ಬೀರಪ್ಪ ಹೀರಾ ಕವಿತಾಳ, ಜ.10
ಸಮೀಪದ ಊಟಕನೂರು ಗ್ರಾಾಮದ ಅಡವಿ ಸಿದ್ದೇಶ್ವರ ಮಠದಲ್ಲಿ ಪರಮ ತಪಸ್ವಿಿಗಳು ಬಸವಲಿಂಗ ದೇಶಿಕೇಂದ್ರ ಮಹಾಶಿವಯೋಗಿಗಳ 161ನೇ ಪುಣ್ಯಸ್ಮರಣೋತ್ಸವ ಮತ್ತು ಪವಾಡ ಪುರುಷ ಮರಿಬಸವಲಿಂಗ ದೇಶಿಕೇಂದ್ರ ಮಹಾಶಿವಯೋಗಿಗಳ 35ನೇ ಪುಣ್ಯಸ್ಮರಣೋತ್ಸವದ ಪ್ರಯುಕ್ತ ಜ.11ರ ಭಾನುವಾರ ಜರುಗಲಿದೆ ಜಾತ್ರಾಾ ಮಹೋತ್ಸವ.
ಜ 09, ರಂದು ನಡೆದ ಶೇಂಗಾ ಹೋಳಿಗೆ ಬುತ್ತಿಿ ಜಾತ್ರೆೆ ಭವ್ಯ ಮೆರವಣಿಗೆಯಲ್ಲಿ ಉಟಕನೂರು ಗ್ರಾಾಮ ಸೇರಿದಂತೆ ಇತರ ಹಳ್ಳಿಿಗಳಿಂದ ಮಹಿಳೆಯರು ಮತ್ತು ಮಕ್ಕಳು ಐವತ್ತು ಸಾವಿರ ಶೇಂಗಾ ಹೋಳಿಗೆಗಳನ್ನು ಬುತ್ತಿಿ ಮಾಡಿಕೊಂಡು ಮೆರವಣಿಗೆ ಮೂಲಕ ಮಠಕ್ಕೆೆ ತಂದು ಕೊಟ್ಟರು.
ಜ.10 ರಂದು 108 ಜೋಡೆತ್ತುಗಳ ಅಲಂಕೃತ ಮೆರವಣಿಗೆ ಮತ್ತು ಪ್ರದರ್ಶನ ನಡೆಯಿತು ಮತ್ತು ರೈತರಿಗೆ ಸನ್ಮಾಾನ ಮಾಡಲಾಯಿತು. ರಕ್ತ ದಾನ ಶಿಬಿರ ಹಮ್ಮಿಿಕೊಳ್ಳಲಾಗಿತ್ತು. ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಜಾಲಹಳ್ಳಿಿ ಸಂಸ್ಥಾಾನ ಬೃಹನ್ಮಠದ ಶ್ರೀ ಷ. ಬ್ರ. ಜಯಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಾಮಿಗಳು ಭಾಗವಹಿಸಿ ಶ್ರೀ ಬಸವಲಿಂಗ ಶಿವಯೋಗಿಗಳ ಪುರಾಣ ಮಹಾಮಂಗಲ ನಡೆಯಿತು
ಶ್ರೀ ಮರೀಬಸವಲಿಂಗ ಶಿವಯೋಗಿಗಳವರ ಚರಿತ್ರೆೆ ಲೋಕಾರ್ಪಣೆ ಮಾಡಲಾಯಿತು.
ಮಹಾರಥೋತ್ಸವ : ಜ.11ರಂದು ಬ್ರಾಾಹ್ಮೀ ಮುಹೂರ್ತದಲ್ಲಿ ತಾತನ ಕರ್ತೃ ಗದ್ದುಗೆಗೆ ಜಲಾಭಿಷೇಕ, ಕ್ಷೀರಾಭಿಷೇಕ, ರುದ್ರಾಾಭಿಷೇಕ, ಪಂಚಾಮೃತಾಭಿಷೇಕ, ಸಹಸ್ರ ಬಿಲ್ವಾಾರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ವಿಶೇಷ ಪೂಜೆಗಳು ಜರುಗಲಿವೆ.
ಬೆಳಿಗ್ಗೆೆ 11 ಗಂಟೆಗೆ ಮಹಿಳೆಯರಿಂದ ಹೂವಿನ ಉಚ್ಚಾಾಯ ಮಹೋತ್ಸವ ಜರುಗಲಿದೆ. ಅಂಬಾರಿ ಮೇಲೆ ಅಗಣಿತ ಗ್ರಂಥ ಮತ್ತು ಮರಿಬಸವಲಿಂಗ ದೇಶಿಕೇಂದ್ರ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ನಡೆಯಲಿದೆ.
ಸಹಸ್ರ ಸಂಖ್ಯೆೆಯಲ್ಲಿ ಭಕ್ತರು ಭಾಗವಹಿಸಿ ತಾತನ ಕೃಪೆಗೆ ಪಾತ್ರರಾಗಬೇಕು ಎಂದು ಮರಿಬಸವರಾಜ ದೇಶಿಕೇಂದ್ರ ಸ್ವಾಾಮೀಜಿ ತಿಳಿಸಿದರು.
ವಿವಿಧ ಮಠಾಧೀಶರು ಭಾಗಿಯಾಗಲಿದ್ದಾಾರೆ.

