ಸುದ್ದಿಮೂಲ ವಾರ್ತೆ ಕಲಬುರಗಿ, ಜ.21:
ಕೇಂದ್ರ ಸರ್ಕಾರ ನಿರಂತರವಾಗಿ ಕಲ್ಯಾಾಣ ಕರ್ನಾಟಕ ಪ್ರದೇಶಕ್ಕೆೆ ಅಭಿವೃದ್ಧಿಿ ವಿಷಯಕ್ಕೆೆ ಬಜೆಟ್ನಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿಿರುವುದು ಖೇದಕರ್ ಸಂಗತಿಯಾಗಿದೆ. ಬರುವ ಬಜೆಟ್ ನಲ್ಲಿ ಕಲ್ಯಾಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಿಗೆ ಘೋಷಣೆ ಮಾಡಿದ ಯೋಜನೆಗಳ ಅನುಷ್ಠಾಾನ ಮತ್ತು ಹೊಸ ಯೋಜನೆಗಳ ಬಗ್ಗೆೆ ಬರುವ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಸಿಹಿ ಸುದ್ದಿ ನೀಡಬೇಕೆಂದು ದುಂಡು ಮೇಜಿನ ಸಭೆ ಒತ್ತಾಾಯಿಸಿದೆ.
ಕಲ್ಯಾಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಸವರಾಜ ದೇಶಮುಖ ಅಧ್ಯಕ್ಷತೆಯಲ್ಲಿ ಶರಣಬಸವ ವಿಶ್ವವಿದ್ಯಾಾನಿಲಯದ ಸಭಾಂಗಣದಲ್ಲಿ ದುಂಡು ಮೇಜಿನ ಸಭೆ ನಡೆಸಿ ಪ್ರಮುಖ ಅಭಿವೃದ್ಧಿಿ ಯೋಜನೆಗಳು ಕಲ್ಯಾಾಣ ಕರ್ನಾಟಕಕ್ಕೆೆ ಮಂಜೂರು ಮಾಡಲು ಆಗ್ರಹಿಸಿದೆ. ಸಭೆ ಆರಂಭಕ್ಕೂ ಪೂರ್ವ ಹಿರಿಯ ಮುತ್ಸದ್ದಿ, ಲೋಕನಾಯಕ ಡಾ.ಭೀಮಣ್ಣ ಖಂಡ್ರೆೆ ರವರ ನಿಧನ ನಿಮಿತ್ಯ ಸಂತಾಪ ಸಲ್ಲಿಸಿ, ಅವರ ಅಪಾರ ಕೂಡುಗೆ ಬಗ್ಗೆೆ ಚರ್ಚಿಸಲಾಯಿತು. ನಂತರ ಸಮಿತಿಯ ಸಂಸ್ಥಾಾಪಕ ಅಧ್ಯಕ್ಷ ಡಾ.ಲಕ್ಷ್ಮಣ ದಸ್ತಿಿ ಸೇರಿದಂತೆ ಪ್ರಮುಖರು, ಕೇಂದ್ರ ಬಜೆಟ್ ನಲ್ಲಿ ಆಗಬೇಕಾದ ಅಭಿವೃದ್ಧಿಿ ವಿಷಯಗಳು ಮಂಡಿಸಿದರು.
ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಿ ಕೇಂದ್ರ ಸರ್ಕಾರ ಬರುವ ಬಜೆಟ್ ನಲ್ಲಿ ಕಲ್ಯಾಾಣ ಕರ್ನಾಟಕ ಪ್ರದೇಶಕ್ಕೆೆ ಭಾರತ ಸರ್ಕಾರ 371 ಜೆ ಕಲಂ ಜಾರಿ ಮಾಡಿರುವಂತೆ ಇಲ್ಲಿನ ಹಿಂದುಳುವಿಕೆ ಹೋಗಲಾಡಿಸಲು ಮತ್ತು ಪ್ರಾಾದೇಶಿಕ ಅಸಮತೋಲನೆ ನಿವಾರಣೆಗೆ ಕಲ್ಯಾಾಣಕ್ಕೆೆ ವಿಶೇಷ ಪ್ಯಾಾಕೇಜ್ ಹಣ ಮಂಜೂರು ಮಾಡಲು, ಕಲಬುರಗಿ ರೈಲೈ ವಿಭಾಗೀಯ ಕಚೇರಿ ಸ್ಥಾಾಪಿಸಲು, ಕೃಷ್ಣಾಾ ಯೋಜನೆ ಕೇಂದ್ರ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು, ಮಹತ್ವಾಾಕಾಂಕ್ಷಿ ಜಿಲ್ಲೆ ರಾಯಚೂರಿನಲ್ಲಿ ಏಮ್ಸ್ ಸ್ಥಾಾಪನೆ, ಕಲ್ಯಾಾಣದಲ್ಲಿ ಐಐಟಿ ಸ್ಥಾಾಪನೆ, ಗುಜರಾತ ಮತ್ತು ಮಹಾರಾಷ್ಟ್ರ ರಾಜ್ಯಗಳ ಮಾದರಿಯಲ್ಲಿ ಇರುವಂತೆ ಕಲ್ಯಾಾಣ ಕರ್ನಾಟಕ ಪ್ರದೇಶಕ್ಕೂ ಪ್ರತ್ಯೇಕ ಕ್ರಿಿಕೆಟ್ ಸಂಘ ರಚನೆ ಮಾಡಿ ಪ್ರತ್ಯೇಕ ರಣಜಿ ತಂಡ ರಚನೆ ಮಾಡಬೇಕು.
ಅದೇರೀತಿ ಬೀದರ ಕಲಬುರಗಿ ವಿಜಾಪೂರ ರಸ್ತೆೆ,ಬೀದರ ಶ್ರೀರಂಗಪಟ್ಟಣ ರಸ್ತೆೆ, ಆಳಂದ ಲಾತೂರ ರಸ್ತೆೆಗಳು ಚತುಷ್ಪಥ ರಸ್ತೆೆಗಳನ್ನಾಾನ್ನಾಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿಿಗೆ ಮಂಜೂರಾತಿ ನೀಡಲು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯತೆಯಿಂದ ಕಲಬುರಗಿ ಎರಡನೇ ವರ್ತುಲ ರಸ್ತೆೆ ನಿರ್ಮಾಣ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ರೈಲ್ವೆೆ ಕ್ಷೇತ್ರದಲ್ಲಿ
ತಾಜಸುಲ್ತಾಾನಪೂರ – ವಾಡಿ ರೈಲ್ವೆೆ ಮಾರ್ಗ ಮಧ್ಯೆೆ ರೈಲ್ವೆೆ ದಿಂದ ದಕ್ಷಿಣ ಮಧ್ಯ ರೈಲ್ವೆೆ ವಲಯಕ್ಕೆೆ ವರ್ಗಾಯಿಸಿ ಕಲಬುರಗಿ ರೈಲೈ ಕ್ಷೇತ್ರದ ಅಭಿವೃದ್ಧಿಿಗೆ ಸ್ಪಂದಿಸುವುದು ಸೇರಿದಂತೆ ಶ್ರೀಮಂತ ಇತಿಹಾಸದಿಂದ ಮೆರೆದ ಕಲ್ಯಾಾಣ ಕರ್ನಾಟಕ ಪ್ರದೇಶದಲ್ಲಿ ಇರುವ ಪ್ರವಾಸಿ ತಾಣಗಳ ಅಭಿವೃದ್ಧಿಿಗೆ ಉತ್ತರ ಭಾರತದ ಮಾದರಿಯಲ್ಲಿ ಅಭಿವೃದ್ಧಿಿ ಪಡಿಸುವ ಯೋಜನೆಗೆ ಮಂಜೂರಾತಿ ನೀಡಲು, ಕಲಬುರಗಿ ವಿಮಾನಯಾನ ಸೇವೆ ಉಡಾನ ಯೋಜನೆಗೆ ಮುಂದುವರಿಸಿ ಕಲಬುರಗಿಯಿಂದ ವಿಮಾನಗಳ ಹಾರಾಟ ಆರಂಭಿಸಲು ಸಭೆಯ ಮೂಲಕ ಕೇಂದ್ರ ಸರ್ಕಾರಕ್ಕೆೆ ಒತ್ತಾಾಯಿಸಿದೆ.
ಸಭೆಯಲ್ಲಿ ಪ್ರೊೊ .ಆರ್. ಕೆ ಹುಡುಗಿ, ಡಾ.ಕಿರಣ್ ದೇಶಮುಖ,ಪ್ರೊೊ ಬಸವರಾಜ ಕುಮ್ನೂರ, ಪ್ರೊೊ.ಬಸವರಾಜ ಗುಲಶೆಟ್ಟ, ರಾಜ್ಯ ನೀತಿ ಆಯೋಗದ ಸದಸ್ಯರು ಮತ್ತು ಗೋವಿಂದರಾವ ನೇತೃತ್ವದ ಪ್ರಾಾದೇಶಿಕ ಅಸಮತೋಲನಾ ನಿವಾರಣಾ ಸಮಿತಿ ಸದಸ್ಯೆೆ ಸಂಗೀತಾ ಕಟ್ಟಿಿ, ಕೈಲಾಸನಾಥ ದೀಕ್ಷಿತ್,ಬಿ.ಬಿ.ನಾಯಕ, ಡಾ.ಗಾಂಧೀಜಿ ಮೋಳಕೇರೆ, ಡಾ.ಸನಾಉಲ್ಲಾ, ಡಾ.ಮಾಜೀದ ದಾಗಿ, ಡಾ.ಸದಾನಂದ ಪೆಲಾರ್ ಸೇರಿದಂತೆ ಪ್ರಮುಖ ಇದ್ದರು.
ಕೇಂದ್ರ ಬಜೆಟ್ ಕಕ ಹೋರಾಟ ಸಮಿತಿ ದುಂಡು ಮೇಜಿನ ಸಭೆ ಕಕ ಭಾಗಕ್ಕೆ ನಿಜತಾಯಿ ಧೋರಣೆ ಅನುಸರಿಸಲು ಒತ್ತಾಯ

