ಸುದ್ದಿಮೂಲ ವಾರ್ತೆ ಬೆಂಗಳೂರು, ಅ.19:
ಕಳಪೆ ರಸಗೊಬ್ಬರ, ಕಳಪೆ ಕೀಟನಾಶಕಗಳು ರೈತನ ಬದುಕನ್ನು ನಾಶ ಮಾಡುತ್ತಿಿವೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಾಮಿ ಕಳವಳ ವ್ಯಕ್ತಪಡಿಸಿದರು.
ಯಲಹಂಕದ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ 33ನೇ ಸಂಸ್ಥಾಾಪನಾ ದಿನಾಚರಣೆ ಹಾಗೂ 3ನೇ ಕೃಷಿ ಕೀಟ ಜೈವಿಕ ನಿಯಂತ್ರಣ ಪ್ರದರ್ಶನವನ್ನು ಉದ್ಘಾಾಟಿಸಿ ಕೇಂದ್ರ ಸಚಿವರು ಮಾತನಾಡಿ, ಮನುಕುಲಕ್ಕೆೆ ಭೂಮಿ ಬಹಳ ಮುಖ್ಯ ಎಂಬುದನ್ನು ನಾವು ಮರೆಯಬಾರದು. ಮನುಷ್ಯನ ಆರೋಗ್ಯದಂತೆ ಭೂಮಿಯ ಆರೋಗ್ಯವು ಅತೀ ಮುಖ್ಯ. ಆದರೆ, ಕಳಪೆ ರಸಗೊಬ್ಬರ ಹಾಗೂ ಕೀಟನಾಶಕಗಳು ಮನುಷ್ಯ, ಭೂಮಿಯ ಆರೋಗ್ಯವನ್ನು ಹಾಳು ಮಾಡುತ್ತಿಿವೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ತೆಂಗು ಬೆಳೆಗಾರರು ಕಷ್ಟದಲ್ಲಿ ಇದ್ದಾರೆ. ಕಪ್ಪುುತಲೆ ಹುಳದ ಬಾಧೆಯಿಂದ ಸಂಕಷ್ಟಕ್ಕೆೆ ಸಿಲುಕಿದ್ದಾರೆ. ಸ್ವತಃ ನನ್ನ ತೋಟವು ಈ ಸಂಕಷ್ಟಕ್ಕೆೆ ತುತ್ತಾಾಗಿದ್ದು, ತೆಂಗಿನ ಮರಗಳ ಗರಿಗಳು ಒಣಗುತ್ತಿಿವೆ. ಸ್ವತಃ ನಾನೇ ಸಂಕಷ್ಟಕ್ಕೆೆ ಸಿಲುಕಿದ್ದೇನೆ ಎಂದು ಸಚಿವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿಗೆ ಹೆಚ್ಚು ಒತ್ತು ನೀಡಿದ್ದಾರೆ. ಹನ್ನೊೊಂದು ವರ್ಷಗಳ ಅವರ ಆಡಳಿತದಲ್ಲಿ ಕೃಷಿ ವಲಯಕ್ಕೆೆ ಹೆಚ್ಚು ಉತ್ತೇಜನ ಸಿಕ್ಕಿಿದೆ. ರಾಷ್ಟ್ರವು ಕೃಷಿಯಲ್ಲಿ ದೊಡ್ಡ ಸಾಧನೆಗಳನ್ನು ಮಾಡುತ್ತಿಿದೆ. ಪ್ರಧಾನಿಗಳಿಗೆ ರೈತರ ಬಗ್ಗೆೆ ಕಳಕಳಿ ಹೆಚ್ಚು, ರೈತರಿಗೆ ಆರ್ಥಿಕ ಶಕ್ತಿಿ ತುಂಬಲು ಪ್ರಯತ್ನ ಮಾಡುತ್ತಿಿದ್ದಾರೆ ಎಂದು ಇದೇ ವೇಳೆ ಸಚಿವರು ನುಡಿದರು.
ಬೇಳೆಕಾಳು ಬೆಳೆಯಲು ರೈತರು ಮುಂದಾಗಬೇಕು ಎಂದು ಪ್ರಧಾನಿಗಳು ಕರೆ ನೀಡಿದ್ದಾರೆ. ಕೇವಲ ಅಕ್ಕಿಿಯಿಂದ ಪೌಷ್ಟಿಿಕಾಂಶ ದೊರೆಯಲು ಸಾಧ್ಯವಿಲ್ಲ. ಆದ್ದರಿಂದ ದ್ವಿಿದಳ ಧಾನ್ಯದಿಂದ ಪೌಷ್ಟಿಿಕಾಂಶಗಳು ಸಿಗುತ್ತವೆ. ಈ ಹಿನ್ನೆೆಲೆಯಲ್ಲಿ ದ್ವಿಿದಳ ಧಾನ್ಯ ಉತ್ಪಾಾದನೆಗೆ ಮೋದಿ ಅವರು ಹೆಚ್ಚು ಪ್ರೋೋತ್ಸಾಾಹ ನೀಡುತ್ತಿಿದ್ದಾರೆ. ಇದಕ್ಕಾಾಗಿ ಅವರು 35,000 ಕೋಟಿ ರೂ.ಗಳ ಯೋಜನೆಯನ್ನು ಘೋಷಣೆ ಮಾಡಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಾಜೆ, ಬೆಂಗಳೂರು ಗ್ರಾಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಾ. ಸಿ.ಎನ್. ಮಂಜುನಾಥ್, ಐಸಿಎಆರ್ ನಿರ್ದೇಶಕ ಡಾ. ಸುಶೀಲ್ ಸೇರಿದಂತೆ ಅನೇಕ ಕೃಷಿ ವಿಜ್ಞಾನಿಗಳು, ವಿವಿಧ ಜಿಲ್ಲೆಗಳಿಂದ ಬಂದಿದ್ದ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊೊಂಡಿದ್ದರು.
ಹಾಗೆಯೇ, ಪ್ರಗತಿಪರ ಹಾಗೂ ನಿಸರ್ಗ ಪ್ರೇೇರಿತ ಕೃಷಿ ಮಾಡುತ್ತಿಿರುವ ಅನೇಕ ರೈತರನ್ನು ಇದೇ ಸಂದರ್ಭದಲ್ಲಿ ಸಚಿವರು ಗೌರವಿಸಿದರು. ಜತೆಗೆ, ವಿಜ್ಞಾನಿಗಳ ಆವಿಷ್ಕಾಾರಗಳನ್ನು ಅನಾವರಣಗೊಳಿಸಿದರು.