ಸುದ್ದಿಮೂಲ ವಾರ್ತೆ ನವದೆಹಲಿ, ಜ.07:
ರಾಜ್ಯದಲ್ಲಿ ಕೃಷಿ ಯಾಂತ್ರೀೀಕರಣ ಪದ್ಧತಿ ಹೆಚ್ಚುತ್ತಿಿದ್ದು ಇದಕ್ಕೆೆ ಅನುಗುಣವಾಗಿ ಈ ವರ್ಷ ಕೇಂದ್ರ ಸರ್ಕಾರ 250 ಕೋಟಿ ರೂ. ಹೆಚ್ಚುವರಿ ಅನುದಾನ ನೀಡುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೃಷಿ ಸಚಿವ ಎನ್. ಚಲುವರಾಯ ಸ್ವಾಾಮಿ ಮನವಿ ಮಾಡಿದರು.
ನವದೆಹಲಿಯಲ್ಲಿ ಮಂಗಳವಾರ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಚರ್ಚೆ ನಡೆಸಿದರು.
ರಾಜ್ಯದಲ್ಲಿ ಹೆಚ್ಚುತ್ತಿಿರುವ ಯಾಂತ್ರೀೀಕರಣ ಬೇಡಿಕೆ ಗಮನಿಸಿ ಯೋಜನೆಯಡಿ ಈ ವರ್ಷಕ್ಕೆೆ ಹೆಚ್ಚುವರಿ 250 ಕೋಟಿ ರೂ. ಅನುದಾನ ಕೋರಿದರು. ಅದೇ ರೀತಿ ಮಳೆಯ ಮೇಲೆ ಅವಲಂಬಿತವಾಗಿರುವ ಕರ್ನಾಟಕದ ಕೃಷಿಯಲ್ಲಿ ಆಗಾಗ ಬೆಳೆ ನಷ್ಟಗಳನ್ನು ತಪ್ಪಿಿಸಲು ಸೂಕ್ಷ್ಮ ನೀರಾವರಿ ಯೋಜನೆಗೆ ಹೆಚ್ಚುವರಿ 250 ಕೋಟಿ ರೂಪಾಯಿ ಬೇಕು ಎಂದು ತಿಳಿಸಿದರು..
ಮೂಲಸೌಕರ್ಯ ಕೇಂದ್ರಿಿತ ಯೋಜನೆಗಳನ್ನು ಪೂರ್ಣಗೊಳಿಸಲು ಪಿಎಂ ಆರ್ಕೆವಿವೈ ಡಿಪಿಆರ್ ಅಡಿ 9.45 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಬಿಡುಗಡೆಗೆ ಮನವಿ ಮಾಡಿದರು. ಇದಲ್ಲದೆ ಈ ಯೋಜನೆ ಅಡಿ 2025-26ರಲ್ಲಿ ಬಿಡುಗಡೆಯಾಗಬೇಕಾದ ಬಾಕಿ ನಿಧಿಯನ್ನು ತುರ್ತಾಗಿ ನೀಡುವಂತೆ ಕೋರಿದರು..
ಡಿಪಿಆರ್ನಲ್ಲಿ 21.17 ಕೋಟಿ ಮತ್ತು ಎಸ್ಎಎಂನಲ್ಲಿ 1.512 ಕೋಟಿ ರೂ. ಸೇರಿ ಒಟ್ಟು 22.682 ಕೋಟಿ ರೂಪಾಯಿ ಕೊರತೆ ಇರುವುದನ್ನು ಮನವರಿಕೆ ಮಾಡಿದರು. 2024-25ರಲ್ಲಿ ಬಾಕಿ ಇದ್ದ 152.98 ಕೋಟಿ ರೂಪಾಯಿ ಬಿಲ್ಗನ್ನು 2025-26ರಲ್ಲಿ ಪಾವತಿಸಿದ್ದರಿಂದ ಈ ವರ್ಷದ ಅನುದಾನದಲ್ಲಿ ಹೆಚ್ಚಿಿನ ಕೊರತೆ ಉಂಟಾಗಿದೆ ಎಂದು ವಿವರಿಸಿದರು..
ಡಿಜಿಟಲ್ ಬೆಳೆ ಗಣತಿಗೆ ಕೇಂದ್ರ ಅನುಮೋದಿಸಿದ 25.704 ಕೋಟಿ ರೂಪಾಯಿಯಲ್ಲಿ ಎಸ್ಸಿಪಿ ಮತ್ತು ಟಿಎಸ್ಪಿಿ ಅಡಿ ಬಿಡುಗಡೆಯಾದ 3.10 ಕೋಟಿ ರೂಪಾಯಿಯನ್ನು ಸಾಮಾನ್ಯ ಶೀರ್ಷಿಕೆಯಡಿ ಪಿಎ್ಎಂಎಸ್ ಮೂಲಕ ಬಿಡುಗಡೆ ಮಾಡಿ ಹಣದ ಹರಿವನ್ನು ಸುಗಮಗೊಳಿಸುವಂತೆ ಮನವಿ ಮಾಡಿದರು.
ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಪೌಷ್ಟಿಿಕತಾ ಅಭಿಯಾನ ಅಡಿ ಹಸಿರು ಗೊಬ್ಬರ ಬೀಜ ವಿತರಣೆಗೆ ಅನುಮೋದನೆ, ಎತ್ತುಗಳಿಂದ ಎಳೆಯುವ ಉಪಕರಣಗಳು, ಸ್ಥಳೀಯ ನಿರ್ದಿಷ್ಟ ಹಸ್ತಕ್ಷೇಪಗಳಿಗೆ ಅನುಮತಿ ಕೋರಿದರು. ಹಿಂಗಾರು 2025-26ಗೆ ದ್ವಿಿದಳ ಧಾನ್ಯಗಳ ಅತ್ಮನಿರ್ಭರತಾ ಯೋಜನೆಯ ಪರಿಷ್ಕೃತ ಕ್ರಿಿಯಾ ಯೋಜನೆ ಸಲ್ಲಿಸಲಾಗಿದ್ದು, ನ್ಯೂಟ್ರಿಿಸಿರಿಯಲ್ಸ್ ಅಡಿ ಅಂತರರಾಷ್ಟ್ರೀಯ ವ್ಯಾಾಪಾರ ಮೇಳಕ್ಕೆೆ ರಾಜ್ಯದ ಕೆಟಿಪಿಪಿ ಕಾಯ್ದೆೆಯಂತೆ ಹಣ ಬಳಸಲು ಅನುಮತಿ ಕೋರಲಾಯಿತು.
ರೈತಸಿರಿ ಯೋಜನೆಯನ್ನು ರಾಜ್ಯ ನಿಯಮಗಳಂತೆ ಸಿರಿಧಾನ್ಯ ಬೆಳೆಯುವ ರೈತರಿಗೆ ಡಿಬಿಟಿ ಮೂಲಕ ಪ್ರೋೋತ್ಸಾಾಹ ನೀಡುವ ರೀತಿಯಲ್ಲಿ ಅನುಷ್ಠಾಾನಗೊಳಿಸಲು ಅನುಮೋದನೆ ಮಾಡುವಂತೆ ಮನವಿ ಮಾಡಿದರು. ಆಗಸ್ಟ್-ನವೆಂಬರ್ 2025ರ ಅವಧಿಗೆ 31,340 ಅರ್ಹ ಲಾನುಭವಿಗಳಿಗೆ ಪಿಎಂ ಕಿಸಾನ್ ಸಹಾಯಧನ ಬಿಡುಗಡೆಯಾಗದಿರುವುದನ್ನು ತಿಳಿಸಿ ತಕ್ಷಣ ಸರಿಪಡಿಸುವಂತೆ ಕೋರಿದರು.
ಜಲಾನಯನ ಅಭಿವೃದ್ಧಿಿ ಘಟಕ 2.0ರಲ್ಲಿ ರಾಜ್ಯ ದೇಶದಲ್ಲಿ ಮೊದಲ ಸ್ಥಾಾನದಲ್ಲಿದ್ದು, ಪಿಎಂಕೆಎಸ್ವೈ 3.0 ಅಡಿ 10.28 ಲಕ್ಷ ಹೆಕ್ಟೇರ್ ಜಲಾನಯನ ಮತ್ತು 193 ಸ್ಪ್ರಿಂಗ್ಶೆಡ್ ಯೋಜನೆಗಳಿಗೆ ಅನುಮೋದನೆ ಕೋರಲಾಯಿತು. ಮಣ್ಣು ಆರೋಗ್ಯ ಕಾರ್ಯಕ್ರಮದ ಅಡಿ ರದ್ದಾಗಿರುವ 4.18 ಕೋಟಿ ರೂಪಾಯಿ ಬಿಡುಗಡೆಗೆ ಒತ್ತಾಾಯಿಸಿದರು. ರಿವಾರ್ಡ್ ಅಭಿಯಾನವನ್ನು ಜೂನ್ 2027ರವರೆಗೆ ವಿಸ್ತರಿಸುವಂತೆ ಮನವಿ ಮಾಡಿದರು. ಮಂಡ್ಯದ ಹೊಸ ಕೃಷಿ ವಿಶ್ವವಿದ್ಯಾಾಲಯಕ್ಕೆೆ ಐಸಿಎರ್ಆ ಅಡಿ ಹೊಸ ಪ್ರಸ್ತಾಾವಗಳು ಮತ್ತು ಅನುದಾನಗಳಿಗೆ ಬೆಂಬಲ ಕೋರಿದರು.
ಈ ಭೇಟಿಯ ಸಂದರ್ಭದಲ್ಲಿ ರಾಜ್ಯದ ರೈತರ ಸಮಸ್ಯೆೆಗಳನ್ನು ಆದ್ಯತೆಯ ಮೇಲೆ ಪರಿಹರಿಸುವಂತೆ ಮನವಿ ಮಾಡಿದ ಚಲುವರಾಯಸ್ವಾಾಮಿ ಅವರು, ಕೇಂದ್ರದ ಬೆಂಬಲದಿಂದ ಕರ್ನಾಟಕದ ಕೃಷಿ ವಲಯವು ಇನ್ನಷ್ಟು ಬಲಗೊಳ್ಳುತ್ತದೆ ಎಂದು ವಿಶ್ವಾಾಸ ವ್ಯಕ್ತಪಡಿಸಿದರು.

