಶ್, ಗೋವಿಂದರಾಜ, ಉಮಾಮಹೇಶ್, ಕಲ್ಲಪ್ಪ ಬಡಿಗೇರ, ಬಸವರಾಜ ಬುದ್ದಿನ್ನಿಿ, ಭೀಮನಗೌಡ ಬಿರಾದಾರ, ಪ್ರಭುಲಿಂಗಯ್ಯ ಹಿರೇಮಠ, ಸುನೀಲ್ ಮೇಗಳಮನಿ, ಬಸವರಾಜ್ ಬುಡನಿ ಸೇರಿದಂತೆ ಇನ್ನಿಿತರ ಅಧಿಕಾರಿಗಳು ಉಪಸ್ಥಿಿತರಿದ್ದರು.
ಯಾದಗಿರಿಯಲ್ಲಿ ವಿವಿಧ ಕಡೆ ಲೋಕಾಯುಕ್ತ ಅಧಿಕಾರಿಗಳ ಅನಿರೀಕ್ಷಿತ ಭೇಟಿ ಅಧಿಕಾರಿಗಳು ತರಾಟೆಗೆ, ಕ್ರಮಗಳ ಸಮಗ್ರ ವರದಿ ನೀಡಲು ಸೂಚನೆ

