ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಜ.18:
ಸಾಂಪ್ರದಾಯಿಕ ಅಂಗಿಪಂಚೆ, ಉಡುಪು ಧರಿಸಿದ ವಿದ್ಯಾಾರ್ಥಿಗಳು ಇಳಕಲ್ ಸೀರೆಯುಟ್ಟ ವಿದ್ಯಾಾರ್ಥಿನಿಯರು ಪಟ್ಟಣದ ಉಮಾ ಮಹೇಶ್ವರಿ ಕಾಲೇಜಿನ ಪ್ರವೇಶ ದ್ವಾಾರದಲ್ಲಿ ಗೋಪೂಜೆ ನೆರವೇರಿಸುವ ಮೂಲಕ ಸಂಕ್ರಾಾಂತಿ ಸಂಭ್ರಮಕ್ಕೆೆ ಅಧಿಕೃತ ಚಾಲನೆ ನೀಡಿದರು.
ಕಾಲೇಜು ಆವರಣದಲ್ಲಿ ಕಾಲಿಡುತ್ತಿಿದ್ದಂತೆ ಅಂಗಳದಲ್ಲಿ ಪೂಜೆಗೆ ಸಿದ್ಧವಾಗಿದ್ದ ರಾಶಿರಾಶಿ ರಾಗಿಭತ್ತ ಧಾನ್ಯಗಳು, ಸೀರೆಪಂಚೆಯುಟ್ಟು ಗ್ರಾಾಮೀಣ ಸೊಗಡಿನಲ್ಲಿ ಕಂಗೊಳಿಸುತ್ತಿಿದ್ದ ವಿದ್ಯಾಾರ್ಥಿಗಳು ಶಿಕ್ಷಕ ವೃಂದ ಅಪ್ಪಟ ಹಳ್ಳಿಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ಸಂಕ್ರಾಾಂತಿ ಹಬ್ಬವನ್ನು ಸಂಭ್ರಮದಲ್ಲಿ ಪಾಲ್ಗೋೋಂಡಿದ್ದರು. ಸಂಕ್ರಾಾಂತಿ ಹಬ್ಬದಂಗವಾಗಿ ರಂಗೋಲಿಗಳ ಚಿತ್ತಾಾರ ಬಾಳೆ ದಿಂಡು, ಮಾವಿನತೋರಣ, ಕಬ್ಬಿಿನ ಜಲ್ಲೆೆ ಹಾಗೂ ತೆಂಗಿನ ಗರಿಗಳಿಂದ ಶಾಲಾ ಆವರಣ ವಿಶೇಷವಾಗಿ ಅಲಂಕರಿಸಿದ್ದರಿಂದ ಹಬ್ಬಕ್ಕೆೆ ಮತ್ತಷ್ಟು ಕಳೆ ನೀಡಿದವು.
ಗೋಪೂಜೆ, ರಾಶಿ ಪೂಜೆ, ಆಹಾರ ತಯಾರಿಕೆ ಸೇರಿ ಸುಗ್ಗಿಿ ಹಬ್ಬದ ಆಚರಣೆಗಳು ಸಡಗರ ಹೆಚ್ಚಿಿಸಿದ್ದವು. ಮೆಕ್ಕೆೆಜೋಳ, ಭತ್ತ, ಕಡಲೆಕಾಳು, ಹೆಸರುಕಾಳು, ಗೋಧಿ, ಬೆಲ್ಲ, ಅಡಿಕೆ, ಸಬ್ಬಕ್ಕಿಿ, ಸಿರಿಧಾನ್ಯ, ಕೆಂಪಕ್ಕಿಿ ಸೇರಿದಂತೆ ವಿವಿಧ ಧಾನ್ಯಗಳ ರಾಶಿಗಳಿಗೆ ಪೂಜೆ ಸಲ್ಲಿಸಲಾಯಿತು. ಪೂಜೆಯ ನಂತರ ಎಲ್ಲರಿಗೂ ಎಳ್ಳುಬೆಲ್ಲ ಹಾಗೂ ಕಬ್ಬು ವಿತರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿ ಕೊಳ್ಳಲಾಯಿತು. ಮಕ್ಕಳು ಗಾಳಿಪಟ ಹಾರಿಸಿ ಸಂಭ್ರಮಿಸಿದರು.
ಕಾಲೇಜಿನ ಪ್ರಾಾಚಾರ್ಯ ಸುರೇಶ್ ಜಿ.ವಿ., ಸಂಯೋಜಕ ಸಂಗಯ್ಯ ಸಿಂದಗಿಮಠ, ಪ್ರಾಾಥಮಿಕ, ಪ್ರೌೌಢಶಾಲೆಯ ಮುಖ್ಯಗುರು ಆನಂದಹಿರೇಮಠ, ಹಾಗೂ ಸುವರ್ಣ ತೋಟದ, ಬಸವರಾಜ ಮುರೋಳ, ಮಹಾಲಕ್ಷ್ಮಿಿ ಭಂಡಾರಿ, ಶರಣಬಸು ಹೂಗಾರ, ನೇತ್ರಾಾವತಿ ಗೌಡರ, ಶ್ರೀದೇವಿ ನಾಯಕ, ಸಂಗಮೇಶ ಹಿರೇಮಠ, ಮೌನೇಶ ಬಡಿಗೇರ, ವಿಜಯಲಕ್ಷ್ಮಿಿ, ಪಾತೀಮಾ, ಆಫ್ರೀೀನ ಶಿಕ್ಷಕಿ ಹೇಮಾ ಜಲದುರ್ಗ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವಿದಾರ್ಥಿಗಳಿಗೆ ಹಬ್ಬಗಳ ಮಾಹಿತಿ ನೀಡಿದರು.
ಲಿಂಗಸೂಗೂರು: ಸಮ್ ಕಾಲೇಜಿನಲ್ಲಿ ಸಂಕ್ರಾಾಂತಿ ಸುಗ್ಗಿ ಸಡಗರ ಭಾರತೀಯ ಸಂಸ್ಕೃತಿ – ಪರಂಪರೆ ಹಬ್ಬಗಳ ಅನಾವರಣ

