ಸುದ್ದಿಮೂಲ ವಾರ್ತೆ ರಾಯಚೂರು, ಅ.14:
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಅಕ್ಟೋೋಬರ್ 16ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಅಅದು ಬೆಳಿಗ್ಗೆೆ 11 ಗಂಟೆಗೆ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಾಮಕ್ಕೆೆ ಭೇಟಿ ನೀಡಿ, ಕೃಷಿ ಸಂಸ್ಕರಣೆ, ರೈತರ ತರಬೇತಿ ಕೇಂದ್ರ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರ ಉದ್ಘಾಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಮಧ್ಯಾಾಹ್ನ 12 ಗಂಟೆಗೆ ಜವಳಗೇರಾದಿಂದ ನಿರ್ಗಮಿಸಿ 12.20ಕ್ಕೆೆ ಸಿಂಧನೂರು ನಗರದ ನಿರೀಕ್ಷಣಾ ಮಂದಿರಕ್ಕೆೆ ತೆರಳುವರು. ಅಲ್ಲಿಂದ ಮಧ್ಯಾಾಹ್ನ 1 ಗಂಟೆಗೆ ನಿರ್ಗಮಿಸಿ ಬಳ್ಳಾಾರಿ ಜಿಲ್ಲೆಯತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.