ಸುದ್ದಿಮೂಲ ವಾರ್ತೆ
ಬೆಂಗಳೂರು, ನ.25: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ 105ನೇ ಸಂಸ್ಥಾಪನಾ ದಿನಾಚರಣೆಯನ್ನು ನಗರದ ಪುರಭವನದಲ್ಲಿ ಆಚರಿಸಲಾಯಿತು.
1919ರಲ್ಲಿ ಸೇಠ್ ಸೀತಾರಾಮ್ ಪೊದ್ದಾರ್ ಅವರಿಂದ ಸ್ಥಾಪಿಸಲ್ಟಟ್ಟ ಮತ್ತು ದೇಶದ ಐದನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎನಿಸಿಕೊಂಡಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥಾಪನಾ ದಿನಾಚರಣೆಯಲ್ಲಿ ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ವರ್ಗ ಸೇರಿ ಅರ್ಥಪೂರ್ಣವಾಗಿ ಆಚರಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ವಲಯ ಮುಖ್ಯಸ್ಥ ನವನೀತ್ ಕುಮಾರ್ ಮಾತನಾಡಿ, ಬ್ಯಾಂಕಿನ ಸುದೀರ್ಘ ಪಯಣದ ಬಗ್ಗೆ ವಿವರಿಸಿದರಲ್ಲದೆ, ಬ್ಯಾಂಕ್ ತನ್ನ ಗ್ರಾಹಕರ ಸೇವೆಯತ್ತ ಬದ್ಧತೆ ಹೊಂದಿದ್ದು, ಇದೇ ಬದ್ಧತೆಯೊಂದಿಗೆ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರಿಗೆ ತಲುಪಿಸುವುದಾಗಿ ಪ್ರತಿಪಾದಿಸಿದರು.
ಇದೇ ವೇಳೆ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕಾಧಿಖಾರಿ ಎ. ಮಣಿಮೇಖ್ಲೈ ಬ್ಯಾಂಕಿನ ವಿವಿಧ ಉಪಕ್ರಮಗಳು ಮತ್ತು ಸಾಧನೆಗಳು ಮತ್ತು ಗ್ರಾಹಕರಿಗೆ ಅದರಿಂದಾಗುವ ಲಾಭಗಳ ಬಗ್ಗೆ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ತನ್ನ ಉತ್ಪನ್ನಗಳಾದ ಯೂನಿಯನ್ ಉಡಾನ್, ಯೂನಿಯನ್ ಕಾರ್ಡ್ಲೆಸ್ ಕ್ಯಾಶ್ ಪೇ, ಕಿಸಾನ್ ತತ್ಕಾಲ್, ಪಿಎಂ ಸ್ವಾನಿಧಿ ಮುಂತಾದವುಗಳನ್ನು ಬಿಡುಗಡೆ ಮಾಡಿತು. ಸಿಬ್ಬಂದಿ ವರ್ಗ ಮತ್ತು ಬ್ಯಾಂಕ್ ಗ್ರಾಹಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.