ಸುದ್ದಿಮೂಲ ವಾರ್ತೆ ಹೊಸಪೇಟೆ, ಜ.04:
ಕಲ್ಯಾಾಣ ಕರ್ನಾಟಕ ಭಾಗದ ರೈಲ್ವೆೆ ಯೋಜನೆಗಳಿಗಾಗಿ ಕೇಂದ್ರ ಸರ್ಕಾರ ಬರೋಬ್ಬರಿ 12,9 00 ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಕೈಗೆತ್ತಿಿಕೊಂಡಿದೆ, ಎಂದು ಕೇಂದ್ರ ಜಲಶಕ್ತಿಿ ಹಾಗೂ ರೈಲ್ವೆೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ತಿಳಿಸಿದರು.
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಿಯಲ್ಲಿ ಲೆವೆಲ್ ಕ್ರಾಾಸಿಂಗ್ 35 ರ ಮೇಲ್ ಸೇತುವೆ ಕಾಮಗಾರಿ ಭೂಮಿ ಪೂಜೆ ಹಾಗೂ ಶಂಕುಸ್ಥಾಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಭಾಗದ ಅಭಿವೃದ್ಧಿಿ ಕಾಮಗಾರಿಗಳ ಕುರಿತು ಸಮಗ್ರ ಮಾಹಿತಿ ನೀಡುತ್ತಾಾ ಹಿಂದೆ ಕರ್ನಾಟಕಕ್ಕೆೆ ರೈಲ್ವೆೆ ಇಲಾಖೆಯಿಂದ ವಾರ್ಷಿಕವಾಗಿ ಕೇವಲ 882 ಕೋಟಿ ರೂ. ಅನುದಾನ ಬರುತ್ತಿಿ ತ್ತು. ಆದರೆ ಮೋದಿ ಸರ್ಕಾರ ಬಂದ ನಂತರ ವಾರ್ಷಿಕವಾಗಿ 7,500 ರಿಂದ 8,000 ಕೋಟಿ ರೂ. ಅನುದಾನ ನೀಡಲಾಗುತ್ತಿಿದೆ. ಬಳ್ಳಾಾರಿ-ಚಿಕ್ಕಜಾಜೂರು ಜೋಡಿ ಮಾರ್ಗಕ್ಕೆೆ 3,400 ಕೋಟಿ, ಬಳ್ಳಾಾರಿ ಮತ್ತು ಚಿತ್ರದುರ್ಗದ ಗಣಿಗಾರಿಕೆ ಹಾಗೂ ಮಂಗಳೂರು-ಹೈದರಾಬಾದ್ ಸಂಪರ್ಕದ ದೃಷ್ಟಿಿಯಿಂದ ಇದು ಮಹತ್ವದಾಗಿರುವ ಬಳ್ಳಾಾ ರಿ-ಚಿಕ್ಕಜಾಜೂರು ಜೋಡಿ ಮಾರ್ಗ ಯೋಜನೆಗೆ 2025ರ ಜೂನ್ನಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಸುಮಾರು 3,400 ಕೋಟಿ ರೂ. ವೆಚ್ಚ ದ ಈ ಯೋಜನೆಯು ಈ ಭಾಗದ ರೈಲ್ವೆೆ ಸಂಪರ್ಕದಲ್ಲಿ ಕ್ರಾಾಂತಿಕಾರಿ ಬದಲಾವಣೆ ತರಲಿದೆ ಎಂದು ಸಚಿವರು ತಿಳಿಸಿದರು.
ಸಂಸದರಾದ ಈ.ತುಕಾರಾಂ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕ ನೇಮಿರಾಜ್ ನಾಯಕ್, ಮಾಜಿ ಶಾಸಕ ಚಂದ್ರಾಾ ನಾಯ್ಕ್, ರೈಲ್ವೆೆ ಇಲಾಖೆಯ ಹಿರಿಯ ಅಧಿಕಾರಿಗಳು ಇನ್ನಿಿತರರು ಉಪಸ್ಥಿಿತರಿದ್ದರು.
ಕಲ್ಯಾಣ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ರೂ.12,900 ಕೋಟಿ ಅನುದಾನ : ಕೇಂದ್ರ ಸಚಿವ ವಿ. ಸೋಮಣ್ಣ

