ಸುದ್ದಿಮೂಲ ವಾರ್ತೆ ಭಾಲ್ಕಿ, ಡಿ.15
ಶರಣರ ವಚನಗಳು ನಮ್ಮ ಬದುಕಿಗೆ ಹಿಡಿದ ಕೈಗನ್ನಡಿ. ಅವರ ಜೀವನ ಮತ್ತು ವಚನಗಳ ಅಧ್ಯಯನ ಮಾಡಿದರೆ, ನಮ್ಮ ಬದುಕನ್ನು ಹೇಗೆ ಉನ್ನತೀಕರಿಸಿಕೊಳ್ಳಬೇಕು ಎಂಬುದು ತಿಳಿಯುತ್ತದೆ ಎಂದು ಹಿರೇಮಠ ಸಂಸ್ಥಾಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾಾನದ ವತಿಯಿಂದ ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ 136ನೇ ಜಯಂತ್ಯುತ್ಸವ ನಿಮಿತ್ತ ಭಾನುವಾರ ಆಯೋಜಿಸಿದ್ದ ವಚನ ದರ್ಶನ ಪ್ರವಚನ ಉದ್ಘಾಾಟನಾ ಸಮಾರಂಭದ ಸಾನ್ನಿಿಧ್ಯ ವಹಿಸಿ ಅವರು ಮಾತನಾಡಿದರು.
ಮುಂಜಾನೆಯ ಮಂಜಿನಲ್ಲಿ ಮುಂದಿನ ದಾರಿ ಕಾಣುವುದಿಲ್ಲ ಸೂರ್ಯನ ಕಿರಣಗಳು ಬಂದಾಗ ಮಂಜು ಸರಿದು ದಾರಿ ಸ್ಪಷ್ಟವಾಗಿ ಕಾಣುತ್ತದೆ. ಬದುಕಿನಲ್ಲಿ ಅನೇಕ ಜಂಜಡ ತೊಂದರೆಗಳು ಅಶಾಂತಿ ನೆಲೆ ಮಾಡಿ ಮುಂದಿನ ದಾರಿ ಕಾಣದಿದ್ದಾಗ, ಪ್ರವಚನಗಳ ಮೂಲಕ ಜ್ಞಾನ ಸೂರ್ಯನ ಕಿರಣಗಳಿಂದ ಬದುಕಿನ ಮುಂದಿನ ದಾರಿ ಕಾಣುತ್ತದೆ. ಹಾಗಾಗಿ ಇಂತಹ ಪ್ರವಚನಗಳು ನಮ್ಮ ಬದುಕಿಗೆ ಅತ್ಯವಶ್ಯ ಎಂದು ತಿಳಿಸಿದರು.
ಪ್ರವಚನಕಾರರಾದ ಪ್ರಭುಲಿಂಗ ದೇವರು ಮಾತನಾಡಿ ಮನೆಯಲ್ಲಿ ಕಸ ಬಿದ್ದಾಗ ಪ್ರತಿದಿನ ಸ್ವಚ್ಛಪಡಿಸಿಕೊಳ್ಳುವಂತೆ, ಮನದ ಮೈಲಿಗೆ ತೊಳೆಯಲು ಇಂತಹ ಪ್ರವಚನಗಳು ಪರಿಣಾಮಕಾರಿ ಕೆಲಸ ಮಾಡುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಾಟಿಸಿದ ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಂಗಮೇಶ ಗಾಮಾ ಮಾತನಾಡಿ, ಶರಣರ ಮಹಾತ್ಮರ ಬದುಕು ಅವರ ನಡೆ-ನುಡಿಗಳು ನಮ್ಮ ಬದುಕಿನ ಅನೇಕ ಸಮಸ್ಯೆೆಗಳಿಗೆ ಪರಿಹಾರ ನೀಡುತ್ತವೆ. ಆದ್ದರಿಂದ ಜನತೆ ಹೆಚ್ಚು ಇಂತಹ ಪ್ರವಚನಗಳನ್ನು ಆಲಿಸಬೇಕು ಎಂದರು.
ಚನ್ನಬಸವಾಶ್ರಮ ಪರಿಸರದ ಸಂಚಾಲಕ ವಿಶ್ವನಾಥಪ್ಪ ಬಿರಾದರ್ಬಸವಗುರುವಿನ ಪೂಜೆ ನೆರವೇರಿಸಿದರು. ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಬಸವರಾಜ ಮರೆ ಅವರು ಧರ್ಮ ಗ್ರಂಥ ಪಠಣ ಮಾಡಿದರು. ಪ್ರವಚನ ಸೇವಾ ಸಮಿತಿಯ ಅಧ್ಯಕ್ಷ ಶಿವಕುಮಾರ ಕಮಠಾಣೆ ಸ್ವಾಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು.
ವಚನ ದರ್ಶನ ಪ್ರವಚನ ಉದ್ಘಾಟನೆ ವಚನಗಳ ಅಧ್ಯಯನದಿಂದ ಬದುಕು ಉನ್ನತಿ – ಗುರುಬಸವ ಪಟ್ಟದ್ದೇವರು ಹೇಳಿಕೆ

