ಸುದ್ದಿಮೂಲ ವಾರ್ತೆ
ಬೆಂಗಳೂರು,ಜೂ.21: ಡಾ ಸರೋಜಿನಿ ಮಹಿಷಿ ವರದಿಯನ್ನು ತುರ್ತಾಗಿ ರಚನೆ ಮಾಡಿ ಅನುಷ್ಠಾನಗೊಳಿಸಬೇಕು ಎಂದು ಕನ್ನಡ ಅನುಷ್ಠಾನ ಮಂಡಳಿ ಸರ್ಕಾರವನ್ನು ಒತ್ತಾಯಿಸಿದೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಮಂಡಳಿಯ ಸಂಚಾಲಕ ಬಿ.ಕೆ.ರಾಜೀವ್, ಕನ್ನಡ ಅಸ್ಮಿತೆಯಿಂದ ಬಂದ ಸರ್ಕಾರ, ಕನ್ನಡ ಕನ್ನಡಿಗರ ಬದ್ಧತೆಗಾಗಿ ಹಾಗೂ ಕನ್ನಡಿಗರಿಗೆ ಕಡ್ಡಾಯ ಉದ್ಯೋಗದ ಹಕ್ಕು ದೊರಕಿಸುವ ಡಾ ಸರೋಜಿನಿ ಮಹಿಷಿ ವರದಿಯನ್ನು ತುರ್ತು ಕಾನೂನು ರಚನೆಮಾಡಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಸಮಗ್ರ ಕನ್ನಡ ಅಭಿವೃದ್ಧಿಯ ಅಧಿನಿಯಮ ಜಾರಿಗೊಳಿಸಲು ಪ್ರತ್ಯೇಕ ಕನ್ನಡ ನಿರ್ದೇಶನಾಲಯ ಸ್ಥಾಪಿಸಬೇಕು. ಕನ್ನಡ ಅಭಿವೃದ್ಧಿಗೆ ಕ್ರಿಯಾತ್ಮಕ ಯೋಜನೆಗಳಿಗೆ 100 ಕೋಟಿ ಮೀಸಲಿಟ್ಟು ಸಮಗ್ರ ಕನ್ನಡ ಭಾಗ್ಯವನ್ನು 6ನೇ ಗ್ಯಾರೆಂಟಿಯಾಗಿ ಘೋಷಿಸಿ ಬಜೆಟ್ ನಲ್ಲಿ ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಅನುಷ್ಠಾನ ಮಂಡಳಿಯ ಅಧ್ಯಕ್ಷ ಡಾ.ಆರ್.ಎ.ಪ್ರಸಾದ್ ಮತ್ತು ಮಂಡಳಿಯ ಸಂಚಾಲಕರಾದ ಬಿ.ಕೆ.ರಾಜೀವ್ ಹಾಗೂ ಕನ್ನಡ ಚಿಂತಕರು ಉಪಸ್ಥಿತರಿದ್ದರು.