ಸುದ್ದಿಮೂಲವಾರ್ತೆ
ಕೊಪ್ಪಳ ಏ ೦೭: ಬಿಸಿಲು ನಾಡು ಕೊಪ್ಪಳದಲ್ಲಿ ಬೇಸಿಗೆಯಲ್ಲಿ ನೆತ್ತಿಯಲ್ಲಿ ಬೆಂಕಿ ಹಾಕಿದಷ್ಟು ಸುಡು ಬಿಸಿಲು. ಈ ದಿನದಲ್ಲಿ ಮಳೆಯಾಗುವುದು ಅಪರೂಪ. ಈ ವರ್ಷದ ಮೊದಲು ಮಳೆಯಿಂದಾಗಿ ಬಿಸಿಲಿನ ಝಳದಿಂದ ತತ್ತರಿಸಿದವರಿಗೆ ತಂಪೆರೆಯುವತೆ ಮಾಡಿದೆ. ಮಳೆಯೊಂದಿಗೆ ಭಯಂಕಾರವಾದ ಬಿರುಗಾಳಿ, ಭಾರಿ ಪ್ರಮಾಣ ಆಲಿಕಲ್ಲು ಹಾಗು ಸಿಡಿಲಿನಿಂದಾಗಿ ಗಿಡವೊಂದಕ್ಕೆ ಬೆಂಕಿ ಹೊತ್ತು ಘಟನೆ ನಡೆದಿದೆ.
ಈ ವರ್ಷದ ಮೊದಲ ವರ್ಷ ಧಾರೆ ಜಿಲ್ಲೆಯಲ್ಲಿ ಸುರಿದಿದೆ.ಗುಡುಗು,ಗಾಳಿ, ಸಹಿತ ಮಳೆ. ಹಾಗು ಮಳೆಯೊಂದಿಗೆ ಬಿರುಗಾಳಿ ಬೀಸಿದೆ.ಕೊಪ್ಪಳ ನಗರದಲ್ಲಿ ಜಿಲ್ಲೆಯ ವಿವಿಧ ಗ್ರಾಮದಲ್ಲಿಯೂ ವರುಣನ ಆಗಮನವಾಗಿ ಮಳೆಯ ಸಿಂಚನವಾಗಿದೆ. ಇದರಿಂದಾಗಿ ಬಿಸಿಲಿನಿಂದ ಬಸವಳಿದಿದ್ದ ಧರೆಗೆ ವರುಣದೇವ ತಂಪೆರೆದಿದೆ.ಮೊದಲ ವರ್ಷಧಾರೆ ಎಂಟ್ರಿಯಿಂದಾಗಿ ರೈತರ ಮೊಗದಲ್ಲಿ ಕೊಂಚ ಹರುಷ ಮೂಡಿದೆ.ಇಂದು ಮದ್ಯಾಹ್ನ ಏಕಾಎಕಿ ಭಾರಿ ಬಿರುಗಾಳಿ ಬೀಸಿದೆ. ಈ ಭಾರಿ ಬಿರುಗಾಳಿ ನೋಡಿದವರು ನಡಗಿಸುವಂತೆ ಇತ್ತು.ಬಿರುಗಾಳಿಗೆ ಅಲ್ಲಿ ಮನೆಯ ಗಿಡ ಮರಗಳು ಬಿದ್ದಿವೆ.ಕೃಷಿ ಭೂಮಿಯಲ್ಲಿ ಕೆಲಸ ಮಾಡೋರು ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು ಪರಿದಾಡುವಂತಾಗಿತ್ತು. ಭಾರಿ ಆಲಿಕಲ್ಲುಗಳು ಬಿದ್ದಿವೆ. ಕೆಂಪು ಭೂಮಿಯ ಮೇಲೆ ಬಿದ್ದ ಆಳಿಕಲ್ಲು ಮಳೆಯಿಂದಾಗಿ ಜನರು ಆಲಿಕಲ್ಲುಗಳನ್ನು ಸಂಗ್ರಹಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಗುಡುಗು ಸಿಡಿಲಿನ ಮಳೆ ಅಬ್ಬರ ಜೋರಾಗಿತ್ತು. ಸಿಡಿಲಿನಿಂದ ತೆಂಗಿನ ಮರದಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಕುಕನೂರು ಪಟ್ಟಣದ ಭೀಮಾಂಬಿಕ ದೇವಸ್ಥಾನದ ಆವರಣದಲ್ಲಿನ ತೆಂಗಿನ ಮರದಲ್ಲಿ ಹೊತ್ತಿಕೊಂಡಿದೆ.ಕುಕನೂರು ಪಟ್ಟಣದ ತಹಸೀಲ್ದಾರ ಕಚೇರಿ ಬಳಿ ಇರುವ ಭೀಮಾಂಬಿಕ ದೇವಸ್ಥಾನದ ಬಳಿಯ ತೆಂಗಿನ ಮರಕ್ಕೆ ಹೊತ್ತಿಕೊಂಡ ಬೆಂಕಿ ಬಹಳಷ್ಟು ಹೊತ್ತು ಉರಿದಿದೆ.
ಆರಂಭದಲ್ಲಿ ಮಳೆ ತಂಪೆರೆದಿದ್ದರೂ ಮಳೆ ಅಬ್ಬರ ಮಾತ್ರ ಭಯ ಹುಟ್ಟಿಸಿವಂತೆ ಇತ್ತು.
ಎತ್ತು ಸಾವು: ಇದೇ ವೇಳೆ ಇಂದು ಮದ್ಯಾಹ್ನದ ಸಿಡಿಲು ಬಡಿದು ಎತ್ತುವೊಂದು ಸಾವನ್ನಪ್ಪಿದ ಘಟನೆ ಕೊಪ್ಪಳ ತಾಲೂಕಿನ ಓಜನಳ್ಳಿಯಲ್ಲಿ ನಡೆದಿದೆ.
ಓಜನಳ್ಳಿಯ ಶಿವಪುತ್ರಪ್ಪ ತಳಕಲ್ಲು ಎಂಬುವವರಿಗೆ ಸೇರಿದ ಎತ್ತು. ಇಂದು ಮದ್ಯಾಹ್ನ ಸುರಿದ ಮಳೆ, ಸಿಡಿಲಿಗೆ ಎತ್ತು ಬಲಿಯಾಗಿದೆ. ಗ್ರಾಮದ ಹೊರವಲಯದಲ್ಲಿದ್ದ ಶೆಡ್ಡಿಗೆ ಸಿಡಿಲು ಬಡಿದಿದ್ದು, ಶೆಡ್ಡಿನಲ್ಲಿ ಎರಡು ಎತ್ತುಗಳಿದ್ದು ಅದರಲ್ಲಿ ಒಂದು ಎತ್ತು ಸಾವನ್ನಪ್ಪಿ ಇನ್ನೊಂದು ಎತ್ತು ಅಪಾಯದಿಂದ ಪಾರಾಗಿದೆ.