ಸುದ್ದಿಮೂಲ ವಾರ್ತೆ ಸಿಂಧನೂರು, ಅ.16:
ತಾಲೂಕಿನ ಜವಳಗೇರಾ ಗ್ರಾಾಮದ ಎಂಪಿ ಲಾಡ್ಸ್ ಹಾಗೂ ನಬಾರ್ಡ್ ಸಹಭಾಗಿತ್ವದಲ್ಲಿ 2.54 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಕೃಷಿ ಸಂಸ್ಕರಣೆ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಗುರುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಾರ್ಪಣೆ ಮಾಡಿದರು.
ಸಚಿವೆ ನಿರ್ಮಲಾ ಸೀತಾರಾಮನ್ ಜವಳಗೇರಾ ಗ್ರಾಾಮಕ್ಕೆೆ ಆಗಮಿಸುತ್ತಿಿದ್ದಂತೆ ದೇಶಿ ಶೈಲಿಯ ಮಹಿಳಾ ಡೊಳ್ಳಿಿನ ತಂಡದಿಂದ ಹಾಗೂ ಪುಷ್ಪಾಾರ್ಪಣೆಯ ಮೂಲಕ ಸ್ವಾಾಗತ ಕೋರಲಾಯಿತು. ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವಾದ ಕಲ್ಯಾಾಣ ಸಂಪದ ಕೇಂದ್ರವನ್ನು ರಿಬ್ಬನ್ ಕತ್ತರಿಸಿ ಲೋಕಾರ್ಪಣೆ ಮಾಡಿದರು.
ಇದೆ ವೇಳೆ ಸಚಿವರು, ಕಲ್ಯಾಾಣ ಸಂಪದ ಕಟ್ಟಡದಲ್ಲಿನ ಕಂಪನ ಜರಡಿ ಯಂತ್ರ, ಜಿಲ್ಲಾಾ ಮಿಶ್ರಣ ಸಂಗ್ರಹಗಾರ, ಜಿಲ್ಲಾಾ ಮಿಶ್ರಣ ಯಂತ್ರ, ಶುದ್ಧೀಕರಣ ಮತ್ತು ಗೆ್ರೈೈಂಡಿಂಗ್ ಯಂತ್ರ, ಬಣ್ಣ ಆಧಾರಿತ ಬೇರ್ಪಡಿಸುವ ಯಂತ್ರ, ಬೇಳೆ ಪ್ಯಾಾಕಿಂಗ್ ಯಂತ್ರ, ತಯಾರಾದ ವಸ್ತುಗಳ ಸಂಗ್ರಹಗಾರದ ವೀಕ್ಷಣೆ ನಡೆಸಿದರು.
ಈ ಸಂದರ್ಭದಲ್ಲಿ ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ.ನಾಗರಾಜು, ನಬಾರ್ಡ ಅಧ್ಯಕ್ಷ ಶಾಜಿ ಕೆ.ವಿ., ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಜಿಲ್ಲಾಾಧಿಕಾರಿ ನಿತೀಶ್ ಕೆ., ಜಿ.ಪಂ.ಸಿಇಓ ಈಶ್ವರ್ ಕಾಂದೂ, ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಪುಟ್ಟಮಾದಯ್ಯ ಎಂ., ಮುಖಂಡರಾದ ಬಸವರಾಜ ನಾಡಗೌಡ, ಸಂಜಯ್ ಪಾಟೀಲ್, ಎಂ.ದೊಡ್ಡಬಸವರಾಜ, ಜವಳಗೇರಾ ಗ್ರಾಾಪಂ ಅಧ್ಯಕ್ಷ ನಾಗಲಿಂಗ ಯಮನೂರಪ್ಪ ಹಾಗೂ ಇತರರು ಇದ್ದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ರಿಂದ ಕೃಷಿ ಸಂಸ್ಕರಣೆ, ರೈತರ ತರಬೇತಿ, ಸಾಮಾನ್ಯ ಸೌಲಭ್ಯ ಕೇಂದ್ರ ಲೋಕಾರ್ಪಣೆ
