ಸುದ್ದಿಮೂಲ ವಾರ್ತೆ ಹೊಸಪೇಟೆ, ಡಿ.18:
ವಚನ ಸಾಹಿತ್ಯದಲ್ಲಿ ಅಡಗಿರುವ ಜೀವನ ಮೌಲ್ಯಗಳು ಮತ್ತು ಸಂ ದೇಶಗಳನ್ನು ಅರಿತರೆ ವ್ಯಕ್ತಿಿತ್ವ ವಿಕಸನಕ್ಕೆೆ ಉತ್ತಮ ಮಾರ್ಗವಾಗಲಿದೆ ಎಂದು ಹಂ ಪಿ ಕನ್ನಡ ವಿಶ್ವವಿದ್ಯಾಾಲಯದ ಕುಲಪತಿ ಡಿ.ವಿ.ಪರಮಶಿವಮೂರ್ತಿ ಹೇಳಿದರು.
ನಗರದ ಶ್ರೀಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನ ಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಚಕೋರ ಸಾಹಿತ್ಯ ವಿಚಾರ ವೇದಿಕೆ ಹಾಗೂ ಶ್ರೀಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಾಸ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದ ಅವರು, ಸಾಹಿತ್ಯದ ಪ್ರಕಾರಗಳ ಲ್ಲಿ ವಚನ ಸಾಹಿತ್ಯ ತುಂಬಾ ಗಮನ ಸೆಳೆಯುವ ಪ್ರಾಾಮುಖ್ಯತೆಯನ್ನು ಹೊಂದಿದೆ. ತಂತ್ರಜ್ಞಾನ ಮತ್ತು ಕೃತಕಬುದ್ಧಿಿಮತ್ತೆೆ ಯುಗದಲ್ಲಿ ವಚನಗಳ ಓದುಗರ ಸಂಖ್ಯೆೆ ಕ್ಷೀಣವಾಗಿದೆ. ವಚನಗಳನ್ನು ಓದುವ ಮೂಲಕ ಪ್ರತಿಯೊಬ್ಬರು ಅವುಗಳ ಮಹತ್ವವನ್ನು ತಿಳಿದುಕೊಳ್ಳಬೇಕಿದೆ. ಕಾಲಹರಣ ಮತ್ತು ಕಾಟಾಚಾರಕ್ಕೆೆ ವಚನಗಳನ್ನು ಓದುವ ಬದಲಾಗಿ ವಚನಗಳ ತಾತ್ಪರ್ಯವನ್ನು ಸರಿಯಾಗಿ ಅರ್ಥೈಸಿಕೊಂಡರೆ ಸ್ವಯಂ ಪ್ರೇೇರಿತ ಬದಲಾವಣೆ ಸಾಧ್ಯವಾಗಲಿದೆ. ಕನ್ನಡ ವಚನಕಾರರು ಅದ್ಭುತ ಸಾಹಿತ್ಯವ ನ್ನು ವಿಶ್ವಕ್ಕೆೆ ಕೊಡುಗೆಯಾಗಿ ನೀಡಿರುವುದು ನಿಜಕ್ಕೂ ಶ್ಲಾಾಘನೀಯ.ಅಣ್ಣ ಬಸವ ಣ್ಣನವರ ಪ್ರಸಿದ್ಧ ವಚನವಾದ ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡೆಬೇಡ, ತನ್ನ ಬಣ್ಣಿಿಸಬೇಡ, ಇದಿರ ಹಳಿಯ ಬೇಡ, ಇದೇ ಅಂತರಅಗ ಶುದ್ದಿ, ಇದೇ ಬಹಿರಂಗ ಶುದ್ದಿಯ ವಚನದ ಈ ಸಾಲುಗಳ ಸಂಕ್ಷಿಪ್ತ ಅರ್ಥವನ್ನು ವಿದ್ಯಾಾರ್ಥಿಗಳಿಗೆ ತಿಳಿಪಡಿಸಿದರು.
ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯ ಸಂಚಾಲಕ ಡಾ.ಮಲ್ಲಕಾರ್ಜುನ ಬಿ. ಮಾನ್ಪಡೆ ಮಾತನಾಡಿ ಶ್ರೀಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಾಂಶುಪಾಲ ಡಾ.ಜಿ.ನಾರಾಯಣ ಹೆಬಸೂರ ಮಾತನಾಡಿ ಚಿಂತಕರು, ವಿಶ್ರಾಾಂತ ಪ್ರಾಾಧ್ಯಾಾಪಕ ಡಾ.ಮೃತ್ಯುಂಜಯ ರುಮಾಲೆ ವಚನ ಸಾಹಿತ್ಯದ ಬಗ್ಗೆೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀಶಂಕರ್ ಆನಂದ್ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸಿ.ದೇವಣ್ಣ, ಕನ್ನಡ ವಿಭಾಗದ ಪ್ರಾಾಧ್ಯಾಾಪಕ ಡಾ.ನಾಗಣ್ಣ ಕಿಲಾರಿ, ಚಕೋರ ಸಾಹಿತ್ಯ ವಿಚಾರ ವೇದಿಕೆ ಸಂಚಾಲಕ ವೆಂಕಟೇಶ ಬಡಿಗೇರ, ಮುದೇನೂರು ಉಮಾಮಹೇಶ್ವರ ಸೇರಿದಂತೆ ವಿವಿಧ ವಿಷಯಗಳ ಪ್ರಾಾಧ್ಯಾಾಪಕರು ಮತ್ತು ವಿದ್ಯಾಾರ್ಥಿಗಳು ಭಾಗವಹಿಸಿದ್ದರು.
ವಚನ ಸಾಹಿತ್ಯ ಅರಿತರೆ ವ್ಯಕ್ತಿತ್ವ ವಿಕಸನ : ಡಿ.ವಿ.ಪ

