ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.17: ಭಾರತದ ಮೊದಲ ಮಕ್ಕಳ ಪ್ರಿವೆಂಟಿವ್ ಪೀಡಿಯಾಟ್ರಿಕ್ ಡೆಂಟಿಸ್ಟ್ರಿ ಕ್ಲಿನಿಕ್ ಆಗಿರುವ ಡಾ.ಶಿಫಾ ಅವರ ಕನಸಿನ ಕೂಸು ‘ವಿ ಲಿಟಲ್’ ನೂತನ ದಂತ ವೈದ್ಯ ಕ್ಲಿನಿಕ್ ಬೆಂಗಳೂರಿನ ಇಂದಿರಾನಗರದಲ್ಲಿ ಪ್ರಾರಂಭವಾಗಿದೆ.
ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಉದ್ಘಾಟನೆ ನೆರವೇರಿಸಿದರು.
ದಂತ ವೈದ್ಯರ ಬಳಿ ಹೋಗುವುದು ಮಕ್ಕಳು ಮತ್ತು ಪೋಷಕರಿಗೆ ನೋವುಂಟು ಮಾಡುವ ಅನುಭವವಾಗಿದೆ. ಆಸ್ಪತ್ರೆಯ ಶುಷ್ಕ ವಾತಾವರಣವು ಮಕ್ಕಳಲ್ಲಿ ಭಯವುಂಟುಮಾಡುತ್ತದೆ ಮತ್ತು ಅವರು ಅನಗತ್ಯವಾಗಿ ಒತ್ತಡಕ್ಕೆ ಸಿಲುಕುವಂತೆ ಮಾಡುತ್ತದೆ. ಈ ಆತಂಕದ ಪರಿಸ್ಥಿತಿಯನ್ನು ಬದಲಿಸಲು 4,000 ಚದರ ಅಡಿ ಒಳಾಂಗಣದಲ್ಲಿನ ವಿನ್ಯಾಸವು ಮಕ್ಕಳಿಗೆ ಸಂತಸದ ಅನುಭವ ನೀಡಲಿದೆ. ಕ್ಲಿನಿಕ್ನಲ್ಲಿರುವ ಏರೋಪ್ಲೇನ್ ಸ್ಟಿಮ್ಯುಲೇಟರ್ ಮಕ್ಕಳ ಸಂಭ್ರಮಕ್ಕೆ ಹೊಸ ರೆಕ್ಕೆ ಮೂಡಿಸಲಿದೆ. ಅದ್ಧೂರಿ ಆಟದ ಪ್ರದೇಶವು ಮಕ್ಕಳ ಚಟುವಟಿಕೆಯು ವಿನೋದ ಮತ್ತು ಸಾಹಸಮಯದಿಂದ ಕೂಡಿರುವಂತೆ ಮಾಡುತ್ತದೆ. ಸ್ನೇಹಮಯಿ ವೈದ್ಯರು ಮತ್ತು ನಗುಮೊಗದ ವೈದ್ಯಕೀಯ ಸಿಬ್ಬಂದಿ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದರ ಜತೆಗೆ, ಅವರು ತಮ್ಮ ದಂತ ಸಮಸ್ಯೆಯನ್ನು ಸಕಾರಾತ್ಮಕ ರೀತಿಯಲ್ಲಿ ಪರಿಹರಿಸಿಕೊಳ್ಳಲು ಸಹಾಯ ಮಾಡುತ್ತಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಾನಿಯಾ ಮಿರ್ಜಾ, ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ದಂತ ಆರೈಕೆಯನ್ನು ಹುಡುಕುತ್ತಿರುವ ಪೋಷಕರಿಗೆ ವಿ ಲಿಟಲ್ ಉತ್ತಮ ಆಯ್ಕೆಯಾಗಿದೆ ಎಂದು ಅವರು ಹೇಳಿದರು.
ಡಾ.ಶಿಫಾ ಮಾತನಾಡಿ, ದಂತ ಆರೈಕೆಯ ಹಲವು ಸಮಸ್ಯೆಗಳು ಹಲ್ಲುಗಳ ಜೋಡಣೆಯಲ್ಲಿ ವ್ಯತ್ಯಾಸ, ನಾಲಗೆಯ ಒತ್ತಡ, ಮುಖದ ನಗು, ಮಾತು ಮತ್ತು ನಿದ್ರೆಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿವೆ. ದಂತ ನೈರ್ಮಲ್ಯ, ಆಹಾರ ಪದ್ಧತಿಯಲ್ಲಿನ ಬದಲಾವಣೆ, ಮೌಖಿಕ ನಿರ್ಬಂಧಗಳು, ಮೈಫಂಕ್ಷನಲ್ ಅಭ್ಯಾಸ ಕ್ರಮಗಳ ಮೂಲಕ ಅವುಗಳನ್ನು ಸರಿಪಡಿಸಬಹುದು ಎಂದು ಹೇಳಿದರು.