ನವದೆಹಲಿ, ಡಿ.24
ಉನ್ನಾವೊ ಅತ್ಯಾಾಚಾರ ಪ್ರಕರಣದ ಅಪರಾಧಿ ಬಿಜೆಪಿಯ ಉಚ್ಛಾಾಟಿತ ನಾಯಕ ಕುಲದೀಪ್ ಸಿಂಗ್ ಸೆಂಗರ್ ಅವರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿ ದೆಹಲಿ ಹೈಕೋರ್ಟ್ ನೀಡಿರುವು ತೀರ್ಪು ಪ್ರಶ್ನಿಿಸಿ ಸಂತ್ರಸ್ತೆೆ ಸುಪ್ರೀೀಂ ಕೋರ್ಟ್ ಮೆಟ್ಟಿಿಲೇರಿದ್ದಾರೆ.
ಸೆಂಗರ್ ಶಿಕ್ಷೆಯನ್ನು ಅಮಾನತುಗೊಳಿಸುವ ಮೂಲಕ ನನ್ನ ಕುಟುಂಬಕ್ಕೆೆ ಸಾವಿಗಿಂತ ಕಡಿಮೆ ಇಲ್ಲದ ಶಿಕ್ಷೆಯನ್ನು ನೀಡಲಾಗಿದೆ. ಇದರಿಂದ ನಾವು ಬದುಕಿದ್ದು ಸತ್ತಂತೆ ಎಂಬ ಭಾವನೆ ಮೂಡುತ್ತಿಿದೆ ಎಂದು ಸಂತ್ರಸ್ತೆೆ ದೆಹಲಿ ಹೈಕೋರ್ಟ್ ತೀರ್ಪು ಬಗ್ಗೆೆ ಬೇಸರ ವ್ಯಕ್ತಪಡಿಸಿದ್ದಾರೆ.
ಇಂತಹ ಕ್ರೂರ ಪ್ರಕರಣಗಳಲ್ಲಿ ಅಪರಾಧಿಗೆ ಜಾಮೀನು ಸಿಕ್ಕರೆ ದೇಶದ ಹೆಣ್ಣುಮಕ್ಕಳು ಹೇಗೆ ಸುರಕ್ಷಿತವಾಗಿರುತ್ತಾಾರೆ. ಹಣ ಇದ್ದವರು ಗೆಲ್ಲುತ್ತಾಾರೆ. ಹಣ ಇಲ್ಲದವರು ಸೋಲುತ್ತಾಾರೆ ಎಂಬುದಕ್ಕೆೆ ಈ ಪ್ರಕರಣ ಸ್ಪಷ್ಟ ಉದಾಹರಣೆ ಎಂದು ಸಂತ್ರಸ್ತೆೆ ವಿಷಾದ ವ್ಯಕ್ತಪಡಿಸಿದ್ದಾರೆ.
ಕುಲದೀಪ್ ಸಿಂಗ್ ಸೆಂಗರ್ ಅನುಭವಿಸುತ್ತಿಿರುವ ಜೀವಾವಧಿ ಶಿಕ್ಷೆ ದೆಹಲಿ ಹೈಕೋರ್ಟ್ ಮಂಗಳವಾರ ಅಮಾನತುಗೊಳಿಸಿತ್ತು. ಅಲ್ಲದೆ ಸಂತ್ರಸ್ತೆೆಯ ನಿವಾಸದ 5.ಕಿ.ಮೀ.ವ್ಯಾಾಪ್ತಿಿಯೊಳಗೆ ಸೆಂಗರ್ ಪ್ರವೇಶಿಸಬಾರದು ಮತ್ತು ಸಂತ್ರಸ್ತೆೆ ಹಾಗೂ ಅವರ ತಾಯಿಗೆ ಬೆದರಿಕೆ ಒಡ್ಡಬಾರದು ಎಂದು ನ್ಯಾಾಯಮೂರ್ತಿಗಳಾದ ಸುಬ್ರಮಣಿಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರ ಪೀಠ ಷರತ್ತು ವಿಧಿಸಿ ಜಾಮೀನು ನೀಡಿತ್ತು.
2019ರ ಡಿಸೆಂಬರ್ನಲ್ಲಿ ವಿಚಾರಣಾ ಕೋರ್ಟ್ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಿಸಿ ಸೆಂಗರ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಪೂರ್ಣಗೊಳ್ಳುವವರೆಗೆ ಶಿಕ್ಷೆ ಅಮಾನತಿನಲ್ಲಿಡಲಾಗಿದೆ.
ಸುಪ್ರೀೀಂ ಕೋರ್ಟ್ ಆದೇಶದ ಅನ್ವಯ ರೋಸ್ಟ್ರ್ ಪೀಠದಲ್ಲಿ ಜನವರಿ 16ರಂದು ಸೆಂಗರ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಿಗದಿಪಡಿಸಿದೆ.
ಸೆಂಗರ್ 2017ರಲ್ಲಿ ಬಾಲಕಿಯನ್ನು ಅಪಹರಣ ಮಾಡಿ ಅತ್ಯಾಾಚಾರ ಎಸಗಿದ್ದ. ಅತ್ಯಾಾಚಾರ ಪ್ರಕರಣ ಮತ್ತು ಅದಕ್ಕೆೆ ಸಂಬಂಧಿಸಿದ ಇತರ ಪ್ರಕರಣಗಳನ್ನು ಉತ್ತರ ಪ್ರದೇಶ ವಿಚಾರಣಾ ನ್ಯಾಾಯಾಲಯದಿಂದ ದೆಹಲಿ ಹೈಕೋರ್ಟ್ಗೆ ವರ್ಗಾಯಿಸುವಂತೆ ಸುಪ್ರೀೀಂ ಕೋರ್ಟ್ 2019ರಲ್ಲಿ ಆದೇಶಿಸಿತ್ತು. ಸಂತ್ರಸ್ತೆೆಯ ತಂದೆಯ ಕಸ್ಟಡಿ ಸಾವಿನ ಪ್ರಕರಣದಲ್ಲಿ ಸೆಂಗರ್ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ

