ಸುದ್ದಿಮೂಲ ವಾರ್ತೆ
ಕೆಜಿಎಫ್, ಜು 17 : ಬಿಜಿಎಂಎಲ್ ಸ್ವರ್ಣ ಭವನದ ಕೇಂದ್ರ ಕಚೇರಿಗೆ ಕೇಂದ್ರ ಗಣಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಫರೀದಾ ನಾಯಕ್ ಭೇಟಿ ನೀಡಿ ಸದಸ್ಯರೊಂದಿಗೆ ಸಭೆ ನಡೆಸಿದರು.
ಕಾರ್ಮಿಕ ಮುಖಂಡರೊಂದಿಗೆ ಮತ್ತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ ಟಿ ಬಿ ಪಿ ಯೋಜನೆಯಲ್ಲಿ 2800 ಕುಟುಂಬಗಳಿಗೆ ಮನೆ ನೀಡಲಾಗುವುದು. ಕಾರ್ಮಿಕರಿಗೆ ಕೇಂದ್ರ ಸರ್ಕಾರ ನೀಡಬೇಕಾಗಿರುವ 52 ಕೋಟಿ ಗ್ರಾಚ್ಯುಟಿ ಹಣವನ್ನು ಆದಷ್ಟು ಬೇಗ ನೀಡುವುದಾಗಿ ತಿಳಿಸಿದರು.
ಸಂಸದ ಎಸ್ ಮುನಿಸ್ವಾಮಿ ಮಾತನಾಡಿ, ಎಸ್ ಟಿ ಬಿಪಿ ಯೋಜನೆಯ ಫಲಾನುಭವಿಗಳು ಗೊಂದಲದಲ್ಲಿದ್ದಾರೆ. ಅವರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಅವರಿಗೆ ನಗರಸಭೆಯ ಪಿ ಐ ಡಿ ನಂಬರನ್ನು ಮತ್ತು ಇ ಖಾತೆ ಸಹ ಅಕ್ಟೋಬರ್ ಒಳಗಡೆ ಮಾಡಿಕೊಡಲಾಗುವುದೆಂದು. ಗಣಿ ಕಾರ್ಮಿಕರ ಸಮಸ್ಯೆಗಳು ನಮಗೆ ಗಮನಕ್ಕೆ ಬಂದಿದೆ ಆದಷ್ಟು ಬೇಗ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜಿಎಂಎಲ್ ಕಾರ್ಮಿಕ ಮುಖಂಡರಾದ ಡಿಎಂ ಸೆಲ್ವಂ, ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು