ಸುದ್ದಿಮೂಲ ವಾರ್ತೆ ಬೆಂಗಳೂರು, ಜ.11:
ಭಾರತೀಯ ಸೇನೆಯಲ್ಲಿ ಮೇಜರ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿಿರುವ ಬೆಂಗಳೂರು ಮೂಲದ ಸ್ವಾಾತಿ ಶಾಂತಕುಮಾರ್ ಅವರು ವಿಶ್ವಸಂಸ್ಥೆೆಯ ಪ್ರಧಾನ ಕಾರ್ಯದರ್ಶಿ ನೀಡುವ ಲಿಂಗ ಸಮಾನತೆ ಪ್ರತಿಪಾದಕ ಪ್ರಶಸ್ತಿಿ 2025ಕ್ಕೆೆ ಭಾಜನರಾಗಿದ್ದಾರೆ.
ವಿವಿಧ ಕಾರ್ಯಾಚರಣೆಗಳಲ್ಲಿನ ಶ್ರೇೇಷ್ಠ ಸೇವೆಯನ್ನು ಗುರುತಿಸಿ ನೀಡುವ ಪ್ರಶಸ್ತಿಿಗಳನ್ನು ವಿಶ್ವಸಂಸ್ಥೆೆಯ ಪ್ರಧಾನ ಕಾರ್ಯದರ್ಶಿ ಆಮಟೊನಿಯೊ ಗುಟಿರೆಸ್ ಪ್ರಶಸ್ತಿಿ ಘೋಷಿಸಿದ್ದಾರೆ. ಸಂಘರ್ಷ ಪೀಡಿತ ದಕ್ಷಿಣ ಸೂಡಾನ್ನಲ್ಲಿ ಮಹಿಳೆಯರ ರಕ್ಷಣೆ, ಸಮುದಾಯದ ನೆಮ್ಮದಿಗೆ ಕೈಗೊಂಡ ಸಂವೇದನಾಶೀಲ ಕ್ರಮಗಳಿಗಾಗಿ ಸ್ವಾಾತಿ ಅವರಿಗೆ ಪ್ರಶಸ್ತಿಿ ಹುಡುಕಿಕೊಂಡು ಬಂದಿದೆ. ಸಮಾನ ಪಾಲುದಾರಿಕೆ, ಶಾಶ್ವತ ಶಾಂತಿ ಎನ್ನುವುದು ಅವರ ಧ್ಯೇಯವಾಗಿದ್ದು ಶಾಂತಿ ರಕ್ಷಣಾ ಕಾರ್ಯಾಚರಣೆಗಳ ಮುಂದಾಳತ್ವದಲ್ಲಿ ಲಿಂಗ ಸಮಾನತೆಗೆ ಒತ್ತು ನೀಡಿದ್ದಾರೆ.
ವಿಶ್ವವ್ಯಾಾಪಿ ಇರುವ ಎಲ್ಲ ಶಾಂತಿ ರಕ್ಷಣಾ ಕಾರ್ಯಚರಣೆ ಹಾಗೂ ವಿಶ್ವ ಸಂಸ್ಥೆೆಗಳಿಂದ ಬಂದ ನಾಮ ನಿರ್ದೇಶನಗಳಲ್ಲಿ ಸ್ವಾಾತಿ ಆಯ್ಕೆೆಯಾಗಿದ್ದಾರೆ. ನಾಲ್ಕು ಅಂತಿಮ ಸ್ಪರ್ಧಿಗಳ ನಡುವೆ ನಡೆದ ಮತದಾನದಲ್ಲಿ ಇವರು ಅತ್ಯಧಿಕ ಮತಗಳನ್ನು ಪಡೆದು ಪ್ರಶಸ್ತಿಿಯ ಗೌರವಕ್ಕೆೆ ಪಾತ್ರರಾಗಿದ್ದಾರೆ.
ವಿಶ್ವಸಂಸ್ಥೆೆಯ ಶಾಂತಿಪಾಲನಾ ಪಡೆಯಲ್ಲಿ ತಂಡವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸೇನೆಯಲ್ಲೂ ಲಿಂಗ ಸಮಾನತೆಯನ್ನು ಬಲಗೊಳಿಸಿದ್ದಾರೆ. ಕಾರ್ಯಾಚರಣೆ ವೇಳೆ ತಳಮಟ್ಟದ ಸಂವನಹ ಮತ್ತು ಸೇನೆಯ ಪಾತ್ರವನ್ನು ಮತ್ತಷ್ಟು ಗಟ್ಟಿಿಗೊಳಿಸಿದ್ದಾರೆ. ಚುರುಕಾದ ವಾಯು ಗಸ್ತುಗಳ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇದರಿಂದ ಸುಡಾನ್ನ 5 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಾಣವಾಗಿದೆ. ಅವರು ಗಳಿಸಿದ ಸಮುದಾಯದ ವಿಶ್ವಾಾಸ ವಿಶ್ವಸಂಸ್ಥೆೆ ಮುಂದಿನ ಕೆಲಸಗಳಿಗೂ ಪ್ರೇೇರಣೆಯಾಗಿದೆ ಎಂದು ಗುಟೆರೆಸ್ ಶ್ಲಾಾಘಿಷಿದ್ದಾರೆ.
ಬೆಂಗಳೂರಿನ ಸ್ವಾತಿ ಶಾಂತಕುಮಾರ್ಗೆ ವಿಶ್ವಸಂಸ್ಥೆ ಪ್ರಶಸ್ತಿ

