ಸುದ್ದಿಮೂಲ ವಾರ್ತೆ
ಕುಷ್ಟಗಿ,ಜೂ. 28:ಕುಷ್ಟಗಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನ ಚುನಾವಣೆ ಪ್ರಕ್ರಿಯೆಯಲ್ಲಿ ಬುಧವಾರ ಅವಿರೋಧ ಆಯ್ಕೆ ನಡೆಯಿತು.
ಜೂನ್ 19ರಂದು 12 ಕ್ಷೇತ್ರಗಳಲ್ಲಿ ಸಾಮಾನ್ಯ 5 ಸ್ಥಾನ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ತಲಾ 1, ಹಿಂದುಳಿದ ವರ್ಗ ಅ ಮತ್ತು ಬ ತಲಾ 1, ಮಹಿಳಾ ಮೀಸಲು 2 ಮತ್ತು ಸಾಲಗಾರರಲ್ಲದ ಕ್ಷೇತ್ರಕ್ಕೆ 1 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 12 ಅಭ್ಯರ್ಥಿಗಳು 12 ಕ್ಷೇತ್ರಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರು.
ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಹಿಂದುಳಿದ ವರ್ಗದ-ಅ ಕ್ಷೇತ್ರದ ಹನುಮಪ್ಪ ಹನುಮಪ್ಪ ವಡ್ಡಿಗೇರಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಪರಿಶಿಷ್ಟ ಜಾತಿ ಕ್ಷೇತ್ರದ ಹನುಮಂತ ಮರಿಯಪ್ಪ ಇಂಡಿ ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಬಸವರಾಜ ಎಸ್.ಗುರಿಕಾರ ಘೋಷಣೆ ಮಾಡಿದರು.
ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ನಿರ್ದೇಶಕರು ಹಾಗೂ ಬೆಂಬಲಿಗರೆಲ್ಲ ಸೇರಿ ಶಾಲು ಹೊದಿಸಿ ಹೂಮಾಲೆ ಹಾಕಿ ಗೌರವಿಸಿದರು.
ಈ ವೇಳೆ ಮುಖಂಡರಾದ ರವಿಕುಮಾರ್ ಹಿರೇಮಠ ಅವರು ಮಾತನಾಡಿ, ಪಟ್ಟಣದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ರೈತರ ಜೀವನಾಡಿಯಾಗಿದೆ. ಸಂಘ ಪ್ರಾರಂಭವಾದಾಗಿನಿಂದಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಈ ಹಿಂದೆ ನಿರ್ದೇಶಕರು ಹಾಗೂ ಅಧ್ಯಕ್ಷರಾದವರು ಉತ್ತಮ ಕೆಲಸ ಮಾಡಿದ್ದಾರೆ. ಅವರ ಸಲಹೆ ಪಡೆದು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಕೂಡ ಉತ್ತಮ ಕೆಲಸ ಮಾಡಿ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಈ ವೇಳೆ ನಿರ್ದೇಶಕರಾದ ಈರಪ್ಪ ಆದಪ್ಪ ತೋಟದ, ಗ್ಯಾನಪ್ಪ ರಾಮಪ್ಪ ಮಂಡಲಮರಿ, ಶಿವಪ್ಪ ಆದಪ್ಪ ಗೇಜ್ಜಲಗಟ್ಟಿ, ಸಂತೋಷ ದೊಡ್ಡಪ್ಪ ಕಂಚಿ, ಹನಮಪ್ಪ ಮಳಿಯಪ್ಪ ಬುರ್ಲಿ, ಮಾನಪ್ಪ ಬಸಪ್ಪ ಕಮ್ಮಾರ, ಅಮರೇಶ ಗುರಪ್ಪ ಕಲಕಬಂಡಿ, ಮಲ್ಲಮ್ಮ ಶಿವಪ್ಪ ಬೋಳ್ಕೊಡಿ ಹಾಗೂ ಮಲ್ಲಿಕಾರ್ಜುನ ಮಸೂತಿ, ಶರಣು ಚೂರಿ, ಶಂಕರಗೌಡ ಪಾಟೀಲ್, ಸಂಗನಗೌಡ ಜೇನರ್, ಚಂದ್ರು ವಡ್ಡಿಗೇರಿ ಸೇರಿದಂತೆ ಸಂಘದ ಸೆಕ್ರೇಟರಿ ಶೇಖಪ್ಪ ಅಬ್ಬಿಗೇರಿ ಸಿಬ್ಬಂದಿ ಚಂದ್ರಶೇಖರಯ್ಯ ಹಿರೇಮಠ, ಬಸಮ್ಮ ಶಿವಪ್ಪ ನರಸಕೊಪ್ಪ, ಬಸಪ್ಪ ಬನ್ನಿಗೋಳ ಇತರರು ಉಪಸ್ಥಿತರಿದ್ದರು.