ಟೆಹರಾನ್ ಜ.13:
ಇರಾನ್ನಲ್ಲಿ ನಡೆಯುತ್ತಿಿರುವ ಪ್ರತಿಭಟನೆ ಹಿಂಸಾಚಾರಕ್ಕೆೆ ತಿರುಗಿದ್ದು ಈವರೆಗೆ ಅಂದಾಜು 2 ಸಾವಿರ ಮಂದಿ ಮೃತಪಟ್ಟಿಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇರಾನ್ ದೇಶದ 31 ಪ್ರಾಾಂತ್ಯಗಳಲ್ಲಿ 600 ಕ್ಕೂ ಹೆಚ್ಚು ಪ್ರತಿಭಟನೆಗಳು ನಡೆದಿವೆ. ಈ ಪ್ರತಿಭಟನೆ ವೇಳೆ ಹಿಂಸಾಚಾರ ಸಂಭವಿಸಿ ಸಾವು-ನೋವು ಸಂಭವಿಸಿದೆ. ಈವರೆಗೆ 10 ಸಾವಿರಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರ್ಥಿಕ ಕುಸಿತದಿಂದ ಇರಾನ್ನಲ್ಲಿ ಆರಂಭವಾದ ಪ್ರತಿಭಟನೆ ಈಗ ಇಡೀ ರಾಷ್ಟ್ರದ ಪ್ರಾಾಂತ್ಯಗಳನ್ನು ಆವರಿಸಿದೆ.
ಇರಾನ್ನಲ್ಲಿ ನಡೆಯುತ್ತಿಿರುವ ಪ್ರತಿಭಟನೆ ಭಯೋತ್ಪಾಾದಕರ ವಿರುದ್ಧದ ಯುದ್ಧ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆೆಲೆಯಲ್ಲಿ ಇಡೀ ರಾಷ್ಟ್ರದಲ್ಲಿ ಇಂಟರ್ನೆಟ್ ಹಾಗೂ ದೂರವಾಣಿ ಸಂಪರ್ಕ ಕಡಿತಗೊಳಿಸಲಾಗಿದೆ. ಮುನ್ನೆೆಚ್ಚರಿಕೆ ಕ್ರಮವಾಗಿ ರಸ್ತೆೆಗಳನ್ನು ಮುಚ್ಚಲಾಗಿದೆ. ಸೇವೆ ನಿರ್ಬಂಧಿಸಿದೆ. ಇದರಿಂದ ಪ್ರತಿಭಟನೆ ಕುರಿತು ಹೆಚ್ಚಿಿನ ಮಾಹಿತಿ ಕಲೆ ಹಾಕುವುದು ಕಷ್ಟವಾಗುತ್ತಿಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಮಾನಗಳ ಹಾರಾಟದಲ್ಲೂ ವ್ಯತ್ಯಯ ಉಂಟಾಗಿದ್ದು, ಇರಾನ್ನಿಂದ ಅನೇಕ ವಿಮಾನಗಳು ಹಾರಾಟವನ್ನು ನಿಲ್ಲಿಸಿವೆ. ಶುಕ್ರವಾರದವರೆಗೆ ಅನೇಕ ಸೇವೆಗಳನ್ನು ರದ್ದು ಮಾಡಲಾಗಿದೆ. ಇರಾನ್ನಲ್ಲಿ ಇಂಟರ್ನೆಟ್ ಸಂಪರ್ಕ ಕಡಿತಗೊಳ್ಳುವ ಹಿನ್ನಲೆ ಪರ್ಯಾಯ ಸಂವಹನ ವಿಧಾನ ಯೋಜಿಸುವಂತೆ ಹಾಗೇ ಸುರಕ್ಷತೆಗಾಗಿ ಇರಾನ್ನಿಿಂದ ಭೂ ಮಾರ್ಗದ ಮೂಲಕ ಟರ್ಕಿ ಅಥವಾ ಅರ್ಮೇನಿಯಾಕ್ಕೆೆ ಹೋಗುವಂತೆ ಸೂಚನೆ ನೀಡಲಾಗಿದೆ.
ಬಾಕ್ಸ್
ಕೂಡಲೇ ಇರಾನ್ ತೊರೆಯಿರಿ
ಇರಾನ್ನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆೆ ತಿರುಗಿರುವುದರಿಂದ ಅಮೆರಿಕಾ ತನ್ನ ಪ್ರಜೆಗಳಿಗೆ ಕೂಡಲೇ ಇರಾನ್ ತೊರೆಯುವಂತೆ ಸೂಚಿಸಿದೆ. ಇದರ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗಿನ ರಾಜತಾಂತ್ರಿಿಕ ಸಂಬಂಧ ಮುಂದುವರೆಸಿದ್ದಾರೆ.
ಇರಾನ್ನಿಂದ ಹೊರಡುವಾಗ ಅಮೆರಿಕ ಸರ್ಕಾರದ ಸಹಾಯವನ್ನು ಅವಲಂಬಿಸದ ಯೋಜನೆ ರೂಪಿಸಿ. ಅಲ್ಲಿಂದ ಹೊರಡಲು ಸಾಧ್ಯವಾಗದಿದ್ದರೆ, ನಿಮ್ಮ ನಿವಾಸ ಅಥವಾ ಮತ್ತೊೊಂದು ಸುರಕ್ಷಿತ ಕಟ್ಟಡದೊಳಗೆ ಸ್ಥಳ ಹುಡುಕಿ. ಆಹಾರ, ನೀರು, ಔಷಧಗಳು ಮತ್ತು ಇತರೆ ಅಗತ್ಯ ವಸ್ತುಗಳ ಪೂರೈಕೆ ಖಚಿತಪಡಿಸಿಕೊಳ್ಳಿಿ ಎಂದು ಅಮೆರಿಕ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.
ಪ್ರತಿಭಟನೆಯಿಂದ ದೂರವಿರುವಂತೆ, ನಿಮ್ಮ ಸುತ್ತಮುತ್ತ ಏನಾಗುತ್ತಿಿದೆ ಎಂಬ ಎಚ್ಚರಿಕೆ ಇರಲಿ. ಸ್ಥಳೀಯ ಮಾಧ್ಯಮಗಳ ಮೂಲಕ ಬರುವ ಸುದ್ದಿಗಳ ಮೇಲೆ ಗಮನ ಇಟ್ಟಿಿರಿ. ಅದಕ್ಕೆೆ ತಕ್ಕಂತೆ ನಿಮ್ಮ ಯೋಜನೆ ರೂಪಿಸಿಕೊಳ್ಳಿಿ. ನಿಮ್ಮ ೆನ್ ಚಾರ್ಜ್ ಮಾಡಿ ಕುಟುಂಬ ಅಥವಾ ಸ್ನೇಹಿತರೊಂದಿಗೆ ನಿಮ್ಮ ಪರಿಸ್ಥಿಿತಿ ಮಾಹಿತಿ ಹಂಚಿಕೊಳ್ಳಿಿ. ಇರಾನ್ನಲ್ಲಿನ ಭದ್ರತೆಯ ಕುರಿತು ಇತ್ತೀಚಿನ ನವೀಕರಣಗಳನ್ನು ಸ್ವೀಕರಿಸಲು ಟೆಹರಾನ್ ಬೀದಿಗಳಲ್ಲಿ ಜನರನ್ನು ಕೊಲ್ಲವುದನ್ನು ಅವರು ಖಂಡಿತವಾಗಿಯೂ ನೋಡಲು ಬಯಸುವುದಿಲ್ಲ. ದುರದೃಷ್ಟವಶಾತ್, ನಾವು ಇದೀಗ ಅದನ್ನು ನೋಡುತ್ತಿಿದ್ದೇವೆ. ಆದರೆ, ಅವರ ಮೊದಲ ಆಯ್ಕೆೆ ರಾಜತಾಂತ್ರಿಿಕತೆಯಾಗಿದೆ ಎಂದು ಶ್ವೇತಭವನದ ಪತ್ರಿಿಕಾ ಕಾರ್ಯದರ್ಶಿ ಕ್ಯಾಾರೋಲಿನ್ ಲೀವಿಟ್ ತಿಳಿಸಿದ್ದಾರೆ.

