ಸುದ್ದಿಮೂಲ ವಾರ್ತೆ
ಬೆಂಗಳೂರು. ಮಾ.29: ರಾಜ್ಯದಲ್ಲಿ ಚುನಾವಣೆ ಘೋಷಣೆಯಾತ್ತಿದ್ದಂತೆ ಪ್ರಜಾಕೀಯ ಪಕ್ಷದ ನಾಯಕ ಮತ್ತು ನಟ ಉಪೇಂದ್ರ ಅವರು ಕೇಳಿದ ಪ್ರಶ್ನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.
ಮೇ 10ರಂದು ಚುನಾವಣೆ ನಡೆಯುತ್ತದೆ. ಆದರೆ, ಮೇ 13ರಂದು ಫಲಿತಾಂಶ ಪ್ರಕಟವಾಗುತ್ತದೆ. ಮತ ಎಣಿಕೆಗೆ ಎರಡು ದಿನ ಬೇಕೆ? ಏಕೆಂದು ಬಲ್ಲವರು ತಿಳಿಸುತ್ತೀರಾ? ಎಂದು ಕಮೆಂಟ್ ಹಾಕಿದ್ದರು.
ಇದಕ್ಕೆ ತರಹೇವಾರಿ ಕಮೆಂಟ್ಗಳು ಬಂದಿವೆ. ಅಲ್ಲದೆ, ವಾಟ್ಸ್ಆ್ಯಪ್, ಪೇಸ್ಬುಕ್ ಮತ್ತು ವಿವಿಧ ಸಾಮಾಜಿಕ ಕಾಲತಾಣಗಳಲ್ಲಿ ಉಪೇಂದ್ರ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗಿದೆ.
* ಮಾರ್ಚ್ನಲ್ಲಿ ನಿಮ್ಮ ಚಿತ್ರ ಕಬ್ಜ ರಿಲೀಸ್ ಆಗಿದೆ. ಮೇ ನಲ್ಲಿ ಓಟಿಟಿಗೆ ಬರುತ್ತದೆ. ಇದಕ್ಕೆ ಎರಡು ತಿಂಗಳು ಸಮಯ ಬೇಕೆ ಏಕೆಂದು ತಿಳಿಸುವರಾ ಎಂಬ ಕಮೆಂಟ್ ಬಂದಿದೆ.
* ಓಟ್ ಹಾಕಿ ಹಾಕಿ ಮತಯಂತ್ರ ಬಿಸಿ ಆಗಿರುತ್ತದೆ ಅದಕ್ಕೆ ಕೂಲ್ ಆಗಬೇಕು
* ಎರಡು ದಿನ ಬಿಟ್ಟರೆ ಇವಿಎಂ ಚೇಂಜ್ ಮಾಡಲು ಸಾಧ್ಯ ಅದಕ್ಕೆ
* ಮರು ಮತದಾನದ ಅಗತ್ಯ ಇದ್ದರೆ ಅಲ್ಲೂ ಸಹ ಮತದಾನ ನಡೆದು ಮತಯಂತ್ರಗಳು ಎಣಿಕಾ ಕೇಂದ್ರ ತಲುಪಬೇಕು
* ಗುಡ್ಡಗಾಡು ಪ್ರದೇಶಗಳಲ್ಲಿನ ಮತಗಟ್ಟೆಯಿಂದ ಮತಯಂತ್ರಗಳು ಎಣಿಕಾ ಕೇಂದ್ರ ತಲುಪಬೇಕಾದರೆ ಬೆಳಗಾಗುತ್ತದೆ
* ಮತ ಎಣಿಕೆ ಮಾಡಬೇಕಾದರೆ ಕೆಲವು ದಾಖಲೆಗಳನ್ನು ಕ್ರೂಡೀಕರಿಸಬೇಕು. ಪಕ್ಷಗಳ ಪ್ರತಿನಿಧಿಗಳ ಎದುರಿನಲ್ಲಿ ಎಣಿಕೆಯಾಗಬೇಕು. ಇದೂ ಒಂದು ಪ್ರೋಸೆಸ್. ಅಷ್ಟೂ ಗೊತ್ತಿಲ್ಲವೇ ಉಪೇಂದ್ರ ನಿಮಗೆ. ನೀವೂ ಪಕ್ಷ ಕಟ್ಟಿದ್ದೀರಿ ಎಂದು ಕೆಲವರು ಕಾಲೆಳೆದಿದ್ದಾರೆ.
ಹೀಗೆ ತಮ್ಮ ಕಾಮೆಂಟ್ ಒಂದು ವಿಪರೀತ ಟ್ರೋಲ್ ಆಗುತ್ತಿದ್ದಂತೆ ಉಪೇಂದ್ರ ಮಧ್ಯಾಹ್ನದ ವೇಳೆಗೆ ಮತ್ತೊಂದು ಕಮೆಂಟ್ ಹಾಕಿದ್ದಾರೆ.
ಡಿಜಿಟಲ್ ವೋಟಿಂಗ್ ಅಲ್ವಾ ? ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ…. ಅಬ್ಬಬ್ಬಾ ಏನು ಕಾಮೆಂಟ್ಸ್ ಗಳು ?!
ವಾರೆ ವಾಹ್ … ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು…. ಎಂದು ಮರಳಿ ಕಾಲೆಳೆದಿದ್ದಾರೆ.