ಸುದ್ದಿಮೂಲ ವಾರ್ತೆ
ಹೊಸಕೋಟೆ, ಸೆ.27: ನಗರದ ನೈರ್ಮಲ್ಯ ಉಳಿಯಬೇಕಾದರೆ ಪೌರ ಕಾರ್ಮಿಕರಿಂದ ಮಾತ್ರ ಸಾಧ್ಯ ಶಾಸಕ ಶರತ್ ಬಚ್ಚೇಗೌಡ ಎಂದು ಹೇಳಿದರು.
ಅವರು ಹೊಸಕೋಟೆ ನಗರಸಭೆ ಏರ್ಪಡಿಸಿದ್ದ ಪೌರಕಾರ್ಮಿಕರಿಗೆ ಕಿಟ್, ಶೂಸ್, ಜಾಕೇಟ್, ಕೈಗಳಿಗೆ ಗ್ಲೌಸ್ ವಿತರಿಸಿ ಮಾತನಾಡಿದರು.
ನಗರದಲ್ಲಿ ನೈರ್ಮಲ್ಯ ಸ್ವಚ್ಚೆತೆ ಉಳಿಯಬೇಕಾದರೆ ಪೌರಕಾರ್ಮಿಕರ ಕೆಲಸ ಅಮೂಲ್ಯವಾದುದ್ದು. ನಗರದಲ್ಲಿ 55 ಸಾವಿರ ಮತದಾರರಿದ್ದು ಜನ ಸಂಖ್ಯೆ 31 ವಾರ್ಡುಗಳಲ್ಲಿ 85 ಸಾವಿರದಷ್ಟಿದೆ. ಹೊಸಕೋಟೆ ನಗರ ಬೆಳೆದು ದೂಡ್ಡ ನಗರವಾಗಿ ಪರಿವರ್ತನೆಗೊಂಡಿದೆ. ಸುಮಾರು ಜನ ವಲಸೆ ಬಂದವರು 15 ಸಾವಿರದಷ್ಟಿದ್ದಾರೆ. ಬಾಡಿಗೆ ಮನೆಗಳಿದ್ದು ನೈರ್ಮಲ್ಯ ಕಾಪಾಡುವುದು ದೂಡ್ಡ ಸಮಸ್ಯೆಯಾಗಿದೆ ಎಂದರು.
ಮನೆಗಳ ಮುಂದೆ ತ್ಯಾಜ್ಯ ಸಂಗ್ರಹಿಸುವ ಗಾಡಿಗಳು ಬಂದಾಗ ಕಸವನ್ನು ಅದರಲ್ಲಿಯೇ ಹಾಕಬೇಕು. ಆದರೆ, ಆ ಕಸದ ಗಾಡಿಗಳಿಗೆ ಕೊಡದೆ ರಸ್ತೆಯಲ್ಲಿಯೇ ಎಲ್ಲೆಂದರಲ್ಲಿ ಬಿಸಾಡುವುದರಿಂದ ನಗರದ ನೈರ್ಮಲ್ಯ ಹಾಳಾಗುತ್ತದೆ. ಇದು ರೋಗ ರುಜಿನಗಳಿಗೂ ಕಾರಣವಾಗುತ್ತದೆ. ಅಧಿಕಾರಿಗಳು ನೆಪ ಹೇಳದೆ ನಗರದ ನೈರ್ಮಲ್ಯ ಕಾಪಾಡುವ ಜವಾಬ್ದಾರಿ ನಿಮ್ಮದು. ಎಲ್ಲಿಯೂ ಬ್ಲಾಕ್ ಸ್ಪಾಟ್ ಬರಬಾರದು ಅನಿಟ್ಟಿನಲ್ಲಿ ಪೌರಕಾರ್ಮಿಕರಿಗೆ ಬೇಕಾದನ್ನು ಓದಗಿಸಬೇಕು ಎಂದು ಸೂಚನೆ ನೀಡಿದರು.
ಬೆಳಿಗ್ಗೆ 5 ಗಂಟೆಯಿಂದ ಅಧಿಕಾರಿಗಳು ನಿಮ್ಮ ಜೊತೆ ಇದ್ದು ಕಸವಿಲೇವಾರಿ ಮಾಡಿಸಬೇಕು. ಅದಕ್ಕಾಗಿ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರವನ್ನು ನಗರಸಭೆ ವತಿಯಿಂದ ಮಾಡಲಾಗಿದೆ. ಎಲ್ಲಾ ರಸ್ತೆಗಳಲ್ಲಿ ರಾಶಿ, ರಾಶಿ ಕಸಗಳನ್ನು ತೆರವುಗೊಳಿಸಲಾಗಿದೆ. ಇದರಲ್ಲಿ ರಾಜಕೀಯ ಮಾಡಿದರೆ ನಿರ್ಧಾಕ್ಷಿಣ್ಯ ಕ್ರಮ ತೆಗದುಕೊಳ್ಳುತ್ತೇವೆ ಎಂದರು.
ಮಳೆಗೆ ಜಾಕೆಟ್, ಯೂನಿಫಾರಂ ಎಲ್ಲಾವನ್ನು ನಗರಸಭೆಯಿಂದ ಒದಗಿಸಲಾಗಿದೆ. ನಿಮಗೆ ಗುಂಪು ಮನೆಗಳನ್ನು ಸಹ ಮಾಡಿಕೊಡಲಾಗುವುದು ಮತ್ತು 15 ಜನರಿಗೆ ಖಾಯಂ ಮಾಡಿಕೊಡು ಕೆಲಸ ನಾನು ಮಾಡಿಕೊಡುವೆ ಎಂದು ಹೇಳಿದರು.
ಪೌರಾಯುಕ್ತ ಜಾಕೀರ್ ಹಬ್ಬಾಸ್ ಮಾತನಾಡಿ, ಪೌರಕಾರ್ಮಿಕರ ದಿನಾಚಾರಣೆ ಪ್ರಯುಕ್ತ ಇಂದು ನಿಮಗೆ ಅಗತ್ಯವರುವ ಕಿಟ್ಟನ್ನು ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು 120 ಜನ ಪೌರಕಾರ್ಮಿಕರು ಕಸ ತುಂಬಿಕೊಂಡಿದ್ದು, 8 ಗಂಟೆಗಳ ಕಾಲ ಕೆಲಸ ಮಾಡಿ ನಗರವನ್ನು ಶುಚಿತ್ವ ಮಾಡಿ ನಗರದ ಜನರಿಗೆ ಉತ್ತಮ ವಾತಾವರಣ ನಿರ್ಮಿಸುವುದು ನಿಮ್ಮ ಮೇಲಿನ ಜವಾಬ್ದಾರಿಯಾಗಿದೆ. ಮುಂದಿನ ದಿನಗಳಲ್ಲಿ ಕೆ.ಆರ್ ಪುರಂ ನಿಂದ ಹೊಸಕೋಟೆ ಮೂಲಕ ನರಸಾಪುರವರೆಗೂ ವಿಸ್ತರಣೆ ಆಗುವುದರಿಂದ ಹೆಚ್ಚಿನ ಕೆಲಸಗಳನ್ನು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಕೇಶವಮೂರ್ತಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ವೆಂಕಟರಮಣಪ್ಪ, ಹರೀಶ್, ಮಧುಕುಮಾರ್, ಹೆಚ್.ಜೆ ಅರುಣ್ಕುಮಾರ್, ಮಾಜಿ ಅಧ್ಯಕ್ಷರಾದಶೀಲಾವತಿ, ನಗರಸಭೆ ಸಿಬ್ಬಂದಿ ಅಧಿಕಾರಿಗಳು ಹಾಜರಿದ್ದರು.