ಸುದ್ದಿಮೂಲ ವಾರ್ತೆ ಮಾನ್ವಿಿ, ಡಿ.28:
ನಮ್ಮಲ್ಲಿರುವ ಅರಿವನ್ನು ನಾವು ಗುರುವಾಗಿಸಿಕೊಳ್ಳಲು ಬಸವಾದಿ ಶರಣರ ವಚನಗಳು, ಸತ್ಸಂಗ ಹಾಗೂ ಉಪನ್ಯಾಾಸಗಳು ನೆರವಾಗುತ್ತವೆ ಎಂದು ಸುದ್ದಿಮೂಲ ಸಂಪಾದಕ, ಶರಣ ಸಾಹಿತಿ ಹಾಗೂ ಲೇಖಕ ಬಸವರಾಜಸ್ವಾಾಮಿ ಹೇಳಿದರು.
ಶನಿವಾರ ಮಾನ್ವಿಿ ಪಟ್ಟಣದ ಬಿ.ವಿ.ಆರ್ ಇ-ಟೆಕ್ನೋೋ ಸ್ಕೂಲ್ ಆವರಣದಲ್ಲಿ ಶ್ರೀ ಬಸವ ಸೇವಾ ಪ್ರತಿಷ್ಠಾಾನ, ಸುದ್ದಿಮೂಲ ದಿನಪತ್ರಿಿಕೆ ರಾಯಚೂರು, ಬಸವ ಕೇಂದ್ರ ಮಾನ್ವಿಿ, ಶರಣ ಸಾಹಿತ್ಯ ಪರಿಷತ್ತು ಮಾನ್ವಿಿ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮಾನ್ವಿಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆೆಗಳ ಒಕ್ಕೂಟ ಮಾನ್ವಿಿ ಇವರ ಸಂಯುಕ್ತಾಾಶ್ರಯದಲ್ಲಿ ಹಮ್ಮಿಿಕೊಂಡಿದ್ದ ಬಸವರಾಜಸ್ವಾಾಮಿಯವರ ಬಸವ ಗೀತೆ, ಸತ್ಯ ಸಂವಾದ (9 ಸಂಪುಟಗಳ ಗುಚ್ಚ) ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿಿದ್ದರು.
ಬಸವಣ್ಣನವರನ್ನು ಸಾಹಿತಿಗಳು, ದಾರ್ಶನಿಕರು, ಚಿಂತಕರು, ಪ್ರಗತಿಪರರು ಒಂದೊಂದಾಗಿ ಅರ್ಥೈಸಿಕೊಂಡು ವ್ಯಾಾಖ್ಯಾಾನಿಸಿದ್ದಾರೆ. ಆದರೆ ಬಸವಣ್ಣವನರು ತಮ್ಮ ಅರಿವನ್ನು ಲಿಂಗಯ್ಯನೆಂದು, ಸಂಗಯ್ಯನೆಂದು ಅಂತರಂಗದ ಮೂಲಕ ಭಾವಿಸಿ ಅರಿವನ್ನು ಗುರುವಾಗಿಸಿಕೊಂಡವರು. ಬಸವಣ್ಣವನರ ಮೂಲಕ ಪಡೆದ ಅರಿವಿಗೆ ಶರಣಾದವರು ಶರಣರೆನಿಸಿಕೊಂಡರು. ಇಡೀ ಜಗತ್ತಿಿನಲ್ಲಿ 770 ಜನರ ಒಂದೇ ಬಾರಿಗೆ ಬಸವಣ್ಣನವರ ಪ್ರಭಾವಕ್ಕೆೆ ಒಳಗಾಗಿ ಅರಿವಿಗೆ ಶರಣಾಗಿರುವುದು ದಾಖಲೆಯಾಗಿದೆ . ನಮ್ಮ ಬದುಕಿಗೆ ಬಸವಾದಿ ಶರಣರು ತಮ್ಮ ವಚನಗಳ ಮೂಲಕ 22 ಸಾವಿರ ಸೂತ್ರಗಳನ್ನು ನೀಡಿದ್ದಾರೆ. ಅರಿವಿಗೆ ಹೋಗಿ ಅಜ್ಞಾನದ ಮರೆವನ್ನು ತೆಗೆದು ಹಾಕಿದವರು ಶರಣರು ಎನ್ನಿಿಸಿಕೊಳ್ಳುತ್ತಾಾರೆ. ಶರಣರು ತಿಳಿಸಿದಂತೆ ಅರಿವು ಎಲ್ಲರಲ್ಲಿಯೂ ಇದೆೆ. ಇಂತಹ ಅರಿವನ್ನು ಗುರುವಾಗಿಸಿಕೊಂಡು ಶರಣರ ಸೂತ್ರಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಈ ಸೂತ್ರಗಳು ನಮ್ಮನ್ನು ಅಂತರಂಗದ ಕಡೆ ಕರೆದುಕೊಂಡು ಹೋಗುತ್ತವೆ. ಶರಣರು ತಿಳಿಸಿದಂತೆ ನಾವು ಉಪಜೀವನಕ್ಕಾಾಗಿ ಮಾಡುವ ಕಾಯಕವು ಕಾಯಕವಲ್ಲ.ಸೂಕ್ಷ್ಮ ಕಾಯ ಕಾರಣ ಕಾಯದೊಳೊಂದಾಗುವುದೇ ಕಾಯಕವಾಗಿದೆ. ಇದು ಸೂಕ್ಷ್ಮಾಾತಿ ಸೂಕ್ಷ್ಮವಾದುದು. ಇಂತಹ ಸೂಕ್ಷ್ಮ ಕಾಯ ಕಾರಣ ಕಾಯದೊಂದಿಗೆ ಒಂದಾಗುವುದೇ ಪರಕಾಯ ಪ್ರವೇಶ ಎಂದು ಶಂಕರಾಚಾರ್ಯರು ಕೂಡಾ ಕರೆದಿದ್ದಾಾರೆ.
ಪುಸ್ತಕ ಲೋಕಾರ್ಪಣೆ ಮಾಡಿ , ಪುಸ್ತಕದ ಬಗ್ಗೆೆ ನಿವೃತ್ತ ಉಪನ್ಯಾಾಸಕ ಬಿ.ಜಿ.ಹುಲಿ ಮಾತನಾಡಿ ಸಾಮಾನ್ಯ ಜನರು ಕೂಡಾ 12 ನೇ ಶತಮಾನದಲ್ಲಿ ಸಮ ಸಮಾಜ ಕಟ್ಟುವ ಮೂಲಕ ಶರಣರು ಮಹಾಕ್ರಾಾಂತಿಯನ್ನೇ ಮಾಡಿದರು ಹಾಗೂ ಮೂಲಕ ಅಂಗ, ಲಿಂಗಾಂಗ ಸಾಮರಸ್ಯದ ಅರಿವನ್ನು ನೀಡಿದ ಬಸವಣ್ಣನವರನ್ನು ಆಧ್ಯಾಾತ್ಮಿಿಕ ನೆಲೆಗಟ್ಟಿಿನಲ್ಲಿ ನಮಗೆ ದರ್ಶನವನ್ನು ಮಾಡಿಸುವ ಉದ್ದೇಶದಿಂದ ಬಸವರಾಜಸ್ವಾಾಮಿಯವರು ತಮ್ಮ ಅರಿವಿನ ಜೀವನದ ಅನುಭವಗಳನ್ನು ಬಸವ ಗೀತೆ ಸತ್ಯ ಸಂವಾದ ಕೃತಿಯ ಮೂಲಕ ತಿಳಿಸಿಕೊಟ್ಟಿಿರುವುದು ಶ್ಲಾಾಘನೀಯ ಎಂದು ಹೇಳಿದರು.
ನಿವೃತ್ತ ಶಿಕ್ಷಣಾಧಿಕಾರಿ ಡಿ.ಜಿ.ಕರ್ಕಿಹಳ್ಳಿಿ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಬಸವ ಕೇಂದ್ರದ ಗೌರವಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಈ.ನರಸಿಂಹ ಪ್ರಾಾಸ್ತಾಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಕೃತಿಯ ಲೇಖಕ ಹಾಗೂ ಸುದ್ದಿಮೂಲ ಪತ್ರಿಿಕೆಯ ಸಂಪಾದಕರಾದ ಬಸವರಾಜಸ್ವಾಾಮಿ ಇವರನ್ನು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾಾನಿಸಲಾಯಿತು.
ವೇದಿಕೆಯ ಮೇಲೆ ಬಸವ ಕೇಂದ್ರದ ಅಧ್ಯಕ್ಷ ಜಿ.ಎಂ.ರಂಗಪ್ಪ ಮೇದಾ, ಬಸವ ಕೇಂದ್ರದ ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮೀ ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶರಣಬಸವ ನೀರಮಾನ್ವಿಿ, ಖಾಸಗಿ ಶಿಕ್ಷಣ ಸಂಸ್ಥೆೆಗಳ ಒಕ್ಕೂಟದ ಅಧ್ಯಕ್ಷ ರಾಜಾ ಸುಭಾಶ್ಚಂದ್ರ ನಾಯಕ, ನಿಕಟಪೂರ್ವ ಅಧ್ಯಕ್ಷ ಹೆಚ್.ಶರ್ುದ್ದೀನ್ ಪೋತ್ನಾಾಳ್, ಕಸಾಪ ಮಾಜಿ ಅಧ್ಯಕ್ಷ ಮೂಕಪ್ಪ ಕಟ್ಟಿಿಮನಿ, ಬಿವಿಆರ್ ಶಿಕ್ಷಣ ಸಂಸ್ಥೆೆಯ ಅಧ್ಯಕ್ಷ ಬಿ.ವಿ.ರೆಡ್ಡಿಿ ಉಪಸ್ಥಿಿತರಿದ್ದರು.
ಗಾಯಕ ರಾಮು ಹೊಳೆಯಪ್ಪ ಪ್ರಾಾರ್ಥನೆ ಹಾಡಿದರು. ಕಸಾಪ ಅಧ್ಯಕ್ಷ ಶರಣಬಸವ ನೀರಮಾನ್ವಿಿ ಸ್ವಾಾಗತಿಸಿದರು. ಸುದ್ದಿಮೂಲ ವರದಿಗಾರ ಪಿ.ಪರಮೇಶ ನಿರೂಪಿಸಿ, ವಂದಿಸಿದರು.
ಮಾನ್ವಿಯಲ್ಲಿ ಬಸವ ಗೀತೆ ಗ್ರಂಥ ಲೋಕಾರ್ಪಣೆ ಅರಿವನ್ನು ಗುರುವಾಗಿಸಿಕೊಳ್ಳಲು ವಚನ, ಸತ್ಸಂಗ, ಉಪನ್ಯಾಸಗಳು ನೆರವಾಗುತ್ತವೆ-ಬಸವರಾಜಸ್ವಾಮಿ

